ಬುಧವಾರ, ಜನವರಿ 22, 2020
24 °C

ಉದ್ಯೋಗ ಪ್ರವಾಸಕ್ಕೆ ‘ಮ್ಯಾಜಿಕ್ ಸ್ಟೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಲಸದಿಂದ ಬಿಡುವು ಪಡೆದು ತಿರುಗಾಟಕ್ಕೆ ಹೊರಟಂತೆ, ಉದ್ಯೋಗದ ಭಾಗವಾಗಿ ಸಹ ಪ್ರವಾಸ ಕೈಗೊಳ್ಳುವ ಸಂದರ್ಭಗಳು ಇರುತ್ತವೆ. ಇಂತಹ ಪ್ರವಾಸದ ಸ್ವರೂಪ, ಅವಶ್ಯಕತೆಗಳು ಭಿನ್ನ. ಉದ್ಯಮ/ಉದ್ಯೋಗ ಪ್ರವಾಸಕ್ಕೆ ಸಕಲ ನೆರವು ಒದಗಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಮ್ಯಾಜಿಕ್ ಸ್ಟೇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅಲ್ಪಾವಧಿ ಹಾಗೂ ದೀರ್ಘಾವಧಿಗೆ ಸಕಲ ಸೌಲಭ್ಯಗಳನ್ನೊಳಗೊಂಡ ಅಪಾರ್ಟ್‌ಮೆಂಟ್ ಹಾಗೂ ವಿಲ್ಲಾಗಳನ್ನು ಬಾಡಿಗೆಗೆ ಒದಗಿಸುತ್ತದೆ ಈ ಸಂಸ್ಥೆ.

‘ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಾರ್ಯನಿಮಿತ್ತ ಪ್ರವಾಸ ಕಳಿಸುವಾಗ ನಮ್ಮ ಮೂಲಕ ವಸತಿ ವ್ಯವಸ್ಥೆ ಮಾಡಿದಲ್ಲಿ, ವೈ ಫೈ, ಪ್ರಿಂಟರ್, ಕಚೇರಿ ಸೌಲಭ್ಯ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಂತಹ ಅಪಾರ್ಟ್‌ಮೆಂಟ್‌ಗಳನ್ನು ಒದಗಿಸಲಾಗುತ್ತದೆ’ ಎಂದು ಮ್ಯಾಜಿಕ್ ಸ್ಟೇ ಹೇಳಿಕೊಳ್ಳುತ್ತದೆ. ರಿಯಲ್ ಎಸ್ಟೇಟ್ ಸಂಸ್ಥೆಗಳು ಹಾಗೂ ಸೇವಾದಾತ ಅಪಾರ್ಟ್‌ಮೆಂಟ್‌ಗಳು ಇಲ್ಲಿನ ವ್ಯವಸ್ಥೆ ನಿರ್ವಹಿಸುತ್ತವೆ.

ಉದ್ದಿಮೆ ಪ್ರವಾಸ ಕ್ಷೇತ್ರದಲ್ಲಿ ಪ್ರಮುಖ ಕಂಪನಿಗಳ ಜತೆಗೆ ಮ್ಯಾಜಿಕ್ ಸ್ಟೇ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿ ಹಾಗೂ ಸೇವೆ ಪಡೆಯಲು https://www.magicstay.com ನೋಡಬಹುದು. 

ಪ್ರತಿಕ್ರಿಯಿಸಿ (+)