ಶನಿವಾರ, 10 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 10 ಶನಿವಾರ 2026– ಅನುಕೂಲಕ್ಕಾಗಿ ಪರಿಸ್ಥಿತಿ ಬದಲಿಸುವ ಯತ್ನ
Published 9 ಜನವರಿ 2026, 18:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಲದ ಹಣ ಹಿಂದಿರುಗುವುದರಿಂದ ಮನೆಗೆ ಹಣ ಖರ್ಚು ಮಾಡುವಿರಿ. ಇಂದಿನ ಭೋಜನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು. ತಂದೆ ತಾಯಿ ಆಶೀರ್ವಾದದೊಂದಿಗೆ ಈ ದಿನ ಪ್ರಾರಂಭಿಸಿದರೆ ಉತ್ತಮ.
ವೃಷಭ
ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯವಾಗಿ ಪರಿಣಮಿಸುವುದು. ಹವಾ ಬದಲಾವಣೆಗಾಗಿ ಕಿರು ಪ್ರವಾಸದ ಸಾಧ್ಯತೆಗಳಿವೆ. ಈ ದಿನದ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ
ಮಿಥುನ
ಉತ್ತಮ ಆದಾಯದಿಂದ ಹಣಕಾಸಿನ ತೊಂದರೆ ನಿಮಗೆ ಕಾಣಿಸದು. ಕೆಲ ಸಂದರ್ಭದಲ್ಲಿ ಅಧೈರ್ಯ ಮತ್ತು ಮಾನಸಿಕ ಜಿಗುಪ್ಸೆಯಂತಹ ಸ್ಥಿತಿಯನ್ನು ಹೊಂದುವಿರಿ. ಅನಿರೀಕ್ಷಿತವಾಗಿ ಹಳೆಯ ಗೆಳೆಯರ ಭೇಟಿ ಇರಬಹುದು.
ಕರ್ಕಾಟಕ
ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಮಾಡುವುದರಿಂದ ಆರೋಗ್ಯ ಅಭಿವೃದ್ಧಿಯಾಗುವುದು. ಕಚ್ಚಾ ತೈಲದ ವ್ಯವಹಾರದಲ್ಲಿರುವವರಿಗೆ ತಲೆಬಿಸಿಯ ವಾತಾವರಣವಾದರೂ ಅಧಿಕವಾಗಿ ಲಾಭ ಸಿಗಲಿದೆ.
ಸಿಂಹ
ನಿಮ್ಮ ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಿ ನೆರವೇರಲಿದೆ. ನಿಮ್ಮ ವೃತ್ತಿ ಪ್ರವೃತ್ತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಿರಿ. ಪ್ರಯಾಣದಲ್ಲಿ ಆಪತ್ತುಗಳು ಎದುರಾಗಬಹುದು, ಜಾಗ್ರತರಾಗಿರಿ.
ಕನ್ಯಾ
ಇಂದಿನ ದಿನದ ಪರಿಸ್ಥಿತಿಗಳನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಮನೆ ದೇವರ ಪೂಜೆಯ ಹರಕೆಯ ಫಲವಾಗಿ ಮಗ/ಮಗಳಿಗೆ ಉದ್ಯೋಗ ದೊರಕುವುದು.
ತುಲಾ
ವಿವಾಹ ವಿಷಯಗಳು ನಿಶ್ಚಿತಗೊಂಡಿದ್ದರೂ ಸಹ ಇನ್ನೊಮ್ಮೆ ವಿಚಾರಿಸಿ ದೃಢಪಡಿಸಿಕೊಳ್ಳುವುದು ಉತ್ತಮ. ಸಿನಿಮಾ ಕಲಾವಿದರಿಗೆ ಸದವಕಾಶ ಒದಗಿ ಬರಲಿದೆ. ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುವಿರಿ.
ವೃಶ್ಚಿಕ
ನಿಮ್ಮ ಧ್ಯೇಯವನ್ನು ತಲುಪುವ ಹಾದಿಯಲ್ಲಿ ಬಾಲ್ಯ ಸ್ನೇಹಿತರ ಸಹಾಯ ಈ ದಿನ ದೊರೆಯಲಿದೆ. ಚಾಲಕ ವೃತ್ತಿಯವರು ಸ್ವಂತ ವಾಹನ ಖರೀದಿಯ ದಾರಿ ನೋಡಬಹುದು. ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡದಿರಿ.
ಧನು
ಮನಸ್ಸಿನ ಚಂಚಲ ಸ್ವಭಾವದಿಂದ ಇಂದಿನ ದಿನ ವಿಫಲರಾಗುವ ಸನ್ನಿವೇಶಗಳಿರುವುದು. ಸುಗಂಧ ದ್ರವ್ಯಗಳ ವ್ಯಾಪಾರಿಗಳಿಗೆ ಈ ದಿನ ಹೆಚ್ಚಿನ ವ್ಯಾಪಾರ ಸಂಭವವಿದೆ. ಶುಭಕ್ಕಾಗಿ ಮಹಾಗಣಪತಿಯನ್ನು ಆರಾಧಿಸಿ.
ಮಕರ
ಬುದ್ಧಿವಂತಿಕೆ ಹಾಗೂ ಯೋಜನೆಗಳು ನಿಮ್ಮ ವ್ಯವಹಾರವನ್ನು ಸುಲಭಗೊಳಿಸುತ್ತದೆ. ಸ್ನೇಹಿತರಿಂದ ವ್ಯಾಪಾರದಲ್ಲಿ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಹಣಕಾಸಿನ ವಿಚಾರದಲ್ಲಿ ತೋರಿದ ದಾಕ್ಷಿಣ್ಯದಿಂದ ನಷ್ಟ.
ಕುಂಭ
ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ಜೀವನದಲ್ಲಿ ನಾಲ್ಕಾರು ದೋಣಿಯ ಪ್ರಯಾಣ ಬೇಡವೆನಿಸಲಿದೆ. ಶಸ್ತ್ರವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿದೆ.
ಮೀನ
ನಿರುದ್ಯೋಗಿಗಳಿಗೆ ಪ್ರತಿಷ್ಠಿತರ ಪರಿಚಯದಿಂದ ಗೌರವಾನ್ವಿತ ಜಾಗದಲ್ಲಿ ಉದ್ಯೋಗ ಪ್ರಾಪ್ತಿಯಾಗಲಿದೆ. ಚಿತ್ರಕಲೆ, ಗಣಿತದಂತಹ ವಿಚಾರ ದಲ್ಲಿ ಆಸಕ್ತಿ ಮೂಡುವುದು. ಲೇವಾದೇವಿ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ.
ADVERTISEMENT
ADVERTISEMENT