ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಹೆಣ್ಣುಮಕ್ಕಳಿಗಾಗಿ ದುಡಿಯಲು ಬಯಸುತ್ತೇನೆ’

ಪಾಕಿಸ್ತಾನದ ಯುವ ಹೋರಾಟಗಾರ್ತಿ ಮಲಾಲ ಇಂಗಿತ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ದಾವೋಸ್‌ : ‘ಭಾರತಕ್ಕೆ ಹೋಗಿ ಅಲ್ಲಿನ ಹೆಣ್ಣುಮಕ್ಕಳಿಗಾಗಿ ದುಡಿಯಲು ಬಯಸುತ್ತೇನೆ’ ಎಂದು ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಾಲಾಲ ಯೂಸುಫೈ ಹೇಳಿದ್ದಾರೆ. ಭಾರತೀಯರಿಂದ ಸಿಕ್ಕಿದ ಪ್ರೀತಿಯ ಕಾರಣದಿಂದ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ(ವರ್ಲ್ಡ್ ಎಕನಾಮಿಕ್‌ ಫೋರಂ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಮಲಾಲ, ‘ಭಾರತೀಯರಿಂದ ಸಿಕ್ಕಿದ ಪ್ರೀತಿ ಮತ್ತು ಪ್ರೋತ್ಸಾಹ ಅನನ್ಯವಾದುದು. ಪ್ರೋತ್ಸಾಹ ನೀಡುವ ಅನೇಕ ಪತ್ರಗಳು ನನಗೆ ಬಂದಿವೆ. ಅದಕ್ಕಾಗಿ ಪ್ರತಿ ಭಾರತೀಯರಿಗೂ  ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಪತ್ರ ಉಲ್ಲೇಖ: ಭಾರತದ ಪ್ರಧಾನಿಯಾಗಬೇಕು ಎಂದು ಬಯಸಿರುವ ಹುಡುಗಿಯೊಬ್ಬಳು ಬರೆದಿರುವ ಪತ್ರವನ್ನು ಮಲಾಲ ಉಲ್ಲೇಖಿಸಿದರು. ‘ಮುಂದೊಂದು ದಿನ ನಾವಿಬ್ಬರೂ ಪ್ರಧಾನಮಂತ್ರಿಗಳಾಗಬೇಕು. ಇಬ್ಬರೂ ಸೇರಿ ಉಭಯ ರಾಷ್ಟ್ರಗಳಲ್ಲಿ ಶಾಂತಿ ನೆಲೆಸುವಂತೆ ಮಾಡೋಣ ಎಂದು ಬರೆದಿದ್ದಳು. ಅದು ನನ್ನ ಹೃದಯವನ್ನು ತಟ್ಟಿತು. ಮುಂದಿನ ಜನಾಂಗ ಶಿಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ನಾಯಕರಾಗಲು ಬಯಸುತ್ತಿದ್ದಾರೆ. ದೇಶದ ಪ್ರಧಾನಮಂತ್ರಿ, ಅಧ್ಯಕ್ಷರಾಗಲು ಬಯಸುತ್ತಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತಿದ್ದಾರೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT