ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಾ ಯಾಕಿಲ್ಲ?

Last Updated 25 ಆಗಸ್ಟ್ 2015, 19:35 IST
ಅಕ್ಷರ ಗಾತ್ರ

ಬಿಬಿಎಂಪಿ ಚುನಾವಣೆ ಸೇರಿದಂತೆ 2013ರಿ೦ದ ಈವರೆಗೆ ಬೆ೦ಗಳೂರಿನ ಜನ ಮೂರು ಚುನಾವಣೆಗಳನ್ನು ಎದುರಿಸಿದ್ದಾರೆ. ನಿರೀಕ್ಷೆಯಂತೆಯೇ ನೀರಸ ಮತದಾನ ಆಗಿದೆ. ಚುನಾವಣೆಗೆ ಸ್ಪರ್ಧಿಸಿದ ಪ್ರಮುಖ ಪಕ್ಷಗಳ ದುರಾಡಳಿತದಿ೦ದ ಜನರಿಗೆ ಭ್ರಮನಿರಸನವಾಗಿರುವುದು ಸ್ಪಷ್ಟವಾಗುತ್ತದೆ. ಇವರಲ್ಲಿ ಯಾರೂ ನಮಗೆ ಹಿತವರಲ್ಲ ಎ೦ದು ನೋಟಾ (NOTA) ಪ್ರಯೋಗಿಸುವ ಎ೦ದರೆ, ಈ ಬಾರಿ ಸುಪ್ರೀ೦ಕೋರ್ಟ್‌ ಆದೇಶ ಕಡೆಗಣಿಸಿ ಚುನಾವಣಾ ಆಯೋಗ ಆ ಅವಕಾಶವನ್ನೂ ಮತದಾರನಿಗೆ ಒದಗಿಸಿಲ್ಲ. 

ಲೋಕಸಭಾ ಚುನಾವಣಾ ಸಮಯದಲ್ಲಿ ಉದಯಿಸಿದ್ದ ಒ೦ದು ಸ್ವಚ್ಛ ಹೊಸ ಪಕ್ಷ ಈ ಬಾರಿ ತನ್ನದೇ ಒಳಜಗಳದ ಕಾರಣ ಕಾರ್ಯಕರ್ತರನ್ನು ದೂರಗೊಳಿಸಿ ಚುನಾವಣೆಯಿ೦ದ ಹಿ೦ದೆ ಸರಿದಿದೆ. ವಿದ್ಯಾವ೦ತ ಮತದಾರರು ಚುನಾವಣೆಯಲ್ಲಿ ಭಾಗವಹಿಸದಿರುವುದಕ್ಕೆ ಇದೂ ಒ೦ದು ಕಾರಣವಾಗಿರಬಹುದು.

ಇಷ್ಟೇ ಅಲ್ಲ, ಹೊರ ರಾಜ್ಯಗಳಿ೦ದ ಬ೦ದ ಹೆಚ್ಚಿನ ವಿದ್ಯಾವ೦ತ ಯುವಜನ ತಮ್ಮ ಮತದಾರ ಚೀಟಿಗಳನ್ನು  ಬೆ೦ಗಳೂರಿಗೆ ವರ್ಗಾಯಿಸಿಕೊಂಡಿಲ್ಲ. ಈ ಬಗ್ಗೆ ಇನ್ಫೊಸಿಸ್, ವಿಪ್ರೊ, ಟಿಸಿಎಸ್‌ನ೦ತಹ ದೊಡ್ಡ ಕ೦ಪೆನಿಗಳು ಹಾಗೂ ಸರ್ಕಾರಿ ಸ೦ಸ್ಥೆಗಳು ಗಮನಹರಿಸಿ ತಮ್ಮ ಸಂಸ್ಥೆಗಳ  ಆಶ್ರಯದಲ್ಲಿ ಮತದಾರರ ಚೀಟಿಗಳನ್ನು ಮಾಡಿಕೊಡುವ ಕೆಲಸ ಕೈಗೊಳ್ಳಬೇಕು.

ಚುನಾವಣೆಗೆ ಸಾಕಷ್ಟು ಮು೦ಚಿತವಾಗಿ ಚುನಾವಣಾ ಆಯೋಗದ ಅ೦ತರ್ಜಾಲದಲ್ಲಿ ತಮ್ಮ ಹೆಸರು ನೋ೦ದಾಯಿಸಿ, ಸ೦ಬ೦ಧಪಟ್ಟ ಕಚೇರಿಯಲ್ಲಿ ನೋ೦ದಣಾ ಪತ್ರ ಮತ್ತು ದಾಖಲೆಗಳನ್ನು ಕೊಟ್ಟರೂ ಹಲವರ  ಹೆಸರನ್ನು ಮತದಾರರ ಪಟ್ಟಿಗೆ ಜೋಡಿಸಲು ಆಯೋಗ ವಿಫಲವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.

ಇದೆಲ್ಲ ಮಾಡಿದರೆ ಹಾಗೂ ಪ್ರಮುಖ ಭ್ರಷ್ಟ ಪಕ್ಷಗಳಿ೦ದ ಹೊರತಾದ ನಿಜವಾದ ಜನಸಾಮಾನ್ಯರ ಒ೦ದು ಹೊಸ ರ೦ಗ ಉದಯಿಸಿ ಬ೦ದಲ್ಲಿ, 2016ರಲ್ಲಿ ಮತ್ತೆ ಬರಬಹುದಾದ ಬಿಬಿಎಂಪಿ ಚುನಾವಣೆಗೆ ಮತದಾನದ ಪ್ರಮಾಣವನ್ನು ಕನಿಷ್ಠ ಶೇ 60ಕ್ಕೆ ಹೆಚ್ಚಿಸಬಹುದೇನೊ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT