ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿಷ್ಕಾರ ಬೇಡ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗಿನ ಚುನಾ­ವಣೆ­ಗಳು ಬಂದಾಗ ಕೆಲವು ಗ್ರಾಮಗಳ ಜನರು ಮತದಾನಕ್ಕೆ ಬಹಿ­ಷ್ಕಾರ ಹಾಕುತ್ತಾರೆ. ತಮ್ಮ ಊರಿನ ಅಭಿವೃದ್ಧಿ ಆಗದೇ ಇರು­ವುದು ಮತ್ತು ತಮ್ಮ ಬೇಡಿಕೆಗಳನ್ನು ಕಡೆಗಣಿಸಿದ್ದರಿಂದ ಕಂಗೆಟ್ಟು ಮತದಾನಕ್ಕೆ ಬಹಿ­ಷ್ಕಾರ ಹಾಕು­ತ್ತಾರೆ. ಈ ಮೂಲಕ ಜನಪ್ರತಿನಿಧಿಗಳಿಗೆ ಪಾಠ ಕಲಿಸು­ವುದು ಅವರ ಉದ್ದೇಶ. ಆದರೆ, ಇದರಿಂದ ಯಾವ ಜನ­ಪ್ರತಿ­ನಿಧಿ­ಯೂ  ಪಾಠ ಕಲಿಯು­ವುದಿಲ್ಲ; ಈವರೆಗೆ ಕಲಿತಿಲ್ಲ. ಮೇಲಾಗಿ ಜನರಿಗೇ ತೊಂದರೆಯಾಗಿದೆ.

ಮತದಾನ ಮಾಡಿಲ್ಲ ಎಂಬ ಕಾರಣಕ್ಕೆ ಅವರ ಸಹಾಯಕ್ಕೆ ಯಾರೂ  ಬರುವುದಿಲ್ಲ.   ಬಹಿಷ್ಕಾರ ಎಂಬುದು ತಪ್ಪು ಕಲ್ಪನೆ ಹಾಗೂ ಅಪರಾಧ.  ಮತದಾರರು ಚುನಾವಣೆಯ ದಿನ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಇದು ಕರ್ತವ್ಯ ಮತ್ತು ಜವಾಬ್ದಾರಿಯೂ  ಹೌದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT