ವಾಯುಮಾಲಿನ್ಯ, ಶಬ್ದಮಾಲಿನ್ಯದಲ್ಲಿ ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂದಿದೆ ಸಿ.ಎಸ್.ಇ. ಸಮೀಕ್ಷೆ. ಸರ್ಕಾರವು ಬಿ.ಬಿ.ಎಂ.ಪಿ.ಯಲ್ಲಿ ಅರಿವು–ಎಚ್ಚರ ಮೂಡಿಸಲಿ. ವಾಯುಮಾಲಿನ್ಯ ಕಡಿಮೆ ಮಾಡಲು ಸರಳ ಸುಲಭ ಉಪಾಯಬೇಕಾಗಿದೆ. ಮರಗಿಡಗಳನ್ನು ಬೆಳೆಸುವುದು, ಅವುಗಳಿಗೆ ರಕ್ಷಣೆ ಒದಗಿಸುವುದು ಮುಖ್ಯ. ಆದರೆ ಬೆಂಗಳೂರಿನಲ್ಲಿ ಕಟ್ಟಡಗಳ ನಿರ್ಮಾಣ, ಮೆಟ್ರೊ, ಮೇಲು ಸೇತುವೆ, ರಸ್ತೆ ದುರಸ್ತಿ, ಪಾದಚಾರಿ ಮಾರ್ಗದ ದುರಸ್ತಿ ಇನ್ನಿತರ ಕಾರಣಗಳಿಗಾಗಿ ಪ್ರತಿನಿತ್ಯ ಮರಗಳ ಮಾರಣಹೋಮ ನಡೆದಿದೆ. ಇದರ ಜೊತೆಗೆ ಜಾಹೀರಾತು ಫಲಕಗಳಿಗಾಗಿ ಪ್ರತಿನಿತ್ಯ ಮರಗಳ ಕೊಂಬೆಗಳನ್ನು ಕಡಿಯಲಾಗುತ್ತಿದೆ.

ಇಷ್ಟಾದರೂ ಬಿ.ಬಿ.ಎಂ.ಪಿ. ಮರಗಳ ರಕ್ಷಣೆಯ ಬಗ್ಗೆ ಎಚ್ಚರಗೊಳ್ಳದೆ ಮರಗಳ ನಾಶದ ಬಗ್ಗೆ ಮೌನವಾಗಿರುವುದು ಯಾಕೆ? ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮಿತಿಮೀರಿದೆ. ಇದರಿಂದ ನಗರದ ಜನತೆಗೆ, ಮಕ್ಕಳಿಗೆ ನಾನಾ ವಿಧದ ರೋಗಗಳು ಉಂಟಾಗಿವೆ. ಚೀನಾದಂತೆ ಶುದ್ಧ ಗಾಳಿ ಬಾಟಲ್ ಸೇವನೆ ಬೆಂಗಳೂರಿಗೆ ಬೇಕೆ? ಬಿ.ಬಿ.ಎಂ.ಪಿ. ತಕ್ಷಣವೇ ಮಾಲಿನ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬಾರದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.