‘ಲೆನಿನ್ ಬದಲಿಗೆ ಭಗತ್ ಸಿಂಗ್ ಯಾಕಾಗದು?’ ಲೇಖನ ಓದಿ, ಇದು ‘ಅಚಾರಿತ್ರಿಕ’ವೆನಿಸಿದ್ದಷ್ಟೇ ಅಲ್ಲ, ‘ಅತಾರ್ಕಿಕ’ವೂ ಹೌದೆನಿಸಿತು.

‘ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಗಳನ್ನು ನೆಲಕ್ಕುರುಳಿಸಿದ ಬಿಜೆಪಿಯ ವಿಜಯೋತ್ಸಾಹಿ ದುರುಳರಿಗೆ ಅಸಡ್ಡೆಗಿಂತ ಹೆಚ್ಚಿನ ಬೆಲೆ ಕೊಡುವ ಅಗತ್ಯ ಇಲ್ಲ. ಆದರೆ, ಆ ಪ್ರತಿಮೆಗಳನ್ನು ಅಲ್ಲಿ ಸ್ಥಾಪಿಸಿದ ಜನರ ಬಗ್ಗೆ ಅನುಕಂಪ ಉಂಟಾಗುತ್ತದೆ ಮತ್ತು ಬೇಸರವೂ ಅನಿಸುತ್ತದೆ’ ಎಂದಿರುವ ಗುಹಾ ಅವರ ಮಾತು ಪ್ರಶ್ನಾರ್ಹ.

‘ಅಧಿಕೃತ ಎಡಪಕ್ಷಗಳು ಭಗತ್ ಸಿಂಗ್‍ನನ್ನು ಮರೆತಿವೆ’ ಎಂಬ ಅವರ ಮಾತು ಕೂಡ ಸತ್ಯಕ್ಕೆ ದೂರವಾಗಿದೆ. ಕಮ್ಯುನಿಸ್ಟ್ ಪಕ್ಷಗಳ ಕಚೇರಿ ಮತ್ತು ಕಾರ್ಯಕ್ರಮಗಳಲ್ಲಿ ಭಗತ್ ಸಿಂಗ್ ಚಿತ್ರ
ರಾರಾಜಿಸುತ್ತದೆ. ಹಾಗೆಯೇ ಡಾ. ಜಿ. ರಾಮಕೃಷ್ಣ ಅವರು ಬರೆದಿರುವ, ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ‘ಭಗತ್ ಸಿಂಗ್‍ರ ಜೀವನ ಚರಿತ್ರೆ’ಯ ಸುಮಾರು 60 ಸಾವಿರ ಪ್ರತಿಗಳಾದರೂ ಮಾರಾಟವಾಗಿವೆ. ಇದೇ ಪ್ರಕಾಶನ ಪ್ರಕಟಿಸಿದ, ಭಗತ್ ಸಿಂಗ್ ಬರೆದ ‘ನಾನೇಕೆ ನಾಸ್ತಿಕ’ ಕೃತಿಯು 14ನೇ ಮುದ್ರಣ ಕಂಡಿದೆ. ಹೀಗಿರುವಾಗ ಗುಹಾ ಅವರ ಮಾತಿಗೆ ಯಾವುದೇ ಅರ್ಥವಿಲ್ಲ.

-ಡಾ. ಎನ್.ಗಾಯತ್ರಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.