ಪ್ರಧಾನಿಗೆ ಗದರಿದ ಪರಿಚಾರಿಕೆ! (ಪ್ರವಾ. ಜುಲೈ 5) ವರದಿಯಲ್ಲಿರುವ ಪ್ರಸಂಗ ನಮ್ಮಲ್ಲಿ ಘಟಿಸಿದ್ದರೆ ಏನಾಗುತ್ತಿತ್ತು ಎಂದು ವಿವೇಚಿಸಬಹುದಲ್ಲವೇ? ನಮ್ಮಲ್ಲಿ ಇಂತಹ ಸಂದರ್ಭ ಎದುರಾಗಿದ್ದರೆ ಸಾಮಾನ್ಯ ಮಂತ್ರಿಯೊಬ್ಬರು ಇಲ್ಲದ ಗಲಾಟೆ ಎಬ್ಬಿಸಿ ಚಹಾ ಅಂಗಡಿ ಎತ್ತಂಗಡಿಯಾಗುವವರೆಗೂ ವಿಶ್ರಮಿಸುತ್ತಿರಲಿಲ್ಲ ಎನ್ನಬಹುದೆ!

ಹಿಂದೊಮ್ಮೆ ರಾಜ್ಯದ ಸಚಿವರೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಕಾರನ್ನು ಹಿಂದಕ್ಕೆ ಹಾಕಿ ತನ್ನ ಕಾರನ್ನು ಓಡಿಸಿದನೆಂಬ ಕಾರಣಕ್ಕೆ ನಮ್ಮ ಸಚಿವರು ಕ್ರೋಧಗೊಂಡು ಆ ಕಾರಿನ ಒಡೆಯನಿಗೆ ಮೈಚಳಿ ಬಿಡಿಸಿದ ಸಂಗತಿ ವರದಿಯಾಗಿತ್ತು. ಬ್ರಿಟನ್ನಿನಲ್ಲೂ ಪ್ರಜಾಪ್ರಭುತ್ವವಿದೆ; ನಮ್ಮಲ್ಲೂ ಇದೆ.

ನಮ್ಮ ಸಂವಿಧಾನ ಅನೇಕ ವಿಷಯಗಳಲ್ಲಿ ಬ್ರಿಟಿಷ್ ಸಂಪ್ರದಾಯಾನುವರ್ತಿ ಎಂದು ಹೇಳುತ್ತಾರೆ ಬಲ್ಲವರು. ಎರಡೂ ದೇಶಗಳಲ್ಲಿ ಸಂವೈಧಾನಿಕ ನೆಲೆಯಲ್ಲಿ ಪ್ರಜೆಯೇ ಪ್ರಭು, ಆದರೆ ನಮ್ಮಲ್ಲಿ ಪ್ರಜೆಗೆ ಪ್ರಭುತ್ವ ಲಭಿಸುವುದು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ; ಅಥವಾ, ಚುನಾವಣೆಗಳು ಬಂದಾಗ ಮಾತ್ರ. ಆಮೇಲೆ ಆಯ್ಕೆಗೊಂಡವರೇ ಸವಾರಿ ಮಾಡುವರು.

ಹೌದು, ಬ್ರಿಟನ್‌ನ ಪ್ರಧಾನಿ ಕಾಫಿ ಶಾಪ್ ಹೊರಗಿದ್ದ ಇನ್ನೊಂದು ಬೇಕರಿಯಲ್ಲಿ ಜ್ಯಾಮ್ ಲೇಪಿತ ಸಿಹಿ ವಡೆ ತಿಂದು ಚಹಾ ಕುಡಿದರು. ಆ ಪರಿಚಾರಿಕೆ ವಿಷಾದ ವ್ಯಕ್ತಪಡಿಸಿದಳು ತಾನು ಗದರಿದ್ದು ಯಾರನ್ನು ಎಂದು ತಿಳಿದು.

ಆಕೆ ಬೇರೆಯವರಿಗೆ ಕಾಫಿ ವಿತರಿಸುವಲ್ಲಿ ಕಾರ್ಯಮಗ್ನಳಾಗಿದ್ದುದು ಬ್ರಿಟನ್ ಪ್ರಧಾನಿಗೆ ತಿಳಿಯದೆ ಹೋಗಲಿಲ್ಲ. ನಂತರ ಪರಿಚಾರಿಕೆ ಏನು ಹೇಳಿದಳು ಗೊತ್ತೆ? ಅವರು (ಪ್ರಧಾನಿ) ನಂತರ ಒಳಗೆ ಬಂದರು... ಕೈ ಕುಲುಕಿದರು, ತುಂಬ ಸ್ನೇಹಪರರಾಗಿದ್ದರು ಎಂದಿದ್ದಾಳೆ.ಯಾಕೆ ಹೋಲಿಕೆ ಎನ್ನುವಿರೇನೊ....!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.