ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಲಿ

Last Updated 6 ಮೇ 2013, 19:59 IST
ಅಕ್ಷರ ಗಾತ್ರ

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಹಗರಣವನ್ನು ಕುರಿತು ತನಿಖೆ ನಡೆಸಿರುವ ಸಿ.ಬಿ.ಐ., ತನ್ನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲೇ, ಕಾನೂನು ಸಚಿವರಿಗೂ, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೂ ತೋರಿಸಿ, ಅವರ ಸಲಹೆ ಪಡೆದಿರುವ ಸಿ.ಬಿ.ಐ.ನ ಕ್ರಮದ ಬಗೆಗೆ, ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು, ಈಗ ದೇಶಾದ್ಯಂತವೂ ಭಾರಿ ಚರ್ಚಾಸ್ಪದವಾದ ವಿಷಯವೇ ಆಗಿರುವುದು ಸರಿಯಷ್ಟೆ.

ಸದರಿ ಹಗರಣವನ್ನು ಕುರಿತ ತನಿಖಾ ವರದಿಯನ್ನು ತರಿಸಿಕೊಳ್ಳುವ ಅಧಿಕಾರ ಕಾನೂನು ಸಚಿವರಿಗೆ ಇದೆಯೇ ಎಂಬುದಾಗಿ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಸಿ.ಬಿ.ಐ. ಸ್ವಾಯತ್ತ ಸಂಸ್ಥೆ ಎಂಬುದನ್ನೇ ಈಗ ಅನುಮಾನಿಸುವಂತಾಗಿದೆ ಎಂತಲೂ ತನ್ನ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದೆ. ಆದರೆ, ಸುಪ್ರೀಂ ಕೋರ್ಟ್‌ನ ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಸಿ.ಬಿ.ಐ. ನಿರ್ದೇಶಕರಾದ ರಣಜಿತ್ ಸಿನ್ಹ ಅವರು, “ಸಿ.ಬಿ.ಐ. ಸರ್ಕಾರದ ಒಂದು ಭಾಗವೇ ಹೊರತು, ಅದೊಂದು ಸ್ವತಂತ್ರ ಸಂಸ್ಥೆಯಲ್ಲ” ಎಂದಿದ್ದಾರೆ. ಅಲ್ಲದೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯನ್ನು ಕುರಿತ ತನಿಖಾ ವರದಿಯನ್ನು ತೋರಿಸಿರುವುದು ಕಾನೂನು ಸಚಿವರಿಗೇ ಹೊರತು, ಹೊರಗಿನವರಿಗಲ್ಲ ಎಂಬುದಾಗಿಯೂ ಸಿ.ಬಿ.ಐ. ನಿರ್ದೇಶಕರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಆಕ್ಷೇಪವನ್ನು ಸಮರ್ಥಿಸಬೇಕೋ, ಅಥವಾ ಸಿ.ಬಿ.ಐ. ನಿರ್ದೇಶಕರು ನೀಡಿರುವ ವಿವರಣೆಯನ್ನು ಸಮರ್ಥಿಸಬೇಕೋ ಎಂಬುದು ತಿಳಿಯುವಂತಿಲ್ಲ. ಆದಾಗ್ಯೂ, ಒಂದು ವೇಳೆ, ಸಿ.ಬಿ.ಐ. ಸ್ವಾಯತ್ತ ಸಂಸ್ಥೆ ಎಂಬುದು ಸುಪ್ರೀಂ ಕೋರ್ಟ್‌ನ ತೀರ್ಮಾನವಾಗಿದ್ದ ಪಕ್ಷದಲ್ಲಿ, ಸಿ.ಬಿ.ಐ. ನಿರ್ದೇಶಕರ ವಿರುದ್ಧ ಈ ಕೂಡಲೇ ಕರ್ತವ್ಯಲೋಪದ ಕ್ರಮ ಜರುಗಿಸಲು ಸುಪ್ರೀಂ ಕೋರ್ಟ್ ಮುಂದಾಗಲಿ. ಈ ರೀತಿಯ ಕಾನೂನು ಕ್ರಮದಿಂದ ಸಿ.ಬಿ.ಐ.ಗೆ ಸುಪ್ರೀಂ ಕೋರ್ಟ್ ಒಂದು ಅಪೂರ್ವ ಪಾಠವನ್ನೇ ಕಲಿಸಿದಂತಾಗಬಹುದಲ್ಲವೆ?
-ಡಾ. ಮ.ನ. ಜವರಯ್ಯ, ಮೈಸೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT