ಎಡ ಭುಜದಿಂದ ಇಳಿದ ಐದು ನೆರಿಗೆಗಳು ಕುರ್ತಾದ ಕೊನೆಯಿಂದ ಸೊಂಟದ ಬಲಭಾಗದತ್ತ ಹೊರಳುತ್ತವೆ. ಕುರ್ತಾಕ್ಕೆ ಅಸಾಮಾನ್ಯ ನೋಟ ನೀಡಿದ್ದೇ ಆ ನೆರಿಗೆಗಳು. ಭುಜದ ಬಳಿ ನೆರಿಗೆಗಳಿಗೆ ಮೇಲ್ಭಾಗದಲ್ಲೇ ಹೊಲಿಗೆ ಹಾಕಿರುವ ಕಾರಣ ಸಪಾಟಾಗಿವೆ. ಹುಡುಗರು ಮತ್ತು ಯುವಕರ ಮೆಚ್ಚಿನ ಕುರ್ತಾದ ಹೊಸ ವಿನ್ಯಾಸ ಹೀಗಿದೆ. ಹೆಸರು ‘ಕೌಲ್ ಕುರ್ತಾ’.

ವಸ್ತ್ರ ವಿನ್ಯಾಸಕಿ, ದೆಹಲಿಯ ಅಂಜು ಅಗರ್‌ವಾಲ್ ಹೊಸದಾಗಿ ಪರಿಚಯಿಸಿರುವ ವಿವಾಹ ಸಂಗ್ರಹದಲ್ಲಿ ಇದನ್ನು ‘ಡ್ರೇಪ್ ಕುರ್ತಾ’ ಎಂದೇ ಹೆಸರಿಸಿದ್ದಾರೆ. ನೆರಿಗೆಯ ವಿನ್ಯಾಸವಿರುವ ಕಾರಣಕ್ಕೆ ಈ ಹೆಸರು. ಮದುವೆ ಮನೆಗಳಲ್ಲಿ ಮದುಮಗ ಮತ್ತು ಅವನ ಅಕ್ಕಪಕ್ಕ ನಿಲ್ಲುವ ಸಹೋದರರಿಗೆ, ಸ್ನೇಹಿತರಿಗೆ ಪಕ್ಕಾ ಟ್ರೆಂಡಿ ಉಡುಗೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕುರ್ತಾಗಳು ಹುಡುಗರಿಗೆ ಸಾಂಪ್ರದಾಯಿಕ ನೋಟ ಕೊಡುವ ಉಡುಗೆ. ಹಬ್ಬಕ್ಕೂ, ಸಮಾರಂಭಗಳಿಗೂ ಕುರ್ತಾ ಧರಿಸುವುದು ಅವರ ಆದ್ಯತೆ. ಮದುವೆ ಮನೆಯ ಗಂಡು ಹೈಕಳೆಲ್ಲಾ ಕುರ್ತಾ, ಶೇರ್ವಾನಿ, ಜುಬ್ಬಾ ಪೈಜಾಮ, ಬ್ಲೇಜರ್, ಸೂಟು ಬೂಟು ಹೀಗೆ ತಮ್ಮಿಷ್ಟದ ಉಡುಗೆ ತೊಡುಗೆಗಳನ್ನು ಆಯ್ದುಕೊಂಡರೆ ಮದುಮಗನ ಅಣ್ಣ ತಮ್ಮಂದಿರು ಕೌಲ್ ಕುರ್ತಾವನ್ನು ಧರಿಸಿದರೆ ‘ಸ್ಟೈಲ್ ಸ್ಟೇಟ್‌ಮೆಂಟ್’ ಕೊಟ್ಟಂತಾಗುತ್ತದೆ. ಮದುಮಗನಿಗೂ ಕೌಲ್ ಕುರ್ತಾವೇ ಸೂಕ್ತ. ಎಲ್ಲರಿಗಿಂತ ಭಿನ್ನವಾಗಿ ಕಾಣಲು ಕೌಲ್ ಕುರ್ತಾದ ಮೇಲೆ,ಆಯ್ದ ಬಣ್ಣದ ಕೋಟ್ ಇಲ್ಲವೇ ವೇಸ್‌ಕೋಟ್ ಧರಿಸಿದರಾಯಿತು.

ಆನ್‌ಲೈನ್‌ನಲ್ಲಿ ಕೌಲ್ ಕುರ್ತಾಗಳಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಬಗೆ ಬಗೆಯ ಫ್ಯಾಬ್ರಿಕ್‌ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಆದರೆ ಈ ಕುರ್ತಾದ ಅಂದ ಇರೋದು ಅದರ ನೆರಿಗೆಗಳ ಅಚ್ಚುಕಟ್ಟುತನದಲ್ಲಿ. ಗಾಢ ಬಣ್ಣದ ಕುರ್ತಾದಲ್ಲಿ ನೆರಿಗೆಗಳು ಮಂಕಾಗುತ್ತವೆ. ಹಾಗಾಗಿ ಮಂದ ಅಥವಾ ತೆಳು ಛಾಯೆಯ ಕೌಲ್ ಕುರ್ತಾವನ್ನೇ ಆಯ್ಕೆ ಮಾಡಿಕೊಳ್ಳುವುದರಿಂದ, ಕುರ್ತಾದ ವಿನ್ಯಾಸ ಎದ್ದು ಕಾಣುತ್ತದೆ. ಕೌಲ್ ಕುರ್ತಾದ ಪೈಜಾಮ ಕೂಡಾ ಅದೇ ಬಣ್ಣದ್ದಾಗಿರುವುದು ವಿಶೇಷ.

ವಸ್ತ್ರ ವಿನ್ಯಾಸಕರ ಸಂಗ್ರಹದ ಕೌಲ್ ಕುರ್ತಾಗಳ ಬೆಲೆ ಕನಿಷ್ಠ ₹6,500ರಿಂದ ಆರಂಭವಾಗುತ್ತದೆ. ಇದು ಫ್ಯಾಬ್ರಿಕ್‌ನ ಗುಣಮಟ್ಟ ಮತ್ತು ಹೊಲಿಗೆ, ಬಳಸಿರುವ ಗುಂಡಿಗಳು, ತೋಳಿನ ಉದ್ದಳತೆ, ಕಾಲರ್‌ನ ಮಾದರಿ ಹೀಗೆ ವಿವಿಧ ಅಂಶಗಳು ಬೆಲೆಯನ್ನು ನಿರ್ಧರಿಸುತ್ತವೆ.

‘ಜಾಕೆಟ್ ಆರಿಸುವಾಗಲೂ ಜಾಣತನ ಮತ್ತು ಸೌಂದರ್ಯಪ್ರಜ್ಞೆ ತೋರಬೇಕು. ಉದಾಹರಣೆಗೆ, ಕೆನೆಬಣ್ಣದ ಕೌಲ್ ಕುರ್ತಾ ಮತ್ತು ಪೈಜಾಮದ ಮೇಲೆ ಗಂಧದ ಬಣ್ಣದ ಜಾಕೆಟ್, ತಿಳಿಗುಲಾಬಿ ಬಣ್ಣದ ಕೌಲ್ ಕುರ್ತಾ ಪೈಜಾಮಕ್ಕೆ ಗುಲಾಬಿ ಬಣ್ಣದ್ದೇ ಹೂಬಳ್ಳಿಯಂತಹ ವಿನ್ಯಾಸವಿರುವ ಜಾಕೆಟ್ ಸೂಕ್ತ. ಕುರ್ತಾ ಗ್ರೀಸ್ ಬಣ್ಣದ್ದಾದರೆ ಅದೇ ಬಣ್ಣ ಮತ್ತು ತಿಳಿ ನೀಲಿ (ಇಂಡಿಗೊ) ವಿನ್ಯಾಸವಿರುವ ಜಾಕೆಟ್ ತುಂಬಾ ಚೆನ್ನಾಗಿರುತ್ತದೆ’ ಎಂದು ವಸ್ತ್ರವಿನ್ಯಾಸಕ ಶಂತನು ಫ್ಯಾಷನ್ ಶೋವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕೌಲ್ ಕುರ್ತಾ ಅಥವಾ ಡ್ರೇಪ್ ಕುರ್ತಾವನ್ನು ಮದುವೆ ನಿಶ್ಚಿತಾರ್ಥ, ಮದರಂಗಿ ಶಾಸ್ತ್ರ, ಮದುವೆ, ಆರತಕ್ಷತೆ ಹೀಗೆ ವಿಶಿಷ್ಟ ಸಂದರ್ಭಗಳಿಗಷ್ಟೇ ಆಯ್ದುಕೊಳ್ಳಿ. ಜುಬ್ಬಾ– ಪೈಜಾಮ, ಸೂಟು ಬೂಟು, ಕೋಟು, ಶೆರ್ವಾನಿ ಧರಿಸಿ ಗುಂಪಿನಲ್ಲಿ ಲೀನವಾಗುವುದಕ್ಕಿಂತ ಮದುಮಕ್ಕಳ ಫ್ಯಾಷನ್ ಜಗತ್ತಿನಲ್ಲಿ ನಿಮ್ಮ ಉಡುಪನ್ನು ನೆನಪಿಟ್ಟುಕೊಳ್ಳುವಂತೆ ಮಾಡಬಹುದು.

ಜಾಕೆಟ್, ವೇಸ್‌ಕೋಟ್ ಹೀಗಿರಲಿ

ಬಿಳಿ ಅಥವಾ ಕೆನೆ ಬಣ್ಣದ ಕೌಲ್ ಕುರ್ತಾ ಮತ್ತು ಪೈಜಾಮದೊಂದಿಗೆ (ಚೂಡಿದಾರ್) ತಿಳಿ ನೀಲಿ ಬಣ್ಣದ, ಬಿಳಿ ಅಥವಾ ಕೆನೆ ಬಣ್ಣದ ಸರಳ ವಿನ್ಯಾಸವಿರುವ ವೇಸ್‌ಕೋಟ್ ತುಂಬಾ ಚೆನ್ನಾಗಿ ಒಪ್ಪುತ್ತದೆ. ಆದರೆ ಕೆಲವು ಗಾಢ ಬಣ್ಣಗಳ ಕೌಲ್ ಕುರ್ತಾಗಳಿಗೆ ಬಿಳಿ ಚೂಡಿದಾರ್ ಮಾತ್ರ ಸೂಕ್ತ ಎನಿಸುತ್ತದೆ. ಪಾಚಿ ಹಸಿರು, ಪಚ್ಚೆಕಲ್ಲನ್ನು ಹೋಲುವ ಮೋಸ್ ಗ್ರೀನ್, ಕಾಫಿ ಪುಡಿ ಮತ್ತು ತಾಮ್ರದ ಬಣ್ಣವನ್ನು ಎರಕ ಹೊಯ್ದಂತಹ ಸೆಡಾರ್ ಬ್ರೌನ್, ರಾವೆನ್ ಬ್ಲ್ಯಾಕ್, ಗ್ರೀಸ್ ಬ್ಲ್ಯಾಕ್ ಎಂಬ ವಿಶಿಷ್ಟ ಕಪ್ಪು ಬಣ್ಣದ ಕೌಲ್ ಕುರ್ತಾಗಳಿಗೆ ಅದೇ ಬಣ್ಣದ್ದಕ್ಕಿಂತ ಬಿಳಿ ಚೂಡಿದಾರ್ (ಪೈಜಾಮ) ಹೊಂದುತ್ತದೆ. ಆದರೆ ಕಂದು, ಲೋಹದ ಬಣ್ಣ, ಯಾವುದೇ ಬಣ್ಣದ ವಿವಿಧ ಛಾಯೆಗಳ ಕೌಲ್ ಕುರ್ತಾಗೆ ಮಾತ್ರ ಅದೇ ಬಣ್ಣದ ಪೈಜಾಮ ಧರಿಸುವುದು ಸೂಕ್ತ ಎಂಬುದು ಅಂಜು ಅಗರ್‌ವಾಲ್ ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.