ಶನಿವಾರ, ಸೆಪ್ಟೆಂಬರ್ 25, 2021
23 °C

‘ಭಾರತವನ್ನು ತನಗಿರುವ ಬೆದರಿಕೆ ಎಂದು ಭಾವಿಸಿರುವ ಪಾಕ್‌ನಿಂದ ಉಗ್ರವಾದಕ್ಕೆ ಪೋಷಣೆ’

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ತನಗಿರುವ ದೊಡ್ಡ ಬೆದರಿಕೆ ಎಂದರೆ ಅದು ಭಾರತ ಎಂದು ಭಾವಿಸಿಕೊಂಡಿರುವ ಪಾಕಿಸ್ತಾನವು, ಭಾರತದ ವಿರುದ್ಧ ಭಯೋತ್ಪಾದನಾ ಗುಂಪುಗಳನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಮೂಲದ, ಕೇಂದ್ರ ಗುಪ್ತಚರ ವಿಭಾಗದ(ಸಿಐಎ)  ಮಾಜಿ ಅಧಿಕಾರಿ ಮೈಕೆಲ್‌ ಮೊರೆಲ್‌ ಹೇಳಿದ್ದಾರೆ. 

ಸಿಐಎನಲ್ಲಿ ಹಂಗಾಮಿ ನಿರ್ದೇಶಕರಾಗಿದ್ದ ಮೈಕೆಲ್‌ ಮೊರೆಲ್‌, ಶುಕ್ರವಾರ ಚರ್ಚೆಯೊಂದರಲ್ಲಿ ಮಾತನಾಡುತ್ತಾ ‘ಪಾಕಿಸ್ತಾನವನ್ನು ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರ,’ ಎಂದೂ ಕರೆದಿದ್ದಾರೆ. ‘ಭಯೋತ್ಪಾದನ ಗುಂಪುಗಳನ್ನು ಹುಟ್ಟುಹಾಕಿರುವ ಪಾಕಿಸ್ತಾನವು ಅವುಗಳನ್ನು ಭಾರತವನ್ನು ಹಣಿಯಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ,’ ಎಂದು ಅವರು ನೇರವಾಗಿ ಹೇಳಿದ್ದಾರೆ. 

‘ಹೀಗೆ ಭಾರತದ ವಿರುದ್ಧ ಎತ್ತಿಕಟ್ಟಲೆಂದೇ ಸೃಷ್ಟಿ ಮಾಡಿದ ಉಗ್ರ ಗುಂಪುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈಗ ಪಾಕಿಸ್ತಾನಕ್ಕೇ ಸಾಧ್ಯವಾಗುತ್ತಿಲ್ಲ. ಇದು ಅವರಿಗೆ ಗೊತ್ತಾಗುತ್ತಲೂ ಇಲ್ಲ. ಕ್ರಮೇಣ ಆ ಗುಂಪುಗಳೇ ಅವರ ಮೇಲೆ ದಾಳಿ ಮಾಡಲು ನಿಲ್ಲಲಿವೆ. ಕಟ್ಟಕಡೆಯದಾಗಿ ಹೇಳಬೇಕೆಂದರೆ, ಪಾಕಿಸ್ತಾನವು ಈ ಜಗತ್ತಿನ ಅತಿ ದೊಡ್ಡ ಘಾತಕ ರಾಷ್ಟ್ರ,’ ಎಂದು ಅವರು ಹೇಳಿದ್ದಾರೆ. 

ಅಲ್‌ಖೈದದ ಮುಖ್ಯಸ್ಥನಾಗಿದ್ದ ಒಸಮಾ ಬಿನ್‌ ಲ್ಯಾಡನ್‌ನ್ನು ಪಾಕಿಸ್ತಾನದ ನೆಲದಲ್ಲೆ ಕೊಂದಿದ್ದ ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮೈಕೆಲ್‌ ಮೊರೆಲ್‌ ಪಾಕಿಸ್ತಾನದ ವಿರುದ್ಧ ಮತ್ತಷ್ಟು ಟೀಕೆ ಮಾಡಿದ್ದಾರೆ. ‘ ಪಾಕಿಸ್ತಾನದಲ್ಲಿ ಜನಸಂಖ್ಯಾ ಸ್ಫೋಟವಾಗುತ್ತಿದೆ. ಜನಸಂಖ್ಯೆ ಎಂಬುದು ಅಲ್ಲಿ ಭೀಕರಗೊಳ್ಳುತ್ತಾ ಹೋಗುತ್ತಿದೆ. ಆ ದೇಶದ ಆರ್ಥಿಕತೆ ಕುಸಿಯುತ್ತಾ ಸಾಗಿದೆ. ಹೀಗಾಗಿ ಅಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಶಿಕ್ಷಣ ರಂಗ ಈಗಾಗಲೇ ಕುಸಿದು ಬಿದ್ದಿದೆ. ಹೀಗಾಗಿ ಅಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಮದರಸಾಗಳಿಗೆ ಕಳುಹಿಸುತ್ತಿರುವುದರಲ್ಲಿ ಯಾವುದೇ ಅಚ್ಚರಿಯೂ ಇಲ್ಲ,’ ಎಂದು ಅವರು ಕಿಡಿಕಾರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು