ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ `ಪರಿಚಯ ಪುಸ್ತಿಕೆ~ ಯಲ್ಲಿ ರಾಜ್ಯದಲ್ಲಿ 470 ಸಂಸ್ಕೃತ ಪಾಠ ಶಾಲೆಗಳಿವೆಯೆಂದು ಪ್ರಕಟಿಸಿದೆ. ಈ ಶಾಲೆಗಳಲ್ಲಿ ಸುಮಾರು ಮೂರು ಸಾವಿರ ಉಪಾಧ್ಯಾಯರು (ಪಂಡಿತರು) ಕೆಲಸ ಮಾಡುತ್ತಿದ್ದಾರೆ.

ಇವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗಿಂತ ಹೆಚ್ಚಿನ ವೇತನವನ್ನು ಸರ್ಕಾರ ನೀಡುತ್ತಿದೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಈ ಶಾಲೆಗಳು ನಾಮಫಲಕವಿಲ್ಲದ ನಾಮ್‌ಕಾವಸ್ತೆ ಪಾಠ ಶಾಲೆಗಳು.

ಈ ಶಾಲೆಗಳು ಉಪಾಧ್ಯಾಯರಿಗೆ, ಉಪಾಧ್ಯಾಯರಿಗಾಗಿ, ಉಪಾಧ್ಯಾಯರಿಗೋಸ್ಕರ ಇವೆ. ಇಲ್ಲಿನ ಪುರೋಹಿತ, ಗರ್ಭಗುಡಿಯ, ಅಗ್ರಹಾರ ಸಂಸ್ಕೃತಿಯ ಉಪಾಧ್ಯಾಯರುಗಳಿಗೆ (ಪಂಡಿತರಿಗೆ) ಅಧಿಕಾರಿಗಳು, ರಾಜಕೀಯ ಮುಖಂಡರು ಮಿಗಿಲಾಗಿ ಜಗದ್ಗುರುಗಳ ಕೃಪಾಶೀರ್ವಾದವಿದೆ.

ಪ್ರತಿ ತಿಂಗಳೂ ಇವರ ವೇತನ (ಕನಿಷ್ಠ ವೇತನ 30 ಸಾವಿರಕ್ಕಿಂತಲೂ ಹೆಚ್ಚು) ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ. ವಿದ್ಯಾರ್ಥಿಗಳೇ ಇಲ್ಲ. ಆದರೂ ವೇತನ, ವಿದ್ಯಾರ್ಥಿಗಳಿಲ್ಲದ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಮುಚ್ಚುತ್ತಾ ಇದೆ. ಈ ಪಾಠ ಶಾಲೆಗಳು ಎಲ್ಲಿವೆ? ಹೇಗಿವೆ? ಏನ್ಮಾಡ್ತಿವೆ? ಸಂಸ್ಕೃತ ನಿರ್ದೇಶಕರಿಗೆ ಮಾತ್ರ ಗೊತ್ತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.