ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಯ ಕೊರತೆ

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಳೆದ ವಾರ ನಾವು ತಮಿಳುನಾಡಿನ ಕೆಲವು ಪ್ರಮುಖ ಯಾತ್ರಾ ಸ್ಥಳಗಳಿಗೆ ಹೋಗಿ ಬಂದೆವು. ನಾವು ಅಲ್ಲಿ ಕಂಡದ್ದು ಕೊಳಕಾದ, ಕಸದಿಂದ ತುಂಬಿದ್ದ ಸಾರ್ವಜನಿಕ ಸ್ಥಳಗಳನ್ನು. ದೇವಾಲಯಗಳ ಆವರಣಗಳೂ ಇದಕ್ಕೆ ಹೊರತಾಗಿರಲಿಲ್ಲ. ಬಸ್ ನಿಲ್ದಾಣಗಳಂತೂ ನಾರುತ್ತಿದ್ದವು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವೇ ಅಲ್ಲಿ ಇದ್ದಂತಿರಲಿಲ್ಲ. ಶೌಚಾಲಯಗಳ ಸ್ಥಿತಿಯಂತೂ ಹೇಳಲಾಗದು. ಕಂಡಲ್ಲಿ ಉಗುಳುವುದು ಅಲ್ಲಿ ಸಾಮಾನ್ಯ.

ನಗರ–ನಗರಗಳ ನಡುವಿನ ಸಂಪರ್ಕ ರಸ್ತೆಗಳು ಉತ್ತಮವಾಗಿದ್ದರೂ ನಗರದೊಳಗಿನ ರಸ್ತೆಗಳು ಕೆಟ್ಟದಾಗಿದ್ದವು. ‘ಸ್ವಚ್ಛ ಭಾರತ’ ಪರಿಕಲ್ಪನೆಯಿಂದ ಈ ಸ್ಥಳಗಳು ಹೊರಗಿರುವಂತೆ ಕಂಡು ಬಂದವು. ದೇವಾಲಯಗಳಲ್ಲಿ ಕಂಡ ಶಿಲ್ಪ ಸೌಂದರ್ಯ, ಬೆರಗುಗೊಳಿಸುವ ವಾಸ್ತುವಿನ್ಯಾಸ ಜನಜೀವನದಲ್ಲಿ ಕಾಣದಿದ್ದುದು ವಿಪರ್ಯಾಸವೇ ಸರಿ. ಸ್ವಚ್ಛತೆಯ ವಿಚಾರದಲ್ಲಿ ನಮ್ಮ ರಾಜ್ಯವೇ ಸಾಕಷ್ಟು ಮುಂದಿದೆ.

ಹಾಗಂತ ಅಲ್ಲಿನ ಜನರದ್ದು ಸೌಹಾರ್ದ ನಡವಳಿಕೆ. ನಮಗೆ ಅಲ್ಲಿನ ಭಾಷೆ ಬರದು, ಹಾಗಿದ್ದೂ ಬಸ್ ಸಂಚಾರ ಮತ್ತು ಸ್ಥಳಗಳ ಮಾಹಿತಿ ಇತ್ಯಾದಿಗಳನ್ನು ಸಾಮಾನ್ಯ ಜನರಿಂದ ಕೂಡ, ಪಡೆಯುವಲ್ಲಿ ನಮಗೆ ಯಾವ ತೊಂದರೆಯೂ ಆಗಲಿಲ್ಲ. ನಾವು ಹೇಗೋ ಕೇಳುತ್ತಿದ್ದೆವು ಅವರು ಅರ್ಥ ಮಾಡಿಕೊಂಡು ಸೌಜನ್ಯದಿಂದಲೇ ಮಾಹಿತಿ, ಮಾರ್ಗದರ್ಶನ ನೀಡುತ್ತಿದ್ದರು.

ಅಲ್ಲಿನ ಕೆಲವೊಂದು ಅವ್ಯವಸ್ಥೆಗಳಿಗೆ ಶಿಕ್ಷಣದ ಕೊರತೆ, ಆಡಳಿತದಲ್ಲಿನ ವೈಫಲ್ಯಗಳು ಕಾರಣವೇ ಹೊರತು ಜನರಲ್ಲ ಎಂದು ನಂಬೋಣವೇ?

ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT