ಹೊಸ ವರ್ಷದ ಕೊಡುಗೆಯಾಗಿ ಜನವರಿಯಿಂದ (2016) ಬಿಎಂಟಿಸಿ ತನ್ನ ಕಪ್ಪು ಹಲಗೆ ಮಾಸಿಕ ಬಸ್ ಪಾಸ್ (₹825) ರದ್ದು ಪಡಿಸಿ ಎಲ್ಲರೂ 1,050 ರೂಪಾಯಿ ಮಾಸಿಕ ಪಾಸ್ ಕೊಳ್ಳಬೇಕು ಎಂದಿರುವುದು ನಗರದ ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ದರ (ಡಿಸೆಂಬರ್ 2015) ಕೂಡ ಏರಿದೆ. ಪ್ರತಿವರ್ಷ ಟಿಕೆಟ್ ದರ, ಬಸ್‌ಪಾಸ್ ದರ ಏರಿಕೆ ಮಾಡುವ ಸಾರಿಗೆ ಸಂಸ್ಥೆಯದ್ದು ಹಗಲುದರೋಡೆ. ನಾಗರಿಕರಲ್ಲಿ ಇದು ನಡುಕ ಮೂಡಿಸಿದೆ. ಸಾರಿಗೆ ಸಂಸ್ಥೆ ತನ್ನ ಅದಕ್ಷತೆ, ಅವ್ಯವಹಾರ, ಭ್ರಷ್ಟಾಚಾರ ಸರಿಪಡಿಸಿಕೊಳ್ಳದೆ ನಷ್ಟದ ಎಲ್ಲಾ ಹೊಣೆಯನ್ನು ಪ್ರಯಾಣಿಕರ ಮೇಲೆ ಹಾಕುವುದು ಅನ್ಯಾಯ.

ದರ ಏರಿಕೆಯಾದಂತೆ ಸೇವಾ ಸುವ್ಯವಸ್ಥೆ ದಕ್ಷತೆ, ಶಿಸ್ತು, ಆಡಳಿತ ಹಾಗೂ ಸಿಬ್ಬಂದಿ ವರ್ಗದಲ್ಲಿ ಹೆಚ್ಚಾಗಿದೆಯೇ? ಪೆಟ್ರೋಲ್, ಡಿಸೇಲ್ ದರ ಇಳಿಕೆಯಾದ ದಿನಗಳಲ್ಲೂ ನಷ್ಟದಲ್ಲಿದೆ ಏಕೆ? ಪ್ರತಿದಿನ ಪ್ರತಿ ಬಸ್‌ನ ಚೆಕಿಂಗ್ ಏಕಿಲ್ಲ? ಪಾಸ್ ಪ್ರಯಾಣಿಕರೆಂದರೆ ನಿರ್ವಾಹಕರು ಮುಖ ಸಿಂಡರಿಸಿಕೊಳ್ಳುತ್ತಾರೆ. ಹಾಗೆಯೇ ದೈನಂದಿನ ಪಾಸ್‌ನ ಗುರುತಿನ ಚೀಟಿ ಹೆಂಗಸರ/ ಗಂಡಸರ ಪಾಸ್‌ನ ಗೊಂದಲದಲ್ಲಿ ಕೆಲವು ಬಾರಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಸಾರಿಗೆ ಸಂಸ್ಥೆಯ ಅನ್ನದಾತ ಪ್ರಯಾಣಿಕರಿಗೆ ಪ್ರಯಾಣ ಕಿರಿಕಿರಿ ಏಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.