ಬೆಂಗಳೂರಿನ ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ಬೀದಿನಾಯಿಗಳು ಆರು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಸುದ್ದಿ ನಾಗರಿಕರಲ್ಲಿ ನಡುಕ ತಂದಿತ್ತು. ಕಳೆದ ವಾರ ವಿಧಾನಸೌಧದ ಮುಂದಿರುವ ರಸ್ತೆಯಲ್ಲಿಯೇ ವಿದೇಶಿ ಹಾಗೂ ಸ್ವದೇಶಿ ಮ್ಯಾರಥಾನ್ ಓಟಗಾರರಿಗೆ ತೊಂದರೆ ಕೊಟ್ಟ ಸಚಿತ್ರ ಸುದ್ದಿ ಪ್ರಕಟವಾಗಿತ್ತು. ಇಷ್ಟಾದರೂ ಬಿಬಿಎಂಪಿ ಬೀದಿನಾಯಿ ಪ್ರೇಮ ಇನ್ನೂ ಕಡಿಮೆಯಾಗಿಲ್ಲ.

ಬಿಬಿಎಂಪಿ ಪ್ರತಿವರ್ಷ ಬೀದಿನಾಯಿಗಳ ಸಂತಾನಹರಣಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೂ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮಿರಿದೆ. ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಕೊಡುವ ಬೀದಿನಾಯಿಗಳ ಹಾವಳಿ ತಪ್ಪಿಸಿ ಬಿಬಿಎಂಪಿ ಯಾವ ಹೊಸ ಕ್ರಮ ಕೈಗೊಂಡಿದೆ?

ಬೀದಿಬದಿಯ ತಿಂಡಿ ಹೋಟೆಲುಗಳು, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯೇ ಬೀದಿನಾಯಿಗಳಿಗೆ ಆಕರ್ಷಣೆ. ಬಿಬಿಎಂಪಿ ಈ ಅಂಶ ಗಮನಿಸಬಾರದೆ? ಬೀದಿನಾಯಿಗಳ ಹಾವಳಿ ಯಾವ ಕ್ರಮಗಳನ್ನು ಕೈಗೊಂಡಿದೆ ಎನ್ನುವ ನಾಗರಿಕರ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.