ಅನಧಿಕೃತ ಸ್ಪಾ; ಪಂಚಾಯಿತಿ ಸದಸ್ಯರ ದಾಳಿ, ಪ್ರತಿಭಟನೆ

7

ಅನಧಿಕೃತ ಸ್ಪಾ; ಪಂಚಾಯಿತಿ ಸದಸ್ಯರ ದಾಳಿ, ಪ್ರತಿಭಟನೆ

Published:
Updated:
Prajavani

ನೆಲಮಂಗಲ: ಇಲ್ಲಿಗೆ ಸಮೀಪದ ಚಿಕ್ಕಬಿದರಕಲ್ಲಿನ ಅನಧಿಕೃತ ಸ್ಪಾ ಮೇಲೆ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರು ಮುತ್ತಿಗೆ ಹಾಕಿ ಬೀಗ ಒಡೆದ ಘಟನೆ ಶನಿವಾರ ನಡೆದಿದೆ. 

ದಾಳಿ ವಿಷಯ ತಿಳಿದ ಮಾಲಿಕ ಪರಾರಿಯಾಗಿದ್ದಾನೆ. ಮಿರಾಕಲ್‌ ಸ್ಪಾದಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದರು. ಚಿಕ್ಕಬಿದರಕಲ್ಲು ಪಂಚಾಯಿತಿಯಿಂದ ಪರವಾನಗಿಯೂ ಇದಕ್ಕಿರಲಿಲ್ಲ ಎನ್ನಲಾಗಿದೆ.

‘ಸ್ಪಾ ತೆರವುಗೊಳಿಸಲು ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಜನವರಿ 10ರಂದು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಗೆ ಪಂಚಾಯತಿ ವತಿಯಿಂದ ದೂರು ನೀಡಲಾಗಿತ್ತು. ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜನವರಿ 31ಕ್ಕೆ ಖಾಲಿ ಮಾಡುವುದಾಗಿ ಸ್ಪಾ ಮಾಲೀಕರು ಪಂಚಾಯಿತಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೂ ಖಾಲಿ ಮಾಡಿರಲಿಲ್ಲ. ಪೊಲೀಸರು ಕೂಡ ಇತ್ತ ಸುಳಿಯದಿರುವುದರಿಂದ ಬೇಸತ್ತ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ದಾಳಿ ಮಾಡಿದ್ದೇವೆ’ ಎಂದು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ತಿಳಿಸಿದರು.

‘ಶಾಲೆಯ ಸಮೀಪವೇ ಸ್ಪಾ ತೆರೆಯಲಾಗಿದೆ. ಇದರಿಂದ ಶಾಲಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪೊಲೀಸರಿಗೆ ದೂರು ಕೊಟ್ಟರೂ ಸ್ಪಂದಿಸಲಿಲ್ಲ. ಮತ್ತು ಪ್ರತಿಭಟನೆ ನಡೆಸಿದರೂ ಇತ್ತ ಸುಳಿಯಲಿಲ್ಲ ಎಂದರೆ ಅವರು ಕುಮ್ಮಕ್ಕು ಇದೆ’ ಎಂಬ ಅನುಮಾನ ಮೂಡುತ್ತಿದೆ ಎಂದರು.

ಸದಸ್ಯರಾದ ಸಿದ್ದರಾಜು, ಪಿ.ರಾಜಣ್ಣ, ಚಿದಾನಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !