ಫುಲ್ ಟೈಮ್‌ಪಾಸ್

7
parul yadav-ramesh aravind

ಫುಲ್ ಟೈಮ್‌ಪಾಸ್

Published:
Updated:
Prajavani

92.7 ಬಿಗ್ ಎಫ್ಎಂನ ಆರ್.ಜೆ. ಪ್ರದೀಪ ಅವರು ಪುನಃ ರೇಡಿಯೊಗೆ ಮರಳಿದ್ದಾರೆ. ಈ ಬಾರಿ ಅವರು, ‘ಫುಲ್ ಟೈಮ್ ಪಾಸ್’ ಎನ್ನುವ ಹೊಸ ಷೋ ಅನ್ನು ಪ್ರತಿದಿನ ಸಂಜೆ 5ರಿಂದ ರಾತ್ರಿ 9ರವರೆಗೆ ನಡೆಸಿಕೊಡಲಿದ್ದಾರೆ.

‘ಯೋಚನೆ ಯಾಕೆ, ಚೇಂಜ್ ಓಕೆ’ ಎನ್ನುವ ಟ್ಯಾಗ್‌ಲೈನ್ ಹೊಂದಿರುವ ಈ ಕಾರ್ಯಕ್ರಮ ಸಂಗೀತಪ್ರೇಮಿಗಳ ಹೃದಯವನ್ನು ಮುಟ್ಟುವ ಹಾಡುಗಳು, ಹಾಸ್ಯಭರಿತ ಸಂಭಾಷಣೆಗಳನ್ನೊಳಗೊಂಡಿದೆ.

ಕೋರಮಂಗಲದ ಬಿಗ್ ಎಫ್‌.ಎಂ. ಸ್ಟುಡಿಯೊದಲ್ಲಿ ಈಚೆಗೆ ಹೊಸ ಷೋಗೆ ಚಾಲನೆ ನೀಡಿದ ನಟ ರಮೇಶ್ ಅರವಿಂದ್,  ರೇಡಿಯೋದಿಂದಲೇ ತಾವು ವೃತ್ತಿ ಜೀವನ ಆರಂಭಿಸಿದ ಬಗೆಯನ್ನು ಹಂಚಿಕೊಂಡರು. ಅವರ ನಿರ್ದೇಶನದ ‘ಬಟರ್‌ಫ್ಲೈ’ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ರೇಡಿಯೊಗೆ ಪುನರಾಗಮನದ ಬಗ್ಗೆ ಮಾತನಾಡಿದ ಆರ್‌ಜೆ ಪ್ರದೀಪ, ‘ನಾನು ಸಂಪೂರ್ಣವಾಗಿ ಭರವಸೆ ಹೊಂದಿದ ಬಿಗ್ ಎಫ್ಎಂಗೆ ಮರಳಲು ನನಗೆ ಬಹಳ ಸಂತೋಷವಿದೆ. ‘ಫುಲ್ ಟೈಮ್ ಪಾಸ್’ ಎಂಬುದು ಆಸಕ್ತಿದಾಯಕ ಪರಿಕಲ್ಪನೆಯಾಗಿದೆ ಎಂದರು.

‘ಬಟರ್‌ಫ್ಲೈ’ ಸಿನಿಮಾದ ನಾಯಕಿ ನಟಿ ಪಾರೂಲ್ ಯಾದವ್ ಮಾತನಾಡಿ, ‘ಬಹು ನಿರೀಕ್ಷೆಯ ಚಿತ್ರ ‘ಬಟರ್‌ಫ್ಲೈ’ ತೆರೆ ಕಾಣಲು ಸಜ್ಜಾಗಿದ್ದು, ಇದೇ ಸಂದರ್ಭದಲ್ಲಿ ಬಿಗ್ ಎಫ್ಎಂ ಕೂಡಾ ಹೊಸ ಕಾರ್ಯಕ್ರಮವನ್ನೂ ಪ್ರಾರಂಭಿಸುತ್ತಿರುವುದು ಸಂತಸದ ಸುದ್ದಿ’ ಎಂದು ಹರ್ಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !