ರಾಜಕಾರಣಿಗಳನ್ನೂ ಒಳಗೊಂಡಂತೆ ವ್ಯಕ್ತಿಗಳ ಕುರಿತು ಉತ್ಪ್ರೇಕ್ಷೆಯಿಂದ ಕೂಡಿದ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ, ಪ್ರಕಟಿಸುತ್ತಿವೆ ಎಂದು ಶಾಸನಸಭೆಯಲ್ಲಿ ಇತ್ತೀಚೆಗೆ ಬಿರುಸಿನ ಚರ್ಚೆ ನಡೆದಿದ್ದು ವರದಿಯಾಗಿದೆ. ರಾಜಕಾರಣಿಗಳ ಖಾಸಗಿ ಸಂಬಂಧಗಳಿಂದ ಅವರ ಅಧಿಕೃತ ಸಾರ್ವಜನಿಕ ಜವಾಬ್ದಾರಿಯ ಮೇಲೆ ಯಾವುದೇ ಪರಿಣಾಮ ಉಂಟಾಗದಿದ್ದಾಗಲೂ ಅಂತಹ ವಿಷಯಗಳನ್ನು ಪ್ರಸಾರ ಮಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. Trial by Media ಕೂಡದು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ.