ನೀಲಿ ಪ್ಯಾಕೆಟ್ ನಂದಿನಿ ಹಾಲಿನ ದರವು 27 ರೂಪಾಯಿಗಳಿದ್ದು, ಅರ್ಧ ಲೀಟರ್ ಹಾಲನ್ನು ಕೊಳ್ಳುವವರಿಗೆ ಚಿಲ್ಲರೆ ಸಮಸ್ಯೆ ಆಗದಂತೆ, 500 ಮಿಲಿ ಲೀಟರ್ ಹಾಲಿಗೆ 20 ಮಿಲಿ ಲೀಟರ್ ಹಾಲನ್ನು ವರ್ಧಿಸಿ 14 ರೂಪಾಯಿ ನಿಗದಿಪಡಿಸುವುದಾಗಿ ಹೇಳಿಕೆ ನೀಡಲಾಗಿತ್ತು. ಆದರೆ ಈಗ ಹಾಲಿನ ದರವನ್ನು 27 ರೂಪಾಯಿಯಿಂದ 28 ರೂಪಾಯಿಗೆ ಏರಿಸಿ ಚಿಲ್ಲರೆ ಸಮಸ್ಯೆಯನ್ನೇನೋ ನಿವಾರಿಸಿದರು. ಆದರೆ ಹಾಲಿನ ಗ್ರಾಹಕರಿಗೆ ಬೆಲೆಯಲ್ಲಿ ಲೀಟರಿಗೆ ಇನ್ನೂ ಒಂದು ರೂಪಾಯಿ ಹೆಚ್ಚಳ ಮಾಡಿ ಮತ್ತೆ ಬರೆ ಹಾಕಿದರು.

ಸರಕು ಹಾಗೂ ಸೇವೆಯಲ್ಲಿ ಮೇಲಿಂದ ಮೇಲೆ ದರವನ್ನು ಹೆಚ್ಚಿಸಿ ಜನ ಸಾಮಾನ್ಯರ ಬದುಕೇ ನರಕವಾಗುತ್ತಿದೆ. ಈ ಮೊದಲು ಹಾಲಿನ ದರವನ್ನು ಬೆಸ ಸಂಖ್ಯೆಯಲ್ಲಿ ನಿಗದಿ ಪಡಿಸಿದ್ದೇಕೆ ಮತ್ತು ಈಗ ಅದನ್ನು ಸರಿಪಡಿಸುವ ನಾಟಕವಾಡಿದ್ದೇಕೆ ? ಹಾಲಿನ ದರ 27 ರೂಪಾಯಿಗಳಿದ್ದಾಗ ಅರ್ಧ ಲೀಟರ್ಗೆ 14 ರೂಪಾಯಿಗಳನ್ನೇ ತೆತ್ತು ಜನರು ವಿಧಿ ಇಲ್ಲದೆ ಸುಮ್ಮನಾಗುತ್ತಿದ್ದರು. ಹಳೆಯ ಸರ್ಕಾರವೇ ಇರಲಿ ಅಥವಾ ಹೊಸ ಸರ್ಕಾರವೇ ಬರಲಿ, ಸರಕು ಮತ್ತು ಸೇವೆಗಳ ಶುಲ್ಕದ ಏರಿಕೆಯಲ್ಲಿ ಪ್ರಗತಿ ಕಂಡು ಬರುತ್ತಿದೆ.

ಯಾವ ಪಕ್ಷವೂ ಚುನಾವಣೆಯನ್ನು ಎದುರಿಸುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ, ಹಾಲಿ ಇರುವ ಸರಕು ಮತ್ತು ಸೇವೆಗಳ ಬೆಲೆಯನ್ನು ನಿಗದಿತ ಕಾಲದವರೆಗಾದರೂ ಏರಿಸುವುದಿಲ್ಲ ಎಂದು ಆಶ್ವಾಸನೆ ನೀಡುವುದಿಲ್ಲ. ವೋಟು ಮಾತ್ರ ಎಲ್ಲರಿಂದಲೂ ಬೇಕು. ಆದರೆ ಎಲ್ಲರಿಗೂ ಪ್ರಯೋಜನವಾಗುವಂತಹ ಕೆಲಸವನ್ನು ಯಾವ ಸರ್ಕಾರವೂ ಮಾಡುವುದಿಲ್ಲ.
-ಕೆ.ವಿ. ಸೀತಾರಾಮಯ್ಯ ,ಹಾಸನ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.