ಸಿನಿಮಾ, ರಾಜಕೀಯ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲಿಯೂ ಲೈಂಗಿಕ ದೌರ್ಜನ್ಯದ ವಿರುದ್ಧದ ದನಿಗಳು #MeToo ಅಭಿಯಾನಕ್ಕೂ ಮೊದಲಿನಿಂದಲೇ ಸದ್ದು ಮಾಡುತ್ತಿವೆ. #MeToo ನಂತರ ಜಾಗೃತರಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಅಷ್ಟೇ.

ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಕೆಲವರು ಆರಂಭದಿಂದ ಕೊನೆಯವರೆಗೂ ಸಹೋದ್ಯೋಗಿಯಾಗಿಯಷ್ಟೇ ಉಳಿಯುತ್ತಾರೆ. ಕೆಲಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು ಬೇರೆ ವಿಷಯ ಅಥವಾ ವೈಯಕ್ತಿಕವಿಚಾರಗಳನ್ನು ಅವರೊಡನೆ ಮುಕ್ತವಾಗಿ ಮಾತನಾಡಲು ಮನಸ್ಸು ಬರುವುದಿಲ್ಲ. ಮತ್ತೆ ಕೆಲವರು ನಮ್ಮ ಕಣ್ಣಿಗೆ ಸರಿ ಕಾಣುವುದೇ ಇಲ್ಲ. ಅವರು ಮಾಡುವ ಪ್ರತಿ ಕೆಲಸವೂ ತಪ್ಪು ಎಂದು ಭಾವಿಸುತ್ತೇವೆ.ಅಂತಹವರೊಡನೆ ವ್ಯವಹರಿಸುವಾಗ ಗೆರೆ ಎಳೆದುಕೊಂಡೇ ಮುಂದುವರಿಯುತ್ತೇವೆ. ಅವರು ನಮ್ಮ ಬಗ್ಗೆ ಕಾಳಜಿ ತೋರಿದರೂ ಅದನ್ನು ಅನುಮಾನಿಸಿ ತಪ್ಪಾಗಿ ಗ್ರಹಿಸಿಬಿಡುತ್ತೇವೆ. ಅವರಿಂದ ನಮ್ಮ ಖಾಸಗಿತನಕ್ಕೆ ಕುಂದುಂಟಾಗುವುದನ್ನು ತುಸುವೂ ಸಹಿಸುವುದಿಲ್ಲ.

ಇನ್ನೂ ಕೆಲವರು ಸಹೋದ್ಯೋಗಿಗಳಾಗಿಯಷ್ಟೇ ಉಳಿಯುವುದಿಲ್ಲ. ಅವರೊಂದಿಗೆ ಆತ್ಮೀಯವಾದ ಒಡನಾಟ ಹೊಂದಿರುತ್ತೇವೆ. ಸ್ನೇಹಿತರಂತೆ, ಮನೆಯ ಸದಸ್ಯರು ಎನ್ನುವಷ್ಟು ಹತ್ತಿರದವರಂತೆ ಕಾಣುತ್ತೇವೆ. ನಮ್ಮ ವೈಯಕ್ತಿಕ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹಂಚಿಕೊಳ್ಳುತ್ತೇವೆ. ಈ ನಡುವೆ ಅವರು ನಾವು ತೋರುವ ಸಲುಗೆಯನ್ನು ಅನ್ಯತಾ ಭಾವಿಸಿ ಅತಿಯಾಗಿ ವರ್ತಿಸಿದರೂ, ಅದನ್ನು ಆ ಕ್ಷಣವೇ ಧಿಕ್ಕರಿಸಲು ಮನಸು ಬರುವುದಿಲ್ಲ. ಅಥವಾ ಅದು ತಪ್ಪು ಎಂದು ನಿರ್ಧರಿಸಲುಆ ವ್ಯಕ್ತಿಯೊಡಗಿನ ನಮ್ಮ ಒಡನಾಡ ಅವಕಾಶ ನೀಡುವುದಿಲ್ಲ. ಅವರು ಮಾಡಿದ್ದು ಸರಿಯೇ? ತಪ್ಪೇ? ಎಂದು ತೀರ್ಮಾನಿಸುವುದೇ ಗೊಂದಲವಾಗುತ್ತದೆ. ವೃಥಾ ಅನುಮಾನಿಸಿದರೆ ಸಂಬಂಧ ಹಾಳಾಗುತ್ತದೆ ಎನ್ನುವ ಭಯದಿಂದ ಆತ್ಮೀಯರು ಹದ್ದು ಮೀರಿದರೂ ಅನುಸರಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ.

ನಿರಂತರವಾಗಿ ಇಂತಹ ಅನುಭವಗಳು ಆದರೆ ‘ನಾವು ದೌರ್ಜನ್ಯಕ್ಕೊಳಗಾಗುತ್ತಿದ್ದೇವೆ’ ಎನ್ನುವ ಭಾವ ನಿಧಾನವಾಗಿನಮ್ಮಲ್ಲಿ ಜಾಗೃತವಾಗಲಾರಂಭಿಸುತ್ತದೆ. ಆದರೂ, ಆ ಸಹೋದ್ಯೋಗಿಯು ನಮಗಿಂತ ಉತ್ತಮ ಸ್ಥಾನದಲ್ಲಿದ್ದರೆ, ಪ್ರಭಾವಶಾಲಿ ಎನಿಸಿದರೆ ದೂರು ನೀಡಲು ಹಿಂಜರಿಕೆ ಕಾಡುತ್ತದೆ. ಇಂತಹ ಸಂದರ್ಭಗಳನ್ನು ಎದುರಿಸುವ ಪ್ರತಿಯೊಬ್ಬರಲ್ಲಿಯೂ ಸಾಮಾನ್ಯವಾಗಿ ಮೂಡುವ ಕೆಲವು ಪ್ರಶ್ನೆಗಳು ಹಾಗೂ ಅದಕ್ಕೊಂದಿಷ್ಟು ಸಲಹೆಗಳು ಇಲ್ಲಿವೆ.

* ಕೆಲಸದ ಸ್ಥಳವಲ್ಲದೆ ಹೊರಗೆ ಸಹೊದ್ಯೋಗಿಯೊಬ್ಬರು ಅನುಚಿತ ವರ್ತನೆ ತೋರಿದರೆ ಅವರ ವಿರುದ್ಧ ದೂರು ದಾಖಲಿಸಬಹುದೇ?

ನಿಮ್ಮ ಸಹೋದ್ಯೋಗಿಯು ನಿಮ್ಮೊಡನೆ ಅನುಚಿತವಾಗಿ ವರ್ತಿಸಿದ ಸಂದರ್ಭ ಎಂತಹದು ಎಂಬುದನ್ನುಅವಲಂಭಿಸಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಇಂತಹ ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ. ಕೆಲಸದ ಸ್ಥಳವಲ್ಲದೆ ಬೇರೆ ಜಾಗದಲ್ಲಿ ದೌರ್ಜನ್ಯದ ದೂರು ಕೇಳಿ ಬಂದರೆ, ದೂರು ನೀಡಿದವರು ಹಾಗೂಆರೋಪಿ ನಡುವಣ ಒಡನಾಟ ಯಾವ ರೀತಿಯದ್ದು ಎಂಬುದು ಗಣನೆಗೆ ಬರುತ್ತದೆ. ಕೆಲಸದ ಕಾರಣಕ್ಕಾಗಿಯೇ ಭೇಟಿಯಾಗಿದ್ದಾಗ, ನಿಮ್ಮ ಸಹೋದ್ಯೋಗಿಯು ಅನುಚಿತವಾಗಿ ವರ್ತಿಸಿದ್ದರೆ ಮಾತ್ರ ಅದು ಲೈಂಗಿಕ ದೌರ್ಜನ್ಯವೆನಿಸಿಕೊಳ್ಳುತ್ತದೆ. ಕೆಲಸದ ಕಾರಣಕ್ಕಾಗಿ ಅಲ್ಲದೆ ವೈಯಕ್ತಿಕ ವಿಚಾರವಾಗಿಸಹೋದ್ಯೋಗಿಯನ್ನು ಹೊರಗೆ ಭೇಟಿಯಾಗಿದ್ದರೆ ಅದು ಕೆಲಸದ ಸ್ಥಳ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ಇದನ್ನು ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದ ಪರಿಧಿಗೆ ಸೇರಿಸಲು ಆಗುವುದಿಲ್ಲ.

*ಕಚೇರಿಯಲ್ಲಿ ಚೆಲ್ಲಾಟವಾಡುವುದು/ಅಸಂಬದ್ಧವಾಗಿ ವರ್ತಿಸುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುತ್ತದೆಯೇ?

ನಿಮ್ಮ ಅನುಮತಿ ಇಲ್ಲದೆ ನಿಮ್ಮೊಡನೆ ಅನುಚಿತವಾಗಿ ವರ್ತಿಸುವುದು ಅಥವಾ ಅಸಹ್ಯಕರವಾದ ಕಾಮೆಂಟ್(ಹೇಳಿಕೆ)ಗಳನ್ನು ನೀಡುವುದು ಲೈಂಗಿಕ ದೌರ್ಜನ್ಯವೆನಿಸಿಕೊಳ್ಳುತ್ತದೆ. ಉದ್ದೇಶಿತ ಕೃತ್ಯವಲ್ಲದಿದ್ದರೂ ಅದು ಲೈಂಗಿಕ ಕಿರುಕುಳವೇ ಆಗಲಿದೆ.

* ಕೆಲಸ ಮಾಡುವ ಸ್ಥಳ ಎಂದರೆ ಏನು?

ಕಚೇರಿ ಮಾತ್ರವೇ ಕೆಲಸ ಮಾಡುವ ಸ್ಥಳವಲ್ಲ. ಕೆಲಸದ ಕಾರಣಕ್ಕಾಗಿ ಉದ್ಯೋಗಿ ಭೇಟಿ ನೀಡುವ ಪ್ರತಿ ಜಾಗವೂ ಕೆಲಸದ ಸ್ಥಳವಾಗಲಿದೆ. ಮನೆಕೆಲಸದವರ ಉದಾಹರಣೆಯಲ್ಲಿ, ಅವರು ಕೆಲಸ ಮಾಡುವ ಮನೆಗಳೇ ಕೆಲಸದ ಸ್ಥಳಗಳು ಎನಿಸಿಕೊಳ್ಳುತ್ತವೆ.

* ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೂರಿನ ಕುರಿತು ಯಾರೊಂದಿಗೆ ವ್ಯವಹರಿಸಲಿ?

ಲೈಂಗಿಕ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ 10ಕ್ಕೂ ಹೆಚ್ಚು ಉದ್ಯೋಗಿಗಳಿರುವ ಪ್ರತಿ ಸಂಸ್ಥೆಯೂ ‘ಅಹವಾಲು ಸಮಿತಿ’ ರಚಿಸಬೇಕು. ಸಂತ್ರಸ್ಥೆಯು ಈ ಸಮಿತಿಗೆ ದೂರು ನೀಡಿದರೆ ಸಾಕು. ಇದಕ್ಕಾಗಿ ನೀವು ಸಂಸ್ಥೆಯ ಮಾಲೀಕರು/ ಮುಖ್ಯಸ್ಥರು ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ವ್ಯವಹರಿಸುವ ಅಗತ್ಯವಿಲ್ಲ.

* ನಾನು ದೂರು ನೀಡುವ ಸಮಿತಿಯು ಪ್ರಾಮಾಣಿಕವಾಗಿರಲಿದೆ ಎಂದು ಅಥವಾ ಆರೋಪಿಯು ಸಮಿತಿಯ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಹೇಗೆ?

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಚಿಸಿರುವ ಕೈಪಿಡಿಯ ಆಧಾರದಲ್ಲಿಯೇ ಸಾಂವಿಧಾನಿಕ ಸಮಿತಿಯು ವಿಚಾರಣೆ ನಡೆಸಲಿದೆ. ಅದು ಗೌಪ್ಯತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ನ್ಯಾಯಾಂಗದ ತತ್ವಗಳಾದ ಸಮಾನತೆ ಮತ್ತು ಪಾರದರ್ಶಕತೆಯ ಆಧಾರದಲ್ಲಿಯೇ ಕಾರ್ಯನಿರ್ವಹಿಸಬೇಕು. ಅದರ ಹೊರತಾಗಿಸಮಿತಿಯು ದೂರುದಾರರಪರವಾಗಿ ಅಥವಾ ಆರೋಪಿಯ ಪರವಾಗಿ, ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ.

ಸಾಂವಿಧಾನಿಕ ಸಮಿತಿಯು ಯಾವುದೇ ರೀತಿಯಲ್ಲಿಯೂ ಪಕ್ಷಪಾತ ಮಾಡದೆ ಕಾರ್ಯನಿರ್ವಹಿಸುವಂತಾಗಲು ಹಾಗೂ ವಸ್ತುನಿಷ್ಠತೆ ಕಾಪಾಡಲು ಸಮಿತಿಯಲ್ಲಿ ಬಾಹ್ಯ ಸದಸ್ಯರ ಉಪಸ್ಥಿತಿ ಇರುವುದು ಅನಿವಾರ್ಯ. ತನಿಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮನವಿ ಮಾಡಲು ದೂರುದಾರರು ಬಾಹ್ಯ ಸದಸ್ಯರನ್ನು ಪ್ರತ್ಯೇಕವಾಗಿ ಸಂಪರ್ಕಿಸಬಹುದು.

* ದೂರು ನೀಡುವ ಸಂದರ್ಭದಲ್ಲಿ ಏನೆಲ್ಲಾ ಸಾಕ್ಷ್ಯಗಳು ನಮ್ಮಲ್ಲಿ ಲಭ್ಯವಿರಬೇಕು? ಆರೋಪಿಯೊಡನೆ ಮೊಬೈಲ್ ಮೂಲಕ ಮಾತನಾಡಿದ ರೆಕಾರ್ಡಿಂಗ್ಸ್, ಸಂದೇಶಗಳ ವಿವರ ಸಲ್ಲಿಸಬೇಕೇ?

ನೀವು ಹೇಳಿಕೆ ನೀಡಿ ದೂರು ದಾಖಲಿಸುವ ಸಂದರ್ಭದಲ್ಲಿ ದಾಖಲೆಗಳನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ. ತನಿಖೆ ಸಂದರ್ಭದಲ್ಲಿ ನೀವಾಗಲಿ, ಆರೋಪಿಯಾಗಲಿ ಲಭ್ಯವಿರುವ ದಾಖಲೆಗಳನ್ನು ಸಾದರಪಡಿಸುವುದು ಸಹಕಾರಿ.

* ದೂರು ನೀಡಲು ಸಮಯ ಮಿತಿ ಇದೆಯೇ?

ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳ ಪ್ರಕರಣ ಜರುಗಿದ ಮೂರು ತಿಂಗಳ ಒಳಗಾಗಿ ದೂರು ದಾಖಲಿಸಬೇಕು. ಒಂದು ವೇಳೆ ಸಾಂವಿಧಾನಿಕ ಸಮಿತಿ ಅವಕಾಶ ನೀಡಿದರೆ ಆರು ತಿಂಗಳ ಅವಧಿಯವರೆಗೂ ದೂರು ದಾಖಲಿಸಲು ಅವಕಾಶವಿದೆ.

* MeToo ರೀತಿ ಆನ್ಲೈನ್ ಅಭಿಯಾನದ ಮೂಲಕ ದೌರ್ಜನ್ಯ ಆರೋಪಗಳು ಕೇಳಿ ಬಂದಾಗಲೂ ಸಾಂವಿಧಾನಿಕ ಸಮಿತಿ ತನಿಖೆ ಕೈಗೊಳ್ಳುತ್ತದೆಯೇ? ಔಪಚಾರಿಕವಾಗಿ ಬರಹದ ಮೂಲಕ ದೂರು ನೀಡದಿದ್ದರೂ ಅದು ಜವಾಬ್ದಾರಿ ತೆಗೆದುಕೊಳ್ಳಲಿದೆಯೇ?

ಲೈಂಗಿಕ ದೌರ್ಜನ್ಯ ಕಾಯ್ದೆಯನ್ನು ಕೂಲಂಕಷವಾಗಿ ಅವಲೋಕಿಸಿದರೆ ಬರಹದ ಮೂಲಕ ದೂರು ದಾಖಲಿಸುವುದು ಅನಿವಾರ್ಯ. ಔಪಚಾರಿಕ ದೃಷ್ಟಿಕೋನದಿಂದ ನೋಡುವುದಾದರೆಸಮಿತಿಯು ಆನ್ಲೈನ್ ಆರೋಪವನ್ನು ಪರಿಗಣಿಸಿ ತನಿಖೆ ಕೈಗೊಳ್ಳುವುದಿಲ್ಲ. ಆದರೆ ಆರೋಪವನ್ನು ಪರಿಗಣಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕೆಲವು ಉದ್ಯೋಗಿಗಳು/ ಸಮಿತಿಯಲ್ಲಿರುವವರು ತಾವಾಗಿಯೇ ದೂರು ದಾಖಲಿಸಿಕೊಂಡರೆ ತನಿಖೆಯಾಗಬಹುದು.

* ಸಮಿತಿಯ ತನಿಖೆ ಅಥವಾ ಫಲಿತಾಂಶವು ನನಗೆ ಸಮಾಧಾನ ನೀಡುತ್ತಿಲ್ಲ. ಏನು ಮಾಡಲಿ?

ಸಮಿತಿಯ ನಿರ್ಧಾರದ ಕುರಿತು 90 ದಿನಗಳ ಒಳಗಾಗಿ ಸಂಬಂಧಪಟ್ಟವರಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.