ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ನಕಲಿ, ಯಾರು ಅಸಲಿ?

Last Updated 5 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನಕಲಿ ವೈದ್ಯರ ಹಾವಳಿ ತಡೆಯಲು ಸರ್ಕಾರ ಕಠಿಣ ಕಾಯ್ದೆ ತರಲು ಹೊರಟಿರುವುದು ಸ್ವಾಗ­ತಾರ್ಹ. ಶಿಕ್ಷೆಯನ್ನು ಮೂರು ವಿಭಾಗವಾಗಿ ವಿಂಗಡಿಸಿರುವುದೇನೋ ಸರಿ. ಇಲ್ಲಿ ಯಾರು ನಕಲಿ ವೈದ್ಯರೆಂದು ಸರ್ಕಾರವೇ ನಿರ್ಧರಿಸ­ಬೇಕು. ಯಾವುದೇ ವಿದ್ಯಾರ್ಹತೆಯಿಲ್ಲದೆಯೂ ಇನ್ನೊಬ್ಬ­ರಿಂದ ಕಲಿತು ರೋಗಿಯನ್ನು ಪರೀಕ್ಷಿ­ಸುವ ಮತ್ತು ಒಂದು ವೈದ್ಯ ಪದ್ಧತಿ ವ್ಯಾಸಂಗ ಮಾಡಿ ಇನ್ನೊಂದು ಪದ್ಧತಿಯಲ್ಲಿ ಚಿಕಿತ್ಸೆ ನೀಡು­ವವರನ್ನು ನಕಲಿ ಎನ್ನಬಹುದಲ್ಲವೇ? ಬೆಂಗಳೂರಿ­ನಲ್ಲಂತೂ ನಕಲಿ ವೈದ್ಯರನ್ನು ಪತ್ತೆ ಮಾಡುವುದು ಕಷ್ಟದ ಕೆಲಸ.

ಹಳ್ಳಿಗಳಲ್ಲೂ ನಕಲಿ ವೈದ್ಯರ ಹಾವಳಿ ಜಾಸ್ತಿ. ಸರ್ಕಾರ ಕಾಯ್ದೆಗೆ ತಿದ್ದು ಪಡಿ ತರುವುದರ ಜೊತೆಗೆ ನಕಲಿ ವೈದ್ಯರನ್ನು ಪತ್ತೆ ಮಾಡಲು ದಕ್ಷ ತಂಡ ರಚಿಸಬೇಕು. ತಂಡದಲ್ಲಿ­ರುವವರೇ ಆಮಿಷಗ­ಳಿಗೆ ಬಲಿಯಾಗ­ಬಹುದು. ತಂಡದಲ್ಲಿ ವೈದ್ಯ­ರನ್ನು ಮಾತ್ರ ಸದಸ್ಯರನ್ನಾಗಿ ಮಾಡುವ ಬದಲು ಕಾನೂನು ತಜ್ಞರು, ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯ­ಕರ್ತರನ್ನು ಸೇರಿಸಿ­ಕೊಳ್ಳಬೇಕು.

ಜನಸಾಮಾನ್ಯರಿಗೆ ನಕಲಿ ವೈದ್ಯರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಲಿ. ಹಾಗೆಯೇ ಅಸಲಿ ವೈದ್ಯರು ದಿಢೀರ್ ಶ್ರೀಮಂತರಾಗಲು ತಟ್ಟೆ­ಗಟ್ಟಲೆ ನಕಲಿ ಔಷಧಿಗಳನ್ನು ಬರೆಯುವುದನ್ನು ತಪ್ಪಿಸಲೂ ಕಾನೂನು ರೂಪಿಸಿದರೆ ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT