ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಾಹಿತ್ಯ’ ತೆಗೆಯಿರಿ

Last Updated 2 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತನ್ನು ಇಡೀ ಕನ್ನಡ ಸಮೂಹದ ಪ್ರಾತಿನಿಧಿಕ ಸಂಸ್ಥೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಸರ್ಕಾರ ಅದಕ್ಕೆ ಅನುದಾನ ನೀಡುತ್ತಿದೆ. ಈ ಕಾರಣಕ್ಕಾಗಿಯೇ ಸರ್ಕಾರದ ಮರ್ಜಿ ಅನುಸರಿಸಿ ಕೆಲಸ ಮಾಡಿದವರೂ ಇದ್ದಾರೆ. ಅಂತೆಯೇ ಅದು ಜನರ ಹಣ, ಸರ್ಕಾರದ ಭಿಕ್ಷೆಯಲ್ಲ ಎಂದು ಅಧಿಕಾರಸ್ಥರ ಹಸ್ತಕ್ಷೇಪವನ್ನು ಧಿಕ್ಕರಿಸಿದವರೂ ಇದ್ದಾರೆ.

ಅಂತೂ ಪರಿಷತ್ತು ಹೇಗೆ ಕೆಲಸ ಮಾಡಬೇಕಾಗಿತ್ತೋ ಹಾಗೆ ಮಾಡುತ್ತಿಲ್ಲ ಎಂಬ ಕೊರಗಂತೂ  ಕನ್ನಡ ಸಾಹಿತ್ಯಾಸಕ್ತರಿಗಿದೆ. ಮುಖ್ಯವಾಗಿ, ಅದರ ಹೆಸರಿನಲ್ಲಿರುವ ಹಾಗೆ ಸಾಹಿತ್ಯದ ಕೆಲಸಗಳು ಖಂಡಿತ ಆಗುತ್ತಿಲ್ಲ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಹೆಸರಿನಲ್ಲಿನ ಸಾಹಿತ್ಯವನ್ನು ತೆಗೆದು ‘ಕನ್ನಡ ಪರಿಷತ್ತು’ ಎಂದು ಬದಲಾಯಿಸಬಹುದು.

ಇನ್ನು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಒಒಡಿ ಕೊಡುವ ಪರಿಪಾಠವಿದೆ. ಒಂದು ಕಾಲದಲ್ಲಿ ಸಮ್ಮೇಳನಗಳಿಗೆ ಕಮ್ಮಿ ಜನ ಸೇರುತ್ತಿದ್ದುದು ಇದಕ್ಕೆ ಒಂದು ಕಾರಣ. ಕಡಿಮೆ ಸಂಖ್ಯೆಯಲ್ಲಿದ್ದ ವಿದ್ಯಾವಂತರು ಸರ್ಕಾರಿ ನೌಕರಿಯಲ್ಲಿದ್ದರು. ಅಲ್ಲದೆ ಶಿಕ್ಷಕರು ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಹರಡುವ ರಾಯಭಾರಿಗಳಾಗಿದ್ದರು. ಅವರಿಗೆ ಸಂಬಳ ಕಡಿಮೆ ಇತ್ತು. (ಅದಕ್ಕೇ ತಾನೆ ‘ಬಡ ಮೇಷ್ಟ್ರು’ ಎಂಬ ಪದಪುಂಜ ಹುಟ್ಟಿದ್ದು). ಆದರೆ ಈಗಿನ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ತಕ್ಷಣ ಒಒಡಿ ಸೌಲಭ್ಯವನ್ನು ನಿಲ್ಲಿಸುವುದು ಒಳ್ಳೆಯದು.

ಇದರಿಂದ ಸಮ್ಮೇಳನಗಳಲ್ಲಿ ನಿಜವಾದ ಆಸಕ್ತರು ಮಾತ್ರ ಭಾಗವಹಿಸುತ್ತಾರೆ. ನೂಕುನುಗ್ಗಲು, ಅವ್ಯವಸ್ಥೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿಲ್ಲುವುದು ಎಲ್ಲವೂ ತಪ್ಪುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಗಂಭೀರವಾಗಿ ಗೋಷ್ಠಿಗಳಲ್ಲಿ ಭಾಗವಹಿಸ ಬಯಸುವವರು ನಿರಾಳರಾಗುತ್ತಾರೆ. ಸಮ್ಮೇಳನದಲ್ಲಿ ಹಾಜರಿ ದಾಖಲೆ ಪಡೆದು ವಾಪಸ್ ಓಡಿ ಬರುವವರ ಕಾಟ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT