ಸಿರ್ಸಿ ವೃತ್ತದ ಪ್ಲೈ ಓವರ್‌ ಡಾಂಬರೀಕರಣಕ್ಕೆ ಒಪ್ಪಿಗೆ

7

ಸಿರ್ಸಿ ವೃತ್ತದ ಪ್ಲೈ ಓವರ್‌ ಡಾಂಬರೀಕರಣಕ್ಕೆ ಒಪ್ಪಿಗೆ

Published:
Updated:

ಬೆಂಗಳೂರು: ಸಿರ್ಸಿ ವೃತ್ತದ ಪ್ಲೈ ಓವರ್‌ಗೆ ಮತ್ತೆ ಡಾಂಬರು ಹಾಕುವ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಪ್ಪಿಗೆ ಸೂಚಿಸಿದೆ. 

ಇತ್ತೀಚೆಗೆ  ಸುರಿದ ಅತಿಯಾದ ಮಳೆ ಮತ್ತು ಗುತ್ತಿಗೆದಾರರ ನಿರ್ವಣೆಯ ಕೊರತೆಯಿಂದ ಸಿರ್ಸಿ ವೃತ್ತದ ಪ್ಲೈ ಓವರ್ ಸಂಪೂರ್ಣ ಹದಗೆಟ್ಟಿರುವುದರಿಂದ, ರಸ್ತೆ ಸಾರಿಗೆ ಅಸ್ತವ್ಯಸ್ತಗೊಂಡಿದ್ದು,  ಪ್ರಸ್ತುತ ಈ ಮರು ಡಾಂಬರೀಕರಣಕ್ಕೆ  ಬಿಬಿಎಂಪಿ  ₹ 4.02 ಕೋಟಿ ಅನುಮೋದನೆ ನೀಡಿದೆ.

ಹಿಂದಿನ ವರ್ಷ 40 ಮೀ.ಮೀ. ಉದ್ದದ ಪ್ಲೈ ಓವರ್‌ನ ಡಾಂಬರೀಕರಣಕ್ಕೆ  ₹ 2.5 ಕೋಟಿ ವೆಚ್ಚ ತಗುಲಿತ್ತು ಎಂದು ತಿಳಿಸಿದೆ. 

‘ಬಿಬಿಎಂಪಿ ಕೌನ್ಸಿಲ್‌ನ ಒಪ್ಪಿಗೆ ತರುವಾಯ ಮರು ಡಾಂಬರೀಕಣಕ್ಕೆ ಚಾಲನೆ ನೀಡಲಾಗುವುದು‘ ಎಂದು ಕೇಂದ್ರ ಯೋಜನೆಯ ಮುಖ್ಯ ಎಂಜಿನಿಯರ್ ಕೆ. ಟಿ. ನಾಗರಾಜ್  ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತಿ ವರ್ಷ ಪದೇ ಪದೇ ಈ ರೀತಿಯ ಹಣ ವೆಚ್ಚವಾಗುತ್ತಿರುವುದು ಕಂಡು ಆಕ್ರೋಶಗೊಂಡ ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರಿಂದ ಸ್ಥಿರ ಭದ್ರತಾ ಠೇವಣಿ ಮತ್ತು ಆರಂಭಿಕ ನಗದು ಠೇವಣಿಯ ಮೊತ್ತ ₹ 11.23 ಲಕ್ಷ  ಮುಟ್ಟುಗೋಲು ಹಾಕಿಕೊಂಡಿದೆ. 

2017ರಲ್ಲಿ ಸುರಿದ ಅವ್ಯಾಹತ ಮಳೆ ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ  ಈ ಪ್ಲೈ ಓವರ್‌ನ ಮೇಲ್ಮೈ ರಸ್ತೆ  ಸಂಪೂರ್ಣ ಕಿತ್ತು ಹೋಗಿದ್ದು, ಅದನ್ನು ಪುನಃ ಕೆರೆದು ಹೊಸ ಡಾಂಬರ್‌ ಹಾಕಿ ಸುಸಜ್ಜಿತ ರಸ್ತೆಯನ್ನಾಗಿಸಬೇಕಾಗಿದೆ. 

ಲೋಕಾಯುಕ್ತ ರಸ್ತೆಯ ಡಾಂಬರೀಕರಣದ ಜವಾಬ್ದಾರಿಯನ್ನು ಸಹ ನಿರ್ವಹಿಸಬೇಕಾದ ದಾಖಲೆಗಳು ತಯಾರಾಗಿವೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಮಿಲ್ಲಿಂಗ್ ಕೌನ್ಸಿಲ್ ಸಂಸ್ಥೆ ಪ್ಲೈ ಓವರ್‌ಗಳ ರಸ್ತೆ ಸ್ಥಳವನ್ನು ಹಿಗ್ಗಿಸಿ, ಅದಕ್ಕೆ ಸೂಕ್ತವಾಗಿ ಡಾಂಬರೀಕಣ ಮಾಡಲು 33.28 ಕೋಟಿ ರೂ. ಗಳ ಅನುಮೋದನೆ ನೀಡಲಾಗಿದೆ. 

ರಸ್ತೆಯಲ್ಲಿ  ಗುಂಡಿಗಳು ಮತ್ತು ರಸ್ತೆ ಒಡೆದು ಹೋಗುವುದರಿಂದ ವಾಹನ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿರುವುದರಿದ ತ್ವರಿತ ಗತಿಯಲ್ಲಿ ರಸ್ತೆ ಸರಿಪಡಿಸುವ ಸಲುವಾಗಿ ಸಾಯಿ ತ್ರಿಶಾ ಇನ್ಪ್ರಾ ಎಂಜಿನಿಯರ್‌ ಸಂಸ್ಥೆಗೆ ಈ ಯೋಜನೆ ನೀಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !