ರಾಜಕಾಲುವೆಗೆ ಅಪಾಯಕಾರಿ ತ್ಯಾಜ್ಯ: ನಾಲ್ವರ ಬಂಧನ

ಶುಕ್ರವಾರ, ಮೇ 24, 2019
26 °C

ರಾಜಕಾಲುವೆಗೆ ಅಪಾಯಕಾರಿ ತ್ಯಾಜ್ಯ: ನಾಲ್ವರ ಬಂಧನ

Published:
Updated:

ಬೆಂಗಳೂರು: ಸುಮನಹಳ್ಳಿ ಜಂಕ್ಷನ್ ಸಮೀಪದ ರಾಜಕಾಲುವೆಗೆ ಅಪಾಯಕಾರಿ ತ್ಯಾಜ್ಯ ಸುರಿಯುತ್ತಿದ್ದ ಆರೋಪದಡಿ ನಾಲ್ವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಹೆಜ್ಜಾಲ ಗೇಟ್‌ನ ಅಲೋಕ್‌ ಶರ್ಮಾ, ಬ್ಯಾಟರಾಯನಪುರ ಶ್ಯಾಮ್, ನಾಯಂಡನಹಳ್ಳಿ ಜೇಲನ್‌, ಲಗ್ಗೆರೆ ಲೋಕೇಶ್ ಬಂಧಿತರು. ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಠಾಣೆ ಜಾಮೀನು ಮೇಲೆ ಬಿಟ್ಟು ಕಳುಹಿಸಲಾಗಿದೆ. ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದರು.

‘ತ್ಯಾಜ್ಯವಿದ್ದ ವಾಹನಗಳ ಸಮೇತ ಬಂದು ರಾಜಕಾಲುವೆಗೆ ಸುರಿಯುತ್ತಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು’ ಎಂದರು.

ಗಾರ್ಮೇಂಟ್ಸ್ ಕಾರ್ಖಾನೆ ತ್ಯಾಜ್ಯ: ಆರೋಪಿಗಳ ಪೈಕಿ ಒಬ್ಬರು, ಮಹದೇಶ್ವರ ನಗರದಲ್ಲಿ ಗಾರ್ಮೇಂಟ್ಸ್ ಕಾರ್ಖಾನೆ ನಡೆಸುತ್ತಿದ್ದಾರೆ. ಕಾರ್ಖಾನೆಯಲ್ಲಿ ಬಳಸಿದ್ದ ಅಪಾಯಕಾರಿ ಆಯಿಲ್, ಬಟ್ಟೆ ಚೂರುಗಳನ್ನು ರಾಜಕಾಲುವೆಯಲ್ಲಿ ಎಸೆಯಲು ತಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ಲೋಕೇಶ್, ಯಶವಂತಪುರ ಆರ್‌.ಎಂ.ಸಿ ಯಾರ್ಡ್‌ನಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದಾರೆ. ಕೊಳೆತ ಈರುಳ್ಳಿಗಳನ್ನು ರಾಜಕಾಲುವೆಗೆ ಸುರಿಯುತ್ತಿದ್ದಾಗ ಸಿಕ್ಕಿಬಿದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !