ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸೋ, ಏರೋಪ್ಲೇನೋ?

Last Updated 26 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಚಕರವಾಣಿಯಲ್ಲಿ (ಡಿ.19) ಪ್ರಕಟವಾದ ‘ಕೆ.ಎಸ್‌.ಆರ್‌.ಟಿ.ಸಿ. ಹಗಲು ದರೋಡೆ’ ಪತ್ರಕ್ಕೆ ಪೂರಕವಾಗಿ ಈ ಪತ್ರ. ಕೆಲ ದಿನಗಳ ಹಿಂದೆ ಬ್ರೆಜಿಲ್‌ ನಲ್ಲಿ ಬಸ್‌ ಪ್ರಯಾಣ ದರ ಏರಿಸಿದ್ದಕ್ಕೆ ದೇಶದಾದ್ಯಂತ ಪ್ರತಿಭಟನೆ ವ್ಯಕ್ತ­ವಾಯಿತು. ನಮ್ಮ ದೇಶದಲ್ಲಿ ಜನಸಾ­ಮಾನ್ಯರ ಬಗ್ಗೆ ಕಾಳಜಿಯುಳ್ಳ ಪ್ರತಿ­ಭಟನೆ­ಗಳೇ ಮಾಯವಾಗಿವೆ.

ಪ್ರತಿಭ­ಟಿಸಿ­ದರೂ ಕೇವಲ ಪ್ರಚಾರಕ್ಕಾಗಿ ನಡೆ­ಯುತ್ತಿವೆ! ಮೈಸೂರಿನ ನಗರ ಬಸ್‌ ನಿಲ್ದಾಣದಿಂದ ಕನಕದಾಸ ನಗರಕ್ಕೆ 10 ಕಿ.ಮೀ. ದೂರ. ಬಸ್‌ ದರ ₨ 13–14. ಕನಕದಾಸನಗರ ಕಡೇ ಬಸ್‌ ನಿಲ್ದಾಣ ದಿಂದ ರಾಮಕೃಷ್ಣನಗರ ವೃತ್ತಕ್ಕೆ 2 ಕಿ.ಮೀ. ಆದರೆ ಬಸ್‌ ದರ ₨7. ಕುವೆಂಪುನಗರ ಕಾಂಪ್ಲೆಕ್‌್ಸಗೆ 3 ಕಿ.ಮೀ. ಬಸ್‌ ದರ ₨ 9. ಇದು ದರೋಡೆಯ­ಲ್ಲವೇ? ಒಂದು ಸ್ಟಾಪ್‌ನಲ್ಲಿ ಹತ್ತಿ ಮುಂದಿನ ಸ್ಟಾಪ್‌ನಲ್ಲಿ ಇಳಿದರೆ ಕನಿಷ್ಠ ದರ ₨6.

ಇದೇನು ಬಸ್ಸೋ ಏರೋ ಪ್ಲೇನೋ! ತವರಿನವರೇ ಆದ ಮುಖ್ಯ ಮಂತ್ರಿಗಳು ನಗರ ಸಾರಿಗೆ ದರಗಳನ್ನು ಇಳಿಸಿ ಸಾಮಾನ್ಯರು ಬಸ್ಸಿನಲ್ಲಿ ಓಡಾ­ಡಲು ಅನುಕೂಲ ಮಾಡಿಕೊಡಲಿ.
–ಮುಳ್ಳೂರು ಪ್ರಕಾಶ್‌, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT