ಪ್ರಿಯಾಂಕಾ ಮಾಲಾರ್ಪಣೆ ಬಳಿಕ ಶಾಸ್ತ್ರಿ ಪ್ರತಿಮೆ ಶುದ್ಧೀಕರಿಸಿದ ಕಾರ್ಯಕರ್ತರು

ಗುರುವಾರ , ಏಪ್ರಿಲ್ 25, 2019
33 °C

ಪ್ರಿಯಾಂಕಾ ಮಾಲಾರ್ಪಣೆ ಬಳಿಕ ಶಾಸ್ತ್ರಿ ಪ್ರತಿಮೆ ಶುದ್ಧೀಕರಿಸಿದ ಕಾರ್ಯಕರ್ತರು

Published:
Updated:

ವಾರಾಣಸಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾರಾಣಸಿಯಲ್ಲಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಮೆಯನ್ನು ‘ಶುದ್ಧೀ’ಕರಿಸಿದ್ದಾರೆ. 

ಪ್ರಿಯಾಂಕಾ ಅವರು ಅಲ್ಲಿಂದ ಹೋದ ಕೂಡಲೇ ಹತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಗಂಗಾಜಲದಿಂದ ಪ್ರತಿಮೆಯನ್ನು ತೊಳೆದರು. 

ಪ್ರಿಯಾಂಕಾ ಅವರ ಗಂಡನ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆ. ಅಂತಹ ವ್ಯಕ್ತಿಯ ಹೆಂಡತಿ ಶಾಸ್ತ್ರಿ ಪ್ರತಿಮೆಯನ್ನು ಮುಟ್ಟಲು ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಶಾಸ್ತ್ರಿ ಅವರು ಕಾಂಗ್ರೆಸ್‌ನ ನಾಯಕರು. ಬೇರೆ ಪಕ್ಷದ ನಾಯಕರು ತಮ್ಮವರು ಎಂದು ಹೇಳಿಕೊಳ್ಳುವುದು ಬಿಜೆಪಿಗೆ ಚಟವಾಗಿದೆ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 30

  Happy
 • 3

  Amused
 • 0

  Sad
 • 4

  Frustrated
 • 49

  Angry

Comments:

0 comments

Write the first review for this !