ರಾಜ್ಯದ ಕೆಲವು ವೈದ್ಯರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ 1.75 ಕೋಟಿ ರೂ ಗ್ರಾಮೀಣ ಭತ್ಯೆಯನ್ನು ಪಡೆದು ಸರ್ಕಾರಕ್ಕೆ ವಂಚಿ ಸಿದ್ದಾರೆಂಬ ಮಾಹಿತಿಯನ್ನು ಪತ್ರಿಕೆಗಳಲ್ಲಿ ಓದಿದ ನಂತರ ನಮ್ಮ ವೈದ್ಯರೂ `ರೋಗ~ದಿಂದ ಹೊರತಲ್ಲ ಅನ್ನಿಸಿತು.

ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸಿಸುವುದನ್ನು ಕಡ್ಡಾಯ ಗೊಳಿಸಿ ರಾಜ್ಯ ಸರ್ಕಾರ 2009ರಲ್ಲಿ ಆಜ್ಞೆ ಹೊರಡಿಸಿದೆ. ಆದರೆ ಅನೇಕರು ಅದನ್ನು ಪಾಲಿ ಸದೆ ಅವರವರ ಅನುಕೂಲಕ್ಕೆ ತಕ್ಕಂತೆ ನಗರ ಗಳಲ್ಲಿ ವಾಸಿಸುತ್ತ ರೋಗಿಗಳನ್ನು ಮರೆತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೇ ಇವೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ತಾಯಿ ಭಾಗ್ಯ ಪ್ಲಸ್, ಜನನಿ ಸುರಕ್ಷಾ ಯೋಜನೆ, ಸುರಕ್ಷಾ ಪ್ರಸೂತಿ, ಆರೈಕೆ, ಮಡಿಲು ಕಿಟ್ ಹೀಗೆ ಹೊಸ ಕಾರ್ಯ ಕ್ರಮಗಳಿವೆ. ಇವನ್ನು ಜನರಿಗೆ ತಲುಪಿಸಬೇಕಾದ ಜವಾಬ್ದಾರಿ ವೈದ್ಯರ ಮೇಲಿದೆ.

ಅನೇಕರು ಅದನ್ನು ಮರೆತಿದ್ದಾರೆ. ಹಣ ದುರುಪಯೋಗ ಮಾಡಿಕೊಂಡ ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ಬೇಸರದ ಸಂಗತಿ. ಸಮಾಜದ ಸ್ಥಾಸ್ತ್ಯ ಕಾಪಾಡಬೇಕಾದ ವೈದ್ಯರೇ ಅಡ್ಡ ಹಾದಿ ಹಿಡಿಯುವುದು ದುರದೃಷ್ಟಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.