ಪೆಟ್ರೋಲ್‌ ದರ ಇಳಿಕೆ ಸ್ಥಗಿತ

7
ಹಿಂದಿನ ಯುಪಿಎ ಸರ್ಕಾರದ ಅವಧಿಗಿಂತಲೂ ಗರಿಷ್ಠ ಮಟ್ಟದಲ್ಲಿ ಇಂಧನ ಬೆಲೆ

ಪೆಟ್ರೋಲ್‌ ದರ ಇಳಿಕೆ ಸ್ಥಗಿತ

Published:
Updated:
ಪೆಟ್ರೋಲ್‌ ದರ ಇಳಿಕೆ ಸ್ಥಗಿತ

ನವದೆಹಲಿ: ಹದಿನೈದು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಗಳು ಎರಡು ದಿನಗಳಿಂದ ಯಾವುದೇ ಏರಿಳಿತ ಕಂಡಿಲ್ಲ.

ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಇಂಧನಗಳ ಬೆಲೆ ಇಳಿಕೆಗೆ ಹದಿನೈದು ದಿನಗಳ ಹಿಂದೆ ಚಾಲನೆ ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಎರಡು ದಿನಗಳಿಂದ ಏರಿಳಿತದ ನಿರ್ಧಾರ ಕೈಬಿಟ್ಟಿವೆ.

ಇದೇ 12ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ 12 ಮತ್ತು 10 ಪೈಸೆಗಳಷ್ಟು ಕಡಿತ ಮಾಡಿದ ನಂತರ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

ಮೇ 29ರಂದು ಪೆಟ್ರೋಲ್‌ ₹ 78.43 ಮತ್ತು ಡೀಸೆಲ್‌ ಬೆಲೆ ₹ 69.31ಕ್ಕೆ ತಲುಪಿತ್ತು. ಅಲ್ಲಿಂದಾಚೆಗೆ ಬೆಲೆಗಳನ್ನು ಇಳಿಸುತ್ತ ಬರಲಾಗಿದೆ. ಆರಂಭದಲ್ಲಿ ಒಂದು ಪೈಸೆಯಿಂದ ತೆರಿಗೆ ಇಳಿಕೆ ಜಾರಿಗೆ ಬಂದಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ವರ್ಧನೆಯ ಕಾರಣಕ್ಕೆ ಬೆಲೆ ಇಳಿಸಲಾಗಿತ್ತು. ಹದಿನೈದು ದಿನಗಳಲ್ಲಿ ಪೆಟ್ರೋಲ್‌ ₹ 2 ಮತ್ತು ಡೀಸೆಲ್‌ ಬೆಲೆ ₹ 1.46 ರಷ್ಟು ಅಗ್ಗವಾಗಿದೆ.

ಈಗಿನ ಬೆಲೆ ಮಟ್ಟವೂ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಗರಿಷ್ಠ ದರಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇದೆ.

ಈ ವರ್ಷದ ಜನವರಿ 1ರಿಂದ ಇದುವರೆಗಿನ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಕ್ರಮವಾಗಿ ₹ 6.46 ಮತ್ತು ₹ 8.41ರಷ್ಟು ಏರಿಕೆ ಕಂಡಿವೆ.

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 19 ದಿನಗಳ ಕಾಲ ಬೆಲೆ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮೇ 14 ರಿಂದ ಬೆಲೆ ಏರಿಕೆ ಜಾರಿಗೆ ಬಂದು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹ 3.80 ಮತ್ತು ಡೀಸೆಲ್‌ ₹ 3.38ರವರೆಗೆ ತುಟ್ಟಿಯಾಗಿತ್ತು.

**

₹ 76.06: 2013ರ ಸೆಪ್ಟೆಂಬರ್‌ 14ರಲ್ಲಿನ ಬೆಲೆ

₹ 76.43: 2018ರ ಜೂನ್‌ 14ರಲ್ಲಿನ ಬೆಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry