ಓಸ್ಲೊ: ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಮತ್ತು ವಿಶ್ವದ ಆಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರ ನಡುವಣ ಭಿನ್ನಾಭಿಪ್ರಾಯ ದೀರ್ಘಕಾಲದ್ದು. ಆದರೆ ಹೊಸ ವಿಶ್ವಚಾಂಪಿಯನ್ಷಿಪ್ನ ಅವರ ಕಲ್ಪನೆಗೆ ಫಿಡೆ ಒಮ್ಮತ ಸೂಚಿಸಿದೆ.

ಸಾಂಪ್ರದಾಯಿಕ ಮಾದರಿಯ ದೀರ್ಘ ಪಂದ್ಯಗಳಿಗಿಂತ ಹೆಚ್ಚಾಗಿ ಅಲ್ಪಾವಧಿಯ ಪಂದ್ಯಗಳನ್ನು ಆಡುವುದರ ಪರ ಕಾರ್ಲ್ಸನ್ ಬಲವಾಗಿ ನಿಂತವರು. ಇದೇ ಕಾರಣಕ್ಕೆ ವಿಶ್ವ ಚಾಂಪಿಯನ್ ಆಗಿದ್ದಾಗಲೇ ಅವರು ಇನ್ನು ಫೈನಲ್ನಲ್ಲಿ ತಾವು ಆಡುವುದಿಲ್ಲ ಎಂದು 2023ರಲ್ಲಿ ಹಿಂದೆಸರಿದಿದ್ದರು. ‘ತಮಗೆ ಮೊದಲಿನ ಉತ್ಸಾಹ ಉಳಿದಿಲ್ಲ’ ಎಂದು ಕಾರಣ ನೀಡಿದ್ದರು.

ಹೊಸ ಮಾದರಿಯ ‘ಟೋಟಲ್ ಚೆಸ್ ವರ್ಲ್ಡ್ ಚಾಂಪಿಯನ್ಷಿಪ್ ಟೂರ್’ ಅನ್ನು ನಾರ್ವೆ ಚೆಸ್ ಫೆಡರೇಷನ್ ಬುಧವಾರ ಅನಾವರಣಗೊಳಿಸಿತು. ಈ ಟೂರ್ನಡಿ ವರ್ಷದಲ್ಲಿ ನಾಲ್ಕು ಟೂರ್ನಿಗಳಿರುತ್ತವೆ. ಅಂತಿಮವಾಗಿ ಮೂರೂ ವಿಭಾಗಗಳಿಗೆ (ಫಾಸ್ಟ್ ಕ್ಲಾಸಿಕ್, ರ್ಯಾಪಿಡ್ ಮತ್ತು ಬ್ಲಿಟ್ಝ್) ಒಟ್ಟಾಗಿ ಒಬ್ಬ ಚಾಂಪಿಯನ್ ಆಟಗಾರ ಹೊರಹೊಮ್ಮಲಿದ್ದಾರೆ.

‘ಸಾಕಷ್ಟು ಯೋಚಿಸಿ, ಚೆಸ್ನ ಮತ್ತಷ್ಟು ಬೆಳವಣಿಗೆಗೆ ನೆರವಾಗುವಂತೆ ಈ ಚಾಂಪಿಯನ್ಷಿಪ್ ವಿನ್ಯಾಸಗೊಳಿಸಲಾಗಿದೆ’ ಎಂದು ಕಾರ್ಲ್ಸನ್ ಹೇಳಿರುವುದಾಗಿ ನಾರ್ವೆ ಚೆಸ್ ತಿಳಿಸಿದೆ.

ಇದು ಆಟಗಾರರ ಒಟ್ಟಾರೆ ಸಾಮರ್ಥ್ಯವನ್ನು ಅಳೆಯಲಿದೆ ಎಂದೂ 34 ವರ್ಷ ವಯಸ್ಸಿನ ಕಾರ್ಲ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಫಿಡೆ ಕೂಡ ಈ ಹೊಸ ವಿಶ್ವ ಚಾಂಪಿಯನ್ಷಿಪ್ ಟೂರ್ ಅನ್ನು ಸ್ವಾಗತಿಸಿದೆ.

ಮೂಲ ವಿಶ್ವ ಚಾಂಪಿಯನ್ಷಿಪ್ (ಕ್ಲಾಸಿಕಲ್ ಮಾದರಿಯ) ಮುಂದುವರಿಯಲಿದೆ ಎಂದೂ ಫಿಡೆ ಅಧ್ಯಕ್ಷ ಅರ್ಕಾಡಿ ದ್ವೊರ್ಕೊವಿಚ್ ತಿಳಿಸಿದ್ದಾರೆ. ಹೊಸ ಮಾದರಿ ಇದಕ್ಕೆ ಪೂರಕವಾಗಿರಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.