ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಧಿ ಮೀರುವ ಜಾತಿ

Last Updated 14 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕೌಟುಂಬಿಕ ಜೀವನದ ಸಹಜ ಬದುಕಿಗೆ ಜಾತಿ ಸೂತ್ರದಾಯಕ. ಆದರೆ ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಜಾತಿ ಐಚ್ಛಿಕ. ಜಾತಿ ಗಣತಿಯ ನೆಪದಿಂದ ಪಂಗಡಗಳ ಜನಸಂಖ್ಯಾನುಸಾರ ಮೀಸಲಾತಿ ಆರಂಭವಾದರೆ, ಬಹುತೇಕ ಎಲ್ಲ ಜಾತಿ-ಉಪ ಜಾತಿಗಳಿಗೂ ಸೌಲಭ್ಯ ಕೊಡಬೇಕಾಗಬಹುದು.

ಒಂದೆಡೆ ಕೆಲವು ಜಾತಿಗಳಲ್ಲಿ ಲಿಂಗಾನುಪಾತ, ವಿದ್ಯೆ-ಅಂತಸ್ತುಗಳ ಸಮಾನತೆ ಇಲ್ಲದೆ ಹೆಣ್ಣು-ಗಂಡುಗಳ ವಿವಾಹದಲ್ಲಿ ವಿಳಂಬವಾಗುತ್ತಿದೆ. ಅನಿವಾರ್ಯವಾಗಿ ಉಪಜಾತಿ, ಅನ್ಯಜಾತಿಗಳೊಂದಿಗೆ ಅನುಬಂಧ ಏರ್ಪಟ್ಟ ಜನರಿಗೆ ಗಣತಿಯ ವೈಭವೀಕರಣದಿಂದ ಜಾತಿಯ ಸಮಸ್ಯೆ ಎದುರಾಗಬಹುದು.

ಇಲ್ಲಿ ಗಮನಾರ್ಹ ಅಂಶವೆಂದರೆ, ಇದು ಐಚ್ಛಿಕ ಅಂತರ್ಜಾತೀಯ ವಿವಾಹ ಅಲ್ಲ. ಸ್ವ ಇಚ್ಛೆಯಿಂದಲೇ ಒಪ್ಪಿಕೊಂಡ ಅಂತರ್ಜಾತಿ ಅನುಬಂಧಗಳಿಗೂ ಸಾಮಾಜಿಕ ಬೆಂಬಲ ಬೇಕು. ಜಾತಿ ಗಣತಿಯಿಂದ ಇದಕ್ಕೆ ವಿರೋಧವಾಗದೇ?

ಗಣತಿಯ ಅವಶ್ಯಕತೆಗೆ ಅನುಸಾರವಾಗಿ ಕೌಟುಂಬಿಕ ಖಾಸಗಿ ವಿಚಾರಗಳನ್ನೂ ಹೇಳಿಕೊಳ್ಳಬೇಕಾದ ಅಗತ್ಯವಿದೆಯೇ? ಒಟ್ಟರ್ಥದಲ್ಲಿ ಜಾತಿ ಪರಿಧಿ ಮೀರುತ್ತಿರುವಂತೆ ಭಾಸವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT