ಗುರುವಾರ , ನವೆಂಬರ್ 14, 2019
19 °C

ಒಂದೇ ಕ್ಲಿಕ್ ಹಲವು ಮಾಹಿತಿ

Published:
Updated:
ಒಂದೇ ಕ್ಲಿಕ್ ಹಲವು ಮಾಹಿತಿ

ಪ್ರವಾಸಿಗರಿಗೆ ಸಮಯ ಉಳಿಸುವುದು ಹಾಗೂ ಉತ್ತಮವಾದ ವೈವಿಧ್ಯಮಯ ಆಯ್ಕೆಗಳನ್ನು ಒಂದೇ ಕಡೆಗೆ ದೊರಕಿಸಿಕೊಡುವ ನಿಟ್ಟಿನಲ್ಲಿ https://www.kayak.co.in/ ಜಾಲತಾಣ ಕಾರ್ಯೋನ್ಮುಖವಾಗಿದೆ. ಪ್ರವಾಸಿತಾಣಗಳ ಆಯ್ಕೆ, ಹೋಟೆಲ್ ವಾಸ್ತವ್ಯ ಹಾಗೂ ಸುತ್ತಾಟಕ್ಕೆ ಕಾರಿನ ವ್ಯವಸ್ಥೆ ಈ ಎಲ್ಲ ಮಾಹಿತಿಗಳ ಜತೆಗೆ ಯಾವ ಸಮಯದಲ್ಲಿ ಪ್ರವಾಸ ಕೈಗೊಂಡರೆ ಹಣ ಉಳಿತಾಯ ಸಾಧ್ಯ ಎನ್ನುವ ಮಾರ್ಗದರ್ಶನವನ್ನೂ ನೀಡುತ್ತದೆ ಈ ಜಾಲತಾಣ. ಪ್ರವಾಸಿ ಹಾಗೂ ಸಂಬಂಧಿತ ಚಟುವಟಿಕೆಗಳ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ Booking Holdings Inc. ಈ ಜಾಲತಾಣವನ್ನು ನಿರ್ವಹಿಸುತ್ತಿದೆ.

ಪ್ರವಾಸಿಗರಿಗೆ ಉತ್ತಮ ಆಯ್ಕೆಗಳನ್ನು ದೊರಕಿಸಿಕೊಡುವ ಸಲುವಾಗಿ ನೂರಾರು ಪ್ರವಾಸಿತಾಣಗಳ ಮಾಹಿತಿ ಜಾಲಾಡಿ ಅವುಗಳಲ್ಲಿ ಅತ್ಯುತ್ತಮವಾದ ಡೀಲ್‌ಗಳನ್ನು ಇಲ್ಲಿ ನೀಡಲಾಗುತ್ತದೆ.

ದರ ವ್ಯತ್ಯಾಸದ ಮಾಹಿತಿ ಲಭ್ಯ

ವೆಬ್‌ಸೈಟ್‌ಗೆ ಸೈನ್‌ಇನ್ ಆದ ಬಳಿಕ, ಕಾಯಕ್ ಪ್ರೈಸ್ ಅಲರ್ಟ್ ಹಾಕಿಕೊಂಡರೆ, ಹೋಟೆಲ್ ಹಾಗೂ ವಿಮಾನ ಟಿಕೆಟ್‌ಗಳ ದರ ವ್ಯತ್ಯಾಸವಾಗುವ ಮಾಹಿತಿ ದೊರಕುತ್ತದೆ. ಇದರಿಂದಾಗಿ ಬುಕಿಂಗ್‌ಗೆ ಸೂಕ್ತ ಸಮಯ ಯಾವುದೆಂದು ನಿರ್ಧರಿಸಬಹುದು. ನಿಮ್ಮ ಆಯ್ಕೆಯ ಸ್ಥಳಕ್ಕೆ ಕಡಿಮೆ ದರದಲ್ಲಿ ಯಾವೆಲ್ಲ ವಿಮಾನಗಳು ಲಭ್ಯ ಇವೆ ಎನ್ನುವ ಮಾಹಿತಿ ಇಲ್ಲಿ ದೊರಕುತ್ತದೆ.

ಉಳಿತಾಯಕ್ಕೆ ದಾರಿ ಇಲ್ಲಿದೆ

ಭಾರತೀಯ ಪ್ರವಾಸಿಗರು ಪ್ರಮುಖ ಸ್ಥಳಗಳಿಗೆ ಸೂಕ್ತ ಸಮಯದಲ್ಲಿ ಪ್ರವಾಸ ಯೋಜನೆ ರೂಪಿಸಿಕೊಂಡರೆ, ವಿಮಾನದ ಟಿಕೆಟ್ ದರದಲ್ಲಿ ಶೇ 47ರವರೆಗೂ ಉಳಿತಾಯ ಮಾಡಬಹುದು ಎಂದು ಜಾಲತಾಣದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ವಿಭಿನ್ನ ತಾಣಗಳ ಭರಪೂರ ಮಾಹಿತಿ

ಯುನೆಸ್ಕೊ ಮಾನ್ಯತೆ ಪಡೆದ ಸ್ಥಳಗಳು, ನಿಗೂಢ ಎನಿಸುವಂತಹ ತಾಣಗಳು, ಜಗತ್ತಿನ ಅದ್ಭುತಗಳು, ಆಹಾರಪ್ರಿಯರಿಗೆ, ಯೋಗಾಭ್ಯಾಸಿಗಳಿಗೆ, ಫ್ಯಾಷನ್ ಟ್ರೆಂಡ್ ಅನುಸರಿಸುವವರಿಗೆ ಹೀಗೆ ವಿಭಿನ್ನ ಅಭಿರುಚಿಯ ಪ್ರವಾಸಿಗರಿಗೆ ಸೂಕ್ತವಾಗುವಂತಹ ಸ್ಥಳಗಳ ದೊಡ್ಡಪಟ್ಟಿಯೇ ಇಲ್ಲಿ ಸಿಗುತ್ತದೆ.

ಈ ವೆಬ್‌ಸೈಟ್‌ನಲ್ಲಿ ವರ್ಷಕ್ಕೆ 200 ಕೋಟಿಗೂ ಅಧಿಕ ಹುಡುಕಾಟಗಳು ನಡೆಯುತ್ತದೆ. ಇನ್ನೇಕೆ ತಡ ನಿಮ್ಮಿಷ್ಟದ ತಾಣ ಯಾವುದೆಂದು ನೀವು ಸಹ ಈಗಲೇ ಹುಡುಕಾಟ ಶುರು ಮಾಡಬಹುದು.

7

ವೆಬ್‌ಸೈಟ್ ನಿರ್ವಹಿಸುತ್ತಿರುವ ಬ್ರ್ಯಾಂಡ್‌ಗಳು

60+

ಅಂತರರಾಷ್ಟ್ರೀಯ ಜಾಲತಾಣಗಳ ಮಾಹಿತಿ ಇಲ್ಲಿ ಲಭ್ಯ

1000+

ತಂಡದಲ್ಲಿರುವ ಸದಸ್ಯರು
 

ಪ್ರತಿಕ್ರಿಯಿಸಿ (+)