ಮೂಢನಂಬಿಕೆ ನಿಷೇಧ ಮಸೂದೆ ಜಾರಿಗಾಗಿ ಬೆಂಗಳೂರಿನಲ್ಲಿ ನಡೆಸಿದ ನಿರಶನದಲ್ಲಿ ರಾಜ್ಯದ ವಿವಿಧ ಜಾತಿ, ವರ್ಗಗಳ ಮಠಾಧೀಶರು
ಪಾಲ್ಗೊಂಡಿದ್ದರು. ಇವರೆಲ್ಲಾ ಬಸವ, ಬುದ್ಧ, ಅಂಬೇಡ್ಕರ್ ಅವರ ಸಮ ಸಮಾಜದ ನಿರ್ಮಾಣದಲ್ಲಿ ನಂಬಿಕೆ ಉಳ್ಳವರು. ಅಂಥವರನ್ನು ‘ಕಾವಿ ವೇಷಧಾರಿಗಳು’ ಎಂದು ಕರೆದಿರುವ ಪೇಜಾವರ ಶ್ರೀಗಳ ಮನಸ್ಸಿನಲ್ಲಿ ಬ್ರಾಹ್ಮಣ್ಯವೇ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಇದ್ದಂತಿದೆ.

ನಿಡುಮಾಮಿಡಿ ಶ್ರೀಗಳಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಹೌದು, ಅವರಿಗೆ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳಲ್ಲಿ ನಂಬಿಕೆ ಇಲ್ಲ. ಬದಲು ಮಾನವ ಧರ್ಮದಲ್ಲಿ ನಂಬಿಕೆ ಇದೆ. ಹಾಗಾಗಿ, ಅವರು ಪ್ರಗತಿಪರ ಮಠಾಧೀಶರ ವೇದಿಕೆಯ ನೇತೃತ್ವ ವಹಿಸಿ ಮೂಢನಂಬಿಕೆ ನಿಷೇಧ ಮಸೂದೆಗೆ ಆಗ್ರಹಿಸಿ ನಿರಶನ ನಡೆಸಿದ್ದಾರೆ.

ಆದರೆ, ಪೇಜಾವರ ಶ್ರೀಗಳಿಗೆ ಇಂಥ ಮಸೂದೆ ಬೇಕಾಗಿಲ್ಲ. ಬದಲಿಗೆ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳಲ್ಲೇ ನಂಬಿಕೆ ಇರುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.