ಸುರಿನಾಮ್‌ಗೆ ಆರ್ಥಿಕ ನೆರವು: ರಾಷ್ಟ್ರಪತಿ ಘೋಷಣೆ

7
ಸುರಿನಾಮ್‌ನಲ್ಲಿ ಕೋವಿಂದ್

ಸುರಿನಾಮ್‌ಗೆ ಆರ್ಥಿಕ ನೆರವು: ರಾಷ್ಟ್ರಪತಿ ಘೋಷಣೆ

Published:
Updated:
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ತಮ್ಮ ಅರಮನೆಗೆ ಬರಮಾಡಿಕೊಂಡ ಅಧ್ಯಕ್ಷ ಡಿಸೈರ್‌ ಡೆಲಾನೊ ಬೌಟೆರ್ಸ್‌ – ಪಿಟಿಐ ಚಿತ್ರ

ಪರಮಾರಿಬೊ: ‘ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಹಭಾಗಿತ್ವವನ್ನು ಮುಂದುವರಿಸುವ ನಿಟ್ಟಿನಲ್ಲಿ ಸುರಿನಾಮ್‌ ದೇಶಕ್ಕೆ ಭಾರತವು ₹ 210 ಕೋಟಿ ಸಾಲ ಹಾಗೂ ₹135 ಕೋಟಿ ಆರ್ಥಿಕ ನೆರವು ನೀಡಲಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಘೋಷಿಸಿದರು.

ಲ್ಯಾಟಿನ್‌ ಅಮೆರಿಕದ ಸುರಿನಾಮ್‌ಗೆ ಮೂರು ದಿನಗಳ ಪ್ರವಾಸಕ್ಕೆ ಬಂದಿರುವ ಅವರು ಅಧ್ಯಕ್ಷ ಡಿಸೈರ್‌ ಡೆಲಾನೊ ಬೌಟೆರ್ಸ್‌ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.

‘ಪಿಕಿನ್‌ಸಾರೊನಾರಿಯಾ ಪ್ರದೇಶ ದಲ್ಲಿ ವಿದ್ಯುತ್‌ ಸರಬರಾಜು ಯೋಜನೆಗೆ ₹210 ಕೋಟಿ ಸಾಲ ಹಾಗೂ 49 ಗ್ರಾಮಗಳಿಗೆ ಸೋಲಾರ್‌ ವಿದ್ಯುತ್‌ ಒದಗಿಸಲು ₹135 ಕೋಟಿ ಆರ್ಥಿಕ ನೆರವು ನೀಡಲಾಗುತ್ತದೆ, ಅಲ್ಲದೇ ಚೇತಕ್‌ ಹೆಲಿಕಾಪ್ಟರ್‌ಗಳ ನಿರ್ವಹಣೆಗಾಗಿ ₹23 ಕೋಟಿ ನೀಡಲಾಗುತ್ತದೆ’ ಎಂದು ಕೋವಿಂದ್‌ ಹೇಳಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !