‘ರಸವೆ ಜನನ, ವಿರಸ ಮರಣ, ಸಮರಸವೇ ಜೀವನ’ ಎಂಬ ದ.ರಾ. ಬೇಂದ್ರೆ ಅವರ ಮಾತುಗಳಿಗೆ ಪುಷ್ಟಿ ಕೊಡಲೆಂಬಂತೆ ಇಬ್ಬರು ಹೆಂಗಸರನ್ನು ಮದುವೆಯಾಗಿ, ಯಾರ ಜತೆ ಕಾಲ ಕಳೆಯಬೇಕು ಎಂಬ ಚಿಂತೆಗೆ ಬಿದ್ದಿದ್ದ ವ್ಯಕ್ತಿಗೆ ಸಲಹಾ ಕೇಂದ್ರವೊಂದು, ‘ವಾರದಲ್ಲಿ ಏಳು ದಿನಗಳಿವೆ, ನಿಮಗೆ ಇಬ್ಬರು ಹೆಂಡಿರಿದ್ದಾರೆ, ಹಾಗಾಗಿ ತಲಾ ಮೂರು ದಿನ ಅವರೊಂದಿಗೆ ಕಾಲ ಕಳೆಯಿರಿ’ ಎಂದು ಸೂಚಿಸಿದ ಸಂಗತಿ ಬಿಹಾರದಿಂದ ವರದಿಯಾಗಿದೆ.

ಉಳಿದ ಒಂದು ದಿನವನ್ನು ಜನ್ಮ ನೀಡಿದ ತಾಯಿಯೊಂದಿಗೆ ಕಳೆಯುವಂತೆ ಕೇಂದ್ರ ತಿಳಿಸಿದೆ. ಇಬ್ಬರ ಹೆಂಡಿರ ಮಧ್ಯೆ ಅಡಕತ್ತರಿಯ ಅಡಿಕೆಯಂತೆ ಒದ್ದಾಡುತ್ತಿದ್ದ ಬಡಪಾಯಿ ಗಂಡನ ಜೀವನ ಸುಖಮಯವಾಗಬಹುದೇ ಎಂಬುದು ಅವರವರ ಗ್ರಹಿಕೆಗೆ ಬಿಟ್ಟದ್ದು.

‘ಪೊಲೀಸ್– ಪರಿವಾರ್ ಪರಾಮರ್ಶ್ ಕೇಂದ್ರ’ ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿ ‘ಸಮರಸವೆ ಜೀವನ’ ಎಂಬ ಕವಿವಾಣಿಯನ್ನು ಎತ್ತಿ ಹಿಡಿದಿದೆ. ಒಬ್ಬ ಮಡದಿಯನ್ನು ಸಂತೈಸುವುದೇ ಕಷ್ಟವಾಗಿರುವಾಗ ಇನ್ನೊಬ್ಬಾಕೆಯನ್ನು ವರಿಸಿದ ವ್ಯಕ್ತಿಯ ದುಸ್ಸಾಹಸಕ್ಕೆ ಏನು ಹೇಳಬೇಕೊ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.