ನಮ್ಮ ದೇಶದಲ್ಲಿ ಸರ್ಕಾರಿ ಆಜ್ಞೆಗೆ ಇರುವಷ್ಟೇ ಪ್ರಭಾವವು ‘ವದಂತಿ’ಗಳಿಗೂ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಸರ್ಕಾರ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಕೂಡಲೇ, ಸಂದು–ಮೂಲೆಗಳಲ್ಲಿ ಅಡಗಿದ್ದ ದೊಡ್ಡ ಮೊತ್ತದ ನೋಟುಗಳೆಲ್ಲ ಹೊರಬಂದವು.
ಈಗ ಒಂದು ಗಾಳಿಸುದ್ದಿ ನಾಣ್ಯಗಳನ್ನು ಹೊರತರುತ್ತಿದೆ. ಚಲಾವಣೆಯಲ್ಲಿರುವ ₹ 10ರ ಮುಖಬೆಲೆಯ ನಾಣ್ಯ ನಕಲಿ ಎಂದೂ ಮತ್ತು ಅದರ ಚಲಾವಣೆಯನ್ನು ರದ್ದುಪಡಿಸಲಾಗಿದೆ ಎಂದೂ ವದಂತಿ ಹಬ್ಬಿದ್ದೇ ತಡ ಜನರ ಬಳಿ ಇದ್ದ ನಾಣ್ಯಗಳು ಹೊರಬರುತ್ತಿವೆ.

ನೋಡಲು ಆಕರ್ಷಕವಾಗಿರುವ ಕಾರಣಕ್ಕೆ ₹ 10ರ ನಾಣ್ಯ ಸಿಕ್ಕಿದರೆ ಸಾಕು ಅದನ್ನು ಚಲಾವಣೆಗೆ ಬಿಡದೆ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಈಗ ಅವು ಎಲ್ಲಿದ್ದರೂ ಹುಡುಕಿ ತೆಗೆದು ಚಲಾವಣೆಗೆ ಬಿಡುತ್ತಿದ್ದಾರೆ. ₹ 2000 ಮುಖಬೆಲೆಯ ಒಂದು ನೋಟು ಮುದ್ರಿಸಲು ₹ 3.54 ಖರ್ಚಾದರೆ, ₹ 10ರ ಒಂದು ನಾಣ್ಯ ಟಂಕಿಸಲು ₹ 6.10 ಬೇಕಾಗುತ್ತದೆ ಎಂಬ ಮಾಹಿತಿ ಇದ್ದವರೂ ತಮ್ಮ ಬಳಿ ಇರುವ ನಾಣ್ಯವು ಅಸಲಿ ಎಂದು ನಂಬುತ್ತಿಲ್ಲ. ಆಗಾಗ್ಗೆ ಈ ರೀತಿಯ ವದಂತಿ ಹಬ್ಬುತ್ತಿದ್ದರೆ ಚಿಲ್ಲರೆಯ ಸಮಸ್ಯೆ ಬಗೆಹರಿಯಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.