‘ಭಾರತ್ ಮಾತಾ ಕೀ ಜೈ’ ಎನ್ನದವರು ಭಾರತದಲ್ಲಿ ಇರಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಬಾರಿ ಭಯಂಕರ ಬರಗಾಲ ಬಂದು ಪ್ರಾಣಿಗಳು ನೀರು, ಆಹಾರವಿಲ್ಲದೆ ಸಾಯುತ್ತಿವೆ. ರೈತರು ಗುಳೆ ಹೋಗುತ್ತಿದ್ದಾರೆ. ವಿದರ್ಭ ಮತ್ತು ಮರಾಠವಾಡದಲ್ಲಿ ಬರಗಾಲದ ಸ್ಥಿತಿ ಭೀಕರವಾಗಿದ್ದು ಅಲ್ಲಿ ಸರ್ಕಾರದ ಪರಿಹಾರ ಕಾರ್ಯ ಸಮರ್ಪಕವಾಗಿಲ್ಲ.

ಗೋಹತ್ಯಾ ನಿಷೇಧದಿಂದ ಬಡ ರೈತರು ಜಾನುವಾರುಗಳನ್ನು ಸಹ ಮಾರಲಾಗದೆ ತಮ್ಮ ಕಣ್ಣೆದುರಿನಲ್ಲಿಯೇ ಅವು ನೀರು, ಆಹಾರವಿಲ್ಲದೆ ಸಾಯುವುದನ್ನು ನೋಡುತ್ತಾ ಸಂಕಟ ಪಡುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಧರ್ಮ ನುಸುಳಿದರೆ ಕೊನೆಗೆ ಬಡವರಿಗಾಗುವ ಕಷ್ಟನಷ್ಟ ಏನೆಂದು ಗೊತ್ತಾಗಬೇಕಾದರೆ ಮಹಾರಾಷ್ಟ್ರದ ಈಗಿನ ಗ್ರಾಮೀಣ ಸ್ಥಿತಿಯನ್ನು ನೋಡಬೇಕು. ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಫಡಣವೀಸ್ ಅವರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.