ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಮ್‌ಸ್ಟರ್‌ ಡಾಮ್‌ನಲ್ಲಿ ವಿಶಿಷ್ಟ ಕಾರ್ಪೆಟ್‌

Last Updated 27 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನೆದರ್ಲೆಂಡ್‌ನ ಆ್ಯಮ್‌ಸ್ಟರ್‌ಡಾಮ್‌ನಲ್ಲಿ ಸುಮಾರು 180 ರಾಷ್ಟ್ರಗಳ ಜನರು ನೆಲೆಸಿದ್ದಾರೆ. ಇವರೆಲ್ಲರೂ ಒಂದೇ ದೇಶದ ಪ್ರಜೆಗಳಂತೆ ಬಾಳುತ್ತಿದ್ದಾರೆ. ಈ ಒಂದಾಗಿ ಬಾಳುವ ಪರಿಕಲ್ಪನೆಯನ್ನೇ ಆಧಾರ ವಾಗಿಟ್ಟುಕೊಂಡು ಬಾರ್ಬರಾ ಬ್ರೇಕ್‌ಮನ್‌ ಎಂಬ ಕಲಾವಿದೆ ವಿಶಿಷ್ಟ ಕಾರ್ಪೆಟ್‌ (ನೆಲಹಾಸು) ತಯಾರಿಸಿದ್ದಾರೆ. ಆ ನೆಲಹಾಸು ಇಲ್ಲಿನ ಸ್ಕಟ್ಟರ್ಸ್‌ ಗ್ಯಾಲರಿಯಲ್ಲಿದೆ.

ಕಲಾವಿದೆ ಬಾರ್ಬರಾ, ಆ್ಯಮ್‌ಸ್ಟರ್‌ಡಾಮ್‌ನಲ್ಲಿ ವಾಸವಾಗಿರುವ ಬೇರೆ ಬೇರೆ ದೇಶದ ಜನರ ವಿಶಿಷ್ಟ ಉಡುಗೆಗಳನ್ನು ಹತ್ತು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. 2000ನೇ ಇಸವಿಯಿಂದ ಈ ಅಧ್ಯಯನ ಆರಂಭವಾಗಿದೆ. ಇದರಲ್ಲಿ ಉಡುಗೆ ಮಾತ್ರವಲ್ಲ, ವಿವಿಧ ದೇಶಗಳ ಬಾವುಟ, ನೆಲಹಾಸು, ಮೇಜಿನ ಮೇಲಿನ ಹಾಸು, ಧರಿಸುವ ಟೋಪಿಗಳ ವಿನ್ಯಾಸ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದುದನ್ನು ಆಯ್ದುಕೊಂಡು ಕೃತಿಗಿಳಿಸಿದ್ದಾರೆ. ಬೆಲ್ಜಿಯಂ ದೇಶದ ಲೇಸ್‌ಗಳು, ಟರ್ಕಿಯ ಕಾರ್ಪೆಟ್‌ಗಳು, ದಕ್ಷಿಣ ಆಫ್ರಿಕಾದ ‘ಝುಲು’ ಉಡುಪುಗಳು.. ಇಂಥವರು ನೆಲಹಾಸಿನಲ್ಲಿ ಸ್ಥಾನ ಪಡೆದುಕೊಂಡ ವಸ್ತುಗಳು.

ಈ ನೆಲಹಾಸನ್ನು ಜೂನ್ 2012ರಲ್ಲಿ ಆ್ಯಮ್‌ಸ್ಟರ್‌ಡಾಮ್‌ನ ಸ್ಕಟ್ಟರ್ಸ್ ಗ್ಯಾಲರಿಯಲ್ಲಿ ತಾತ್ಕಾಲಿಕ ಪ್ರದರ್ಶಿಸಲಾಗಿತ್ತು. ಆಗ, ನೆದರ್ಲೆಂಡ್‌ನ ಶ್ರೇಷ್ಠ ಹಾಸ್ಯಕಲಾವಿದರಾದ ಯಾನ್ - ಯಾಪ್ ವಾನ್‌ಡೆರ್ ವಾಲ್ ಅವರು ಪ್ರದರ್ಶನ ಉದ್ಘಾಟಿಸಿದ್ದರು. ಜನಪ್ರಿಯವಾದ ಈಗ ನೆಲಹಾಸಿನ ಪ್ರದರ್ಶನವನ್ನು ಅದೇ ಸ್ಥಳದಲ್ಲಿ ಶಾಶ್ವತವಾಗಿ ಉಳಿಸಲಾಗಿದೆ. ಜಕಾರ್ಡ್ ನೇಯ್ಗೆ ಹಾಗೂ ಎಂಬ್ರಾಯಿಡರಿಗಳಿಂದ ತಯಾರಾದ ಈ 40×3.2 ಮೀಟರ್ ಅಳತೆಯ ಕಾರ್ಪೆಟ್‌ನಲ್ಲಿ ಒಟ್ಟು ನಲುವತ್ತಾರು ಸಾಲುಗಳಿವೆ. ಪ್ರತಿ ಸಾಲಿನಲ್ಲಿ ನಾಲ್ಕು ಚಿತ್ರಗಳಿವೆ. ಡೆಸ್ಸೋ ಎಂಬ ಸಂಸ್ಥೆ ಈ ಕಾರ್ಪೆಟ್‌ ತಯಾರಿಗೆ ಪ್ರಾಯೋಜನೆ ನೀಡಿದೆ.

‘ನಾವು’ ಮತ್ತು ‘ಅವರು’ ಎಂಬ ಮಾತು ಗಳನ್ನು ಬಿಟ್ಟು ನಮ್ಮ ವೈವಿಧ್ಯವನ್ನು ಹೆಮ್ಮೆಯಿಂದ ಆಚರಿಸೋಣ ಎಂಬ ಸಂದೇಶವನ್ನು ಈ ಕಲಾಕೃತಿ ಸಾರುತ್ತದೆ (My City: Celebration of Diversity). ಅಂದ ಹಾಗೆ ಈ ನೆಲಹಾಸಿನ ರಚನೆಯಲ್ಲಿ ’44 ಬಿ’ ಸ್ಥಾನ ಭಾರತದ್ದು. ಇದರಲ್ಲಿ ರಾಜಸ್ಥಾನದ ಪೋಷಾಕಿನ ಚಿತ್ತಾರಗಳನ್ನು ರಚಿಸ ಲಾಗಿದೆ. ಆಮ್‌ಸ್ಟರ್‌ಡಾಮ್‌ಗೆ ಭೇಟಿ ನೀಡಿದಾಗ, ಈ ಮ್ಯೂಸಿಯಂಗೆ ಒಮ್ಮೆ ಹೋಗಿ ಬನ್ನಿ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT