ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಸಿಲಿಂಡರ್ ಸ್ಫೋಟ; ಚಹಾ ಅಂಗಡಿ ಭಸ್ಮ

Published:
Updated:

ತಿಕೋಟಾ: ತಾಲ್ಲೂಕಿನ ಕಳ್ಳಕವಟಗಿ ತಾಂಡಾ ನಂಬರ್ ಒಂದರ ಕ್ರಾಸ್‌ನಲ್ಲಿ, ಸೋಮವಾರ ಸಿಲಿಂಡರ್‌ ಸ್ಫೋಟಗೊಂಡು ಚಹಾ ಅಂಗಡಿ (ಗೂಡಂಗಡಿ) ಸುಟ್ಟು ಕರಕಲಾಗಿದೆ.

ಕಿಶನ್ ರಾಮಸಿಂಗ್‌ ರಾಠೋಡ ಎಂಬುವರಿಗೆ ಸೇರಿದ ಹೋಟೆಲ್‌ನಲ್ಲಿ ಕಡ್ಡಿ ಕೊರೆದು ಗ್ಯಾಸ್‌ ಹಚ್ಚುವ ಸಂದರ್ಭ ಸಿಲಿಂಡರ್‌ ಸ್ಫೋಟಗೊಂಡಿದೆ.

ವಿಷಯ ತಿಳಿದೊಡನೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಿಂದಿಸುವ ಹೊತ್ತಿಗೆ ಇಡೀ ಗೂಡಂಗಡಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ಅಲ್ಪೋಪಾಹಾರದ ಸಾಮಗ್ರಿ, ದಿನಸಿ, ಕುರ್ಚಿ, ಟೇಬಲ್‌ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟಿವೆ ಎಂದು ಕಿಶನ್‌ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)