ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಎಂಬುದು ದೈನಂದಿನ ವಿದ್ಯಮಾನವಾಗಿದೆ. ಬದುಕು ದುಸ್ತರವಾಗುತ್ತಿದೆ. ಆದರೆ, ರಾಜ್ಯದಲ್ಲಿ ಬೆಲೆ ಏರಿಕೆಗೆ ನೀಡು ತ್ತಿರುವ ಸಮರ್ಥನೆಗಳು ಆಶ್ಚರ್ಯ ಮೂಡಿ ಸುತ್ತಿವೆ. ಈ ವರ್ಷ ಎರಡನೇ ಬಾರಿ ಹಾಲಿನ ಬೆಲೆ ಏರಿಸಲಾಗಿದೆ. ಇದಕ್ಕೆ ಕೆಎಂಎಫ್ ಹಾಗೂ ಪರೋಕ್ಷವಾಗಿ ಸರ್ಕಾರದ ವಾದವೇನೆಂದರೆ, ‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ.

ಕೆಎಸ್‌ಆರ್‌ಟಿಸಿ ದರ ಏರಿಕೆ ಸಂದರ್ಭ ಗಳಲ್ಲೂ ಇದೇ ಹೇಳಿಕೆ ನೀಡಲಾಯಿತು. ಇನ್ನೂ ಹಲವಾರು ಏರಿಕೆಗಳ ಸಂದರ್ಭದಲ್ಲಿಯೂ ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯದ ದರವನ್ನು ಹೋಲಿಸಿ, ನಮ್ಮ ಏರಿಕೆ ಹೆಚ್ಚೇನಲ್ಲ ಎಂಬಂತೆ ಅಧಿಕಾರಿಗಳು ವಾದ ಮುಂದಿಟ್ಟು ದರ ಏರಿಕೆ ಯನ್ನು ಸಮರ್ಥಿಸುತ್ತಾರೆ. ದರ ಏರಿಕೆಯಿಂದ ಜನರ ಬದುಕು ಕಠಿಣವಾಗುತ್ತಿರುವುದು ಇವರಿಗೆ ಮುಖ್ಯವಲ್ಲ.

ಪಕ್ಕದ ಗೋವಾ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಕರ್ನಾಟಕಕ್ಕಿಂತ ` 10ರಷ್ಟು ಕಡಿಮೆ ಇದೆ. ಕೇರಳ ಮತ್ತು ಆಂಧ್ರದಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ನಮ್ಮ ರಾಜ್ಯಕ್ಕಿಂತ ಬಹಳ ಕಡಿಮೆ ಇದೆ. ತಮಿಳುನಾಡಿನ ಸರ್ಕಾರಿ ಹೋಟೆಲ್‌ಗಳಲ್ಲಿ ಐದು ರೂಪಾಯಿಗೆ ಊಟ ದೊರಕುತ್ತದೆ. ನಮ್ಮ ಸರ್ಕಾರವೂ ಈ ರಾಜ್ಯಗಳಿಗೆ ತನ್ನನ್ನು ಹೋಲಿಕೆ ಮಾಡಿ ಇಲ್ಲಿಯೂ ದರಗಳನ್ನು ಇಳಿಸಬಹುದಲ್ಲವೇ?

ದರ ಏರಿಕೆಗೆ ಮಾತ್ರ ಏಕೆ ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯವನ್ನು ಹೋಲಿಸಲಾಗುತ್ತಿದೆ? ಬೆಲೆ ಇಳಿಸಲೂ ಇದೇ ರೀತಿ ಯೋಚಿಸಬಹುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.