ಸುಗ್ಗಿ ಹಬ್ಬ ಸಂಕ್ರಾಂತಿ ಎಂದಾಕ್ಷಣ ಗ್ರಾಮೀಣ ಪ್ರದೇಶಗಳ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಹೊಲ–ಗದ್ದೆ ಪೂಜೆ, ಕೊಟ್ಟಿಗೆ ಮನೆಯನ್ನು ಅಲಂಕರಿಸುವುದು, ದನ–ಕರುಗಳ ಪೂಜೆ, ಕಿಚ್ಚು ಹಾಯಿಸುವುದು ಸಾಮಾನ್ಯ. ನಗರಪ್ರದೇಶಗಳಲ್ಲಿ ಇಂತಹ ಆಚರಣೆಗಳನ್ನು ಕಾಣಲು ಸಾಧ್ಯವೇ ಎನ್ನುವ ಬೇಸರ ಹಲವರಿಗಿದೆ. ಆದರೆ, ಹಲವು ಸವಾಲುಗಳ ನಡುವೆಯೂ ಗ್ರಾಮೀಣ ಸೊಗಡಿನಂತೆ ಹಬ್ಬ ಆಚರಿಸಿಕೊಂಡು ಬರುತ್ತಿರುವ ಹಸು ಸಾಕಣೆಕಾರರು ನಗರದಲ್ಲಿದ್ದಾರೆ.

ಒಟ್ಟು ಸೇರಿ ಆಚರಿಸಿದರೆ ಚೆನ್ನ:

‘ನಮ್ಮ ತಾತ ಚಿಕ್ಕರಾಮಯ್ಯ ನಿವೃತ್ತ ಶಿಕ್ಷಕ. 1973ರಲ್ಲಿ ಕೆಲಸದ ಜತೆಗೆ ಹಸು ಸಾಕಣಿಕೆ ಆರಂಭಿಸಿದರು. ಅಂದಿನಿಂದ ಇದು ನಮ್ಮ ಕುಂಟುಂಬದ ಮುಖ್ಯ ಕಸಬು. ನಮ್ಮದು ಕೂಡು ಕುಟುಂಬ. ಅಪ್ಪ, ಚಿಕ್ಕಪ್ಪ ಎಲ್ಲರೂ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ವಿಶಾಲ ಜಾಗವಿದ್ದು, ಹದಿನೈದು ಹಸುಗಳಿವೆ. ಸಂಕ್ರಾಂತಿ ದಿನ ಇಡೀ ಏರಿಯಾದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ’ ಎನ್ನುತ್ತಾರೆ ಸುಬ್ರಹ್ಮಣ್ಯನಗರದ ಗೌತಮ್.

‘ನಿತ್ಯದಂತೆ ಹಬ್ಬದ ದಿನದಂದೂ ಹಸುಗಳಿಗೆ ಸ್ನಾನ ಮಾಡಿಸುತ್ತೇವೆ. ಕೊಂಬುಗಳು, ಕಾಲುಗಳು ಮತ್ತು ಮೈಗೆ ಬಣ್ಣ ಹಚ್ಚುತ್ತೇವೆ. ಹೂವಿನಿಂದ ಸಿಂಗರಿಸಿ, ಮನೆಮಂದಿಯೆಲ್ಲ ಪೂಜೆ ಮಾಡುತ್ತೇವೆ. ಸಿಹಿ ಪೊಂಗಲ್, ಬೇಯಿಸಿದ ಗೆಣಸು, ಅವರೆಕಾಯಿ ತಿನ್ನಿಸುತ್ತೇವೆ. ನಂತರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ಕಿಚ್ಚು ಹಾಯಿಸುತ್ತೇವೆ. ಇದನ್ನು ನೋಡುವುದಕ್ಕಾಗಿ ಪ್ರತಿವರ್ಷ ಸುಮಾರು ಜನ ಬರುತ್ತಾರೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಹಬ್ಬದ ಸಂಪ್ರದಾಯದ ಬಗ್ಗೆ ತಿಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

ಸ್ನೇಹಿತೆಯರು ಜತೆಗೂಡುತ್ತಾರೆ: ‘ಐವತ್ತು ವರ್ಷಗಳಿಗೂ ಹೆಚ್ಚು ಸಮಯದಿಂದ ಹೈನುಗಾರಿಕೆ ನಡೆಸುತ್ತಿದ್ದೇನೆ. ಮಕ್ಕಳು ‘ಸಾಕು ಈ ಕೆಲಸ ಬಿಟ್ಟುಬಿಡು’ ಎನ್ನುತ್ತಾರೆ. ಆದರೆ, ನನಗೆ ಬಿಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇವುಗಳಿಂದ ನನ್ನ ಬದುಕಿನ ಚಿತ್ರಣವೇ ಬದಲಾಗಿದೆ. ರಟ್ಟೆಯಲ್ಲಿ ಶಕ್ತಿ ಇದ್ದಾಗ ಹಬ್ಬ ಜೋರಾಗಿ ಮಾಡುತ್ತಿದ್ದೆ. ಈಗ ಹಸುಗಳನ್ನು ಬಗ್ಗಿಸಲು ಆಗಲ್ಲ. ಸ್ನಾನ ಮಾಡಿಸಿ, ಶೃಂಗಾರ ಮಾಡಿ, ಪೂಜೆ ಮಾಡುತ್ತೇವೆ. ನೆರೆಹೊರೆಯ ಸ್ನೇಹಿತೆಯರು ಬಂದು ಜತೆಗೂಡುತ್ತಾರೆ. ಎಲ್ಲರಿಗೂ ಎಳ್ಳು– ಬೆಲ್ಲ, ಕಬ್ಬು, ಪೊಂಗಲ್ ಹಂಚುತ್ತೇವೆ’ ಎಂದು ಹೇಳುತ್ತಾರೆ ಮಿಲ್ಕ್ ಕಾಲೊನಿಯ ಯಶೋಧಮ್ಮ.

ಒಂದು ದಿನ ಉಪವಾಸ ಮಾಡುತ್ತೇವೆ: ‘ತಮಿಳುನಾಡಿಗೂ ಇಲ್ಲಿಗೂ ಹಬ್ಬದ ಆಚರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಅಲ್ಲಿ ಏಳು ದಿನಗಳ ಕಾಲ ಹಬ್ಬ ಆಚರಿಸುತ್ತಾರೆ. ನಾವು ಎರಡು ದಿನ ಮಾಡುತ್ತೇವೆ. ವರ್ಷವಿಡೀ ನಮ್ಮ ಹೊಟ್ಟೆ ತುಂಬಿಸುವ ಹಸುಗಳಿಗಾಗಿ ಒಂದು ದಿನ ಉಪವಾಸ ಮಾಡುತ್ತೇವೆ. ವಿಶೇಷ ಅಡುಗೆಯನ್ನು ಮೊದಲು ಅವುಗಳಿಗೆ ತಿನ್ನಿಸಿ ನಂತರ ನಾವು ತಿನ್ನುತ್ತೇವೆ. ಮೊದಲು ಕಿಚ್ಚು ಹಾಯಿಸುತ್ತಿದ್ದೆವು ಈಗ ಬಿಟ್ಟಿದ್ದೇವೆ. ಜಾಗದ ತೊಂದರೆ. ಒಂದುವೇಳೆ ಹಸುಗಳು ಯಾರನ್ನಾದರೂ ತುಳಿದು ಅನಾಹುತ ಸಂಭವಿಸಿದರೆ ಎಂದು ಭಯ. ಈ ಹಿಂದೆ ಇಂತಹ ಅವಘಡದಿಂದ ವ್ಯಕ್ತಿಯೊಬ್ಬರ ಚಿಕಿತ್ಸೆ ವೆಚ್ಚವನ್ನು ನಾವೇ ಭರಿಸಬೇಕಾಯಿತು. ಆದಕಾರಣ ಪೂಜೆ–ಪುನಸ್ಕಾರಗಳನ್ನು ಮಾತ್ರ ನಡೆಸುತ್ತೇವೆ. ಅಕ್ಕಪಕ್ಕದವರೂ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಸಂಪಂಗಿರಾಮನಗರ ನಿವಾಸಿ ಕಸ್ತೂರಮ್ಮ.

‘ಪೂಜೆಗಾಗಿ ಬರುವವರು ಪೊಂಗಲ್, ಹಣ್ಣು– ಹಂಪಲು ತಂದು ಹಸುಗಳಿಗೆ ತಿನ್ನಿಸುತ್ತಾರೆ. ಒಂದೆರಡು ಮನೆಯವರಾದರೆ ಪರವಾಗಿಲ್ಲ. ನೂರಾರು ಮನೆಯವರು ತಂದುಕೊಡುವ ಆಹಾರ ಅರಗಿಸಿಕೊಳ್ಳಲು ಹಸುಗಳಿಗೆ ಸಾಧ್ಯವಾಗುವುದಿಲ್ಲ. ಹುಷಾರು ತಪ್ಪಿದರೆ ನೋಡಿಕೊಳ್ಳುವುದು ಕಷ್ಟ. ಹೀಗೆ ಏಳೆಂಟು ಹಸುಗಳನ್ನು ಕಳೆದುಕೊಂಡಿದ್ದೇವೆ. ಆ ಸಂದರ್ಭದಲ್ಲಿ ಎಲ್ಲೆಡೆ ಇಂತಹ ಘಟನೆಗಳು ನಡೆಯುವ ಕಾರಣ ಪಶುಗಳ ವೈದ್ಯರೂ ಸಂದರ್ಭಕ್ಕೆ ಸಿಗುವುದಿಲ್ಲ. ಹಾಗಾಗಿ ಬರುವವರು ಹಸುಗಳಿಗೆ ಮೇವನ್ನು ತಂದುಕೊಟ್ಟರೆ ಒಂದೆರಡು ದಿನ ಇಟ್ಟು ತಿನ್ನಿಸಬಹುದು. ಈ ನಿಟ್ಟಿನಲ್ಲಿ ಜನರು ಆಲೋಚಿಸಬೇಕು’ ಎಂದು ಮನವಿ ಮಾಡುತ್ತಾರೆ ಅವರು.

‘ನಮ್ಮ ಕುಟುಂಬದ ನಾಲ್ಕನೇ ತಲೆಮಾರಿನವರೆಗೆ ಹಸು ಸಾಕಣೆ ಮುಂದುವರಿದುಕೊಂಡು ಬಂದಿದ್ದೇವೆ. ಸಂಕ್ರಾಂತಿ ಬಂದರೆ ಖುಷಿ. ಕುಟುಂಬದ ಎಲ್ಲರೂ ಒಟ್ಟು ಸೇರಿ ಹಬ್ಬ ಆಚರಿಸುತ್ತೇವೆ. ವಾರಕ್ಕೆ ಮುಂಚೆಯೇ ಹಬ್ಬದ ತಯಾರಿ ಆರಂಭಿಸುತ್ತೇವೆ. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ಸುಣ್ಣ–ಬಣ್ಣ ಬಳಿಯುತ್ತೇವೆ. ಹೊಸ ಮೂಗುದಾರ, ಹಗ್ಗವನ್ನು ಕೊಂಡು ತರುತ್ತೇವೆ. ಹಬ್ಬದ ದಿನ ಹಸುಗಳನ್ನು ಸಿಂಗರಿಸಿ, ಸಮೀಪದ ಈಶ್ವರನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬರುತ್ತೇವೆ. ಕಿಚ್ಚು ಹಾಯಿಸುವುದೆಂದರೆ ಮೊಮ್ಮಕ್ಕಳಿಗೆ ಇಷ್ಟ. ಇದರಿಂದ ದನ–ಕರುಗಳಿಗೆ ಅಂಟಿಕೊಂಡಿರುವ ಉಣ್ಣೆ ಇತರೆ ನುಸಿಗಳು ನಾಶವಾಗಿ, ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ. ಬೇಯಿಸಿದ ಕಡಲೆಕಾಯಿ, ಅವರೆಕಾಯಿ, ಪೊಂಗಲ್ನ್ನು ಹಸುಗಳಿಗೆ ನೀಡುತ್ತೇವೆ. ಹಬ್ಬದ ದಿನ ಅವುಗಳ ಅಲಂಕಾರ ನೋಡಲು ಚೆನ್ನ’ ಎಂದು ಸಂಪಂಗಿರಾಮನಗರದ ರಾಮಕ್ಕ ಅವರು ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.