ಈಗ ಎಲ್ಲೆಡೆ ಮಹಿಳೆಯರ ‘ಆ ದಿನಗಳ’ ಕುರಿತು ಚರ್ಚೆ ನಡೆಯುತ್ತಿದೆ. ಆ 3–4 ದಿನಗಳಲ್ಲಿ ಮಹಿಳೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸ್ವಸ್ಥತೆ ಅನುಭವಿಸುತ್ತಾಳೆ. ಆಕೆಗೆ ವಿಶ್ರಾಂತಿ ನೀಡುವ ಸಲುವಾಗಿ ಅನೇಕ ರೂಢಿಗಳು ಇದ್ದವು. ಹಲವೆಡೆ ಈಗಲೂ ಇವೆ. ಆದರೆ ಅವು ಹಿಂಸೆಯ ರೂಪದಲ್ಲಿದ್ದರೆ ಖಂಡನಾರ್ಹ.

ಆ ದಿನಗಳಲ್ಲಿ ಪೂಜೆ ಮಾಡದಿರುವುದು ದೇವರಿಗೆ ಸಲ್ಲಿಸುವ ಗೌರವವೆಂದೇ ನಿಜ ಭಕ್ತರ ನಂಬಿಕೆ. ಯಾವ ಸಮಯದಲ್ಲಿಯೂ ಮಹಿಳೆಯರ ಪ್ರವೇಶ, ಪೂಜೆ ನಿಷಿದ್ಧವಿರುವ ದೇವಾಲಯಗಳಾದ ಶನಿ ಸಿಂಗನಾಪುರದಲ್ಲಿ ಪೂಜೆಗೆ ಮತ್ತು ಶಬರಿಮಲೈಗೆ ತೆರಳುವ ಪುರುಷರಿಗೆ ಸಾಮಗ್ರಿ ಅಣಿ ಮಾಡಿಕೊಡುವುದು ಮನೆಯ ಮಹಿಳೆಯರೇ ಆಗಿರುತ್ತಾರೆ.

ಈಚಿನ ವರ್ಷಗಳಲ್ಲಿ 8–9ನೇ ವಯಸ್ಸಿಗೆ ಬಾಲಕಿಯರು ಋತುಮತಿಯರಾಗುತ್ತಿದ್ದಾರೆ. ಆಟ ಆಡಿಕೊಂಡು ಇರಬೇಕಾದ ಪ್ರಾಥಮಿಕ ಶಾಲೆಯ ಮಕ್ಕಳು ತಿಂಗಳಿಗೊಮ್ಮೆ ‘ಪ್ಯಾಡ್’ ಧರಿಸಿ ಕಿರಿಕಿರಿ ಅನುಭವಿಸುವ ಪರಿಸ್ಥಿತಿ ಖಂಡಿತಾ ‘ಹ್ಯಾಪಿ ಟು ಬ್ಲೀಡ್’ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.