ಬೆಂಗಳೂರು: ರಾಜ್ಯದ ವಿವಿಧೆಡೆ 4 ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು ₹ 37.9 ಲಕ್ಷ ನಗದು ಹಾಗೂ 18.67 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ವರದಿ: ನಗರ ಹೊರ ವಲಯದ ಚೆಕ್ಪೋಸ್ಟ್ನಲ್ಲಿ ಶುಕ್ರವಾರ ಗುತ್ತಿಗೆದಾರರೊಬ್ಬರು ಗೋವಾಗೆ ತೆರಳುತ್ತಿದ್ದ ಕಾರಿನ ಡಿಕ್ಕಿಯಲ್ಲಿಟ್ಟು ಸಾಗಿಸುತ್ತಿದ್ದ ₹ 26 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.

‘ಪತ್ನಿ ಜೊತೆ ಜಗಳವಾಗಿದೆ. ನೆಮ್ಮದಿಗಾಗಿ ಗೋವಾಗೆ ಹೊರಟಿದ್ದೇನೆ. ಎಲ್ಲಿ ಆನ್ಲೈನ್ ಪೇಮೆಂಟ್ ಮಾಡಿದರೂ ಪತ್ನಿ ಪತ್ತೆ ಹಚ್ಚಿ ಬರುತ್ತಾಳೆ. ಹಾಗಾಗಿ, ಹಣ ವಿತ್ಡ್ರಾ ಮಾಡಿಕೊಂಡು ಹೊರಟಿದ್ದೇನೆ. ಗೂಗಲ್ ಮ್ಯಾಪ್ ಅಧರಿಸಿ ಗೋವಾಗೆ ಹೊರಟಿದ್ದೆ. ಚುನಾವಣೆ ಅರಿವಿಲ್ಲದೇ ಬೆಳಗಾವಿ ಪ್ರವೇಶಿಸಿದ್ದೇನೆ’ ಎಂದು ಹೇಳಿಕೆ ನೀಡಿದ್ದಾರೆ.

₹ 7.9 ಲಕ್ಷ ನಗದು ವಶ (ಮಂಗಳೂರು ವರದಿ): ತಲಪಾಡಿ ಗಡಿ ತಪಾಸಣಾ ಠಾಣೆಯಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ
₹ 7.9 ಲಕ್ಷ ನಗದನ್ನು ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ‘ಸಾಗಿಸುತ್ತಿದ್ದವರು ಅಗತ್ಯ ದಾಖಲೆ ಒದಗಿಸಿಲ್ಲ‘ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದರು.

ಮದ್ಯವಶ( ಬಾಗಲಕೋಟೆ ವರದಿ): ಎರಡು ಪ್ರತ್ಯೇಕ ಕಡೆ ತಲಾ ₹2 ಲಕ್ಷ ನಗದು, ಬಾಗಲಕೋಟೆಯಲ್ಲಿ ₹15.37 ಲಕ್ಷ ಮೌಲ್ಯದ ಮದ್ಯವನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.

ಜಮಖಂಡಿ ಹಾಗೂ ಬಾದಾಮಿ ಯಲ್ಲಿ ತಲಾ ₹2 ಲಕ್ಷ ವಶಕ್ಕೆ ಪಡೆಯ ಲಾಗಿದೆ. ಬಾಗಲಕೋಟೆಯಲ್ಲಿ 9,317 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ
ಪಿ. ಸುನೀಲ್ಕುಮಾರ್ ತಿಳಿಸಿದ್ದಾರೆ.

₹10 ಲಕ್ಷ ಮೌಲ್ಯದ ವಿದೇಶಿ ಮದ್ಯ, ಬಲ್ಬ್ ವಶ: ಜಿಲ್ಲೆಯ ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ₹ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಂತಾಮಣಿಯಲ್ಲಿ ₹7.23 ಲಕ್ಷ ಮೌಲ್ಯದ ಎಲ್ಇಡಿ ಬಲ್ಬ್ ಹಾಗೂ ಗೌರಿಬಿದನೂರು ತಾಲ್ಲೂಕಿನ ಜಿ.ಕೊತ್ತೂರು ಚೆಕ್ ಪೋಸ್ಟ್ನಲ್ಲಿ
₹ 3.30 ಲಕ್ಷ ಮೌಲ್ಯದ 400 ವಿದೇಶಿ ಮದ್ಯದ ಬಾಟಲಿ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ: ₹ 4.50 ಕೋಟಿ ಮೌಲ್ಯದ ಸೀರೆಗಳ ವಶ

ಶಿವಮೊಗ್ಗ: ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಆರ್.ಪುರಂ ರಸ್ತೆಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ₹4.50 ಕೋಟಿ ಮೌಲ್ಯದ ಸೀರೆಗಳನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

‘ಖಚಿತ ಮಾಹಿತಿ ಆಧರಿಸಿ ಗೋದಾಮಿನಲ್ಲಿ ಪರಿಶೀಲಿಸಿದಾಗ ಸೀರೆಗಳು ಪತ್ತೆಯಾಗಿವೆ. ಸೀರೆ ಸಂಗ್ರಹಿಸಿ ಟ್ಟಿದ್ದವರು ತಾವು ಸೀರೆ ವ್ಯಾಪಾರದ ಡೀಲರ್ ಎಂದು ಹೇಳಿಕೊಂಡಿದ್ದಾರೆ.

ಹೀಗಾಗಿ ದಾಖಲೆಗಳನ್ನು ಪರಿಶೀಲಿಸಲು ವಾಣಿಜ್ಯ ತೆರಿಗೆ ಇಲಾಖೆ ಸುಪರ್ದಿಗೆ ವಹಿಸಿದ್ದೇವೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.