ಶನಿವಾರ, ಡಿಸೆಂಬರ್ 5, 2020
21 °C

ರಾಜರಾಜೇಶ್ವರಿ ನಗರ ಉಪ ಚುನಾವಣೆ| ನಸುಕಿನಿಂದ ರಾತ್ರಿವರೆಗೂ ಕುಸುಮಾ ಮತಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶುಕ್ರವಾರ ನಸುಕಿನಲ್ಲೇ ಉದ್ಯಾನಗಳತ್ತ ಹೆಜ್ಜೆಹಾಕಿ ಮತಯಾಚನೆ ಆರಂಭಿಸಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ರಾತ್ರಿಯವರೆಗೂ ಪ್ರಚಾರ ನಡೆಸಿದರು.

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜತೆ ಬೆಳಿಗ್ಗೆಯೇ ವಿವಿಧ ಉದ್ಯಾನಗಳಿಗೆ ಭೇಟಿನೀಡಿದ ಕುಸುಮಾ, ವಾಯು ವಿಹಾರಕ್ಕೆ ಬಂದ ಮತದಾರರನ್ನು ಭೇಟಿಮಾಡಿದರು. ಹಿರಿಯರಿಗೆ ತಲೆಬಾಗಿ ನಮಸ್ಕರಿಸಿ ಮತ ಯಾಚಿಸಿದರು. ನಂತರ ಹಲವು ಸಭೆಗಳಲ್ಲಿ ಭಾಗಿಯಾದ ಅವರು, ಮನೆಮನೆ ಪ್ರಚಾರದಲ್ಲೂ ಭಾಗಿಯಾದರು.

ಆರತಿ ಬೆಳಗಿ ಸ್ವಾಗತ: ಸಂಜೆ ಜಾಲಹಳ್ಳಿ ಸುತ್ತಮುತ್ತ ಕುಸುಮಾ ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಂಡರು. ಪಕ್ಷದ ನಾಯಕರೊಂದಿಗೆ ಜಾಲಹಳ್ಳಿಗೆ ಬಂದ ಅವರನ್ನು ಅಲ್ಲಿನ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.

ಕುಸುಮಾ ಅವರೊಂದಿಗೆ ಶಾಸಕ ಕೃಷ್ಣ ಬೈರೇಗೌಡ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ, ಕುಸುಮಾ ಅವರ ತಂದೆ ಹನುಮಂತರಾಯಪ್ಪ ಸೇರಿದಂತೆ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ರೋಡ್‌ ಶೋ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮಾಜಿ ಸಚಿವರಾದ ಎನ್‌. ಚೆಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ ಮತ್ತಿತರ ಮುಖಂಡರ ಜತೆಗೂಡಿ ಚೌಡೇಶ್ವರಿನಗರ, ಕೊಟ್ಟಿಗೆಪಾಳ್ಯ, ಶ್ರೀನಿವಾಸನಗರ, ಮಾಳಗಾಳದಲ್ಲಿ ರೋಡ್‌ ಶೋ ನಡೆಸಿದರು. ಕೊಟ್ಟಿಗೆಪಾಳ್ಯದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು