ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳು ಧ್ವನಿ ಎತ್ತಬೇಕು

Last Updated 14 ಮೇ 2014, 19:30 IST
ಅಕ್ಷರ ಗಾತ್ರ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ­ಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸು­ತ್ತಾರೆ. ಆದರೆ ಮುಂದೆ ಅವರಲ್ಲಿ ಹಲವರು ಶಿಕ್ಷಣ ಮುಂದು ವರಿಸದೇ ನಿಲ್ಲಿಸಿಬಿಡುತ್ತಾರೆ.

ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋ­ಧನಾ ವಿದ್ಯಾರ್ಥಿನಿಯೊಬ್ಬರು ಮಾರ್ಗ­ದರ್ಶ­ಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಆ ವಿದ್ಯಾರ್ಥಿನಿಯ ಧೈರ್ಯ ಮೆಚ್ಚುವಂತಹದ್ದೇ. ಹೆಣ್ಣುಮಕ್ಕಳು ಸಂಶೋಧನೆ ಮಾಡುವುದೇ ಕಷ್ಟಸಾಧ್ಯವಾಗಿದೆ. ಸರಿಯಾದ ಮಾರ್ಗದರ್ಶಕರ ಕೊರತೆಯಿಂದ ಹೆಣ್ಣು­ಮಕ್ಕಳು ಸಂಶೋಧನೆ ಮಾಡಲು ಮುಂದಾಗು­ವುದೇ ಇಲ್ಲ.

ಸಣ್ಣಪುಟ್ಟ ಕೆಲಸ ಹಿಡಿದು ಸಮಾಧಾನ ಪಟ್ಟುಕೊಳ್ಳುತ್ತಾರೆ ಇಲ್ಲವೇ ಮದುವೆ ಮಾಡಿ ಕೊಂಡು ಹೋಗುತ್ತಾರೆ. ಅವರ ಪ್ರತಿಭೆ, ಸಾಮರ್ಥ್ಯ ಅಲ್ಲೇ ಕಮರಿ ಹೋಗುತ್ತದೆ.

ಅನೇಕ ಹೆಣ್ಣುಮಕ್ಕಳು ನಾನಾ ತರಹದ ಕಿರಿಕಿರಿಗಳನ್ನು ಅನುಭವಿಸಿದರೂ  ತಮ್ಮ ವಿದ್ಯಾರ್ಥಿ ಜೀವನಕ್ಕೆ ಮತ್ತು ಭವಿಷ್ಯಕ್ಕೆ  ತೊಂದರೆ ಆಗುತ್ತದೆ ಎಂದು ಹೆದರಿ ಬಾಯಿ ಬಿಡುವು­ದಿಲ್ಲ.

ಹೆಣ್ಣುಮಕ್ಕಳ ಈ ಅಸಹಾಯಕ­ತೆ­­ಯನ್ನು ಬಳಸಿಕೊಂಡು ಅವರ ಮೇಲೆ ನಾನಾ ರೀತಿಯ ದೌರ್ಜನ್ಯಗಳು ನಡೆಯು­ತ್ತಲೇ ಇರುತ್ತವೆ. ಆದರೆ ಇದನ್ನು  ಮಹಿಳೆಯರು ಒಗ್ಗಟ್ಟಿನಿಂದ ಪ್ರತಿಭಟಿಸಿ­ದರೆ ಇತರರು ಬುದ್ಧಿ ಕಲಿಯ­ಬಹುದು. ಇಂದು ಹೆಣ್ಣು ಮಕ್ಕಳು ಧ್ವನಿ ಎತ್ತಲೇಬೆಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT