ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ದರ ಯಾವ ನ್ಯಾಯ?

Last Updated 24 ಜನವರಿ 2013, 19:59 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರವನ್ನು  ಪ್ರತಿ ಕಿ.ಮೀ.ಗೆ  ಎರಡು ಪೈಸೆಯಂತೆ ಹೆಚ್ಚಳ ಮಾಡಿದೆ. ಆದರೆ ಈ ರೀತಿ ಹೆಚ್ಚಳವಾದ ದರಕ್ಕೆ ಯಾವುದು ಅಳತೆಗೋಲು ಎಂಬುದೇ ತಿಳಿಯುತ್ತಿಲ್ಲ.

ಅದಕ್ಕೊಂದು ನಿದರ್ಶನವನ್ನು ನೋಡಬಹುದಾಗಿದೆ. ದಾವಣಗೆರೆಯಿಂದ ಬ್ಯಾಡಗಿಗೆ ತೆರಳಲು ಮೊದಲಿದ್ದ ದರ ರೂ. 9 ಆದರೆ ಪ್ರಸ್ತುತ ತೆಗೆದುಕೊಳ್ಳುತ್ತಿರುವ ದರ ರೂ. 15 ಈ ಊರುಗಳ ನಡುವೆಯಿರುವ ಅಂತರ 60 ಕಿ.ಮೀ ಆಗಿದ್ದು, ನಿಯಮದಂತೆ ಪರಿಷ್ಕೃತ ದರ 12 ಆಗಬೇಕು. ೆ ಮತ್ತೆ ದಾವಣಗೆರೆಯಿಂದ ಹಾವೇರಿಗೆ ಹೋಗಬೇಕಾದರೆ ಅದಕ್ಕೂ 15.ರೂಪಾಯಿ ದರ.

ಅಂದರೆ ಬ್ಯಾಡಗಿ ಮತ್ತು ಹಾವೇರಿಗಳ ನಡುವಿನ 18 ಕಿ.ಮೀ ಗೆ ಬೆಲೆಯೇ ಇಲ್ಲವೆ? ಮೆಲ್ನೋಟಕ್ಕಿದು ಚಿಕ್ಕ ವಿಷಯವಾಗಬಹುದು. ಆದರೆ ದಿನನಿತ್ಯ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸುವವರು ಮಧ್ಯಮವರ್ಗ ಮತ್ತು ಬಡವರ್ಗದವರು. ಅವರಿಗೆ ಇದು ದುಬಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT