* ಅರ್ಧಭಾಗ ಡ್ರ್ಯಾಗನ್ ಹಣ್ಣನ್ನು ನುಣ್ಣಗೆ ರುಬ್ಬಿ ಅದಕ್ಕೆ ಒಂದು ಟೀ ಚಮಚ ಮೊಸರು ಸೇರಿಸಿ ಫೇಸ್ ಪ್ಯಾಕ್ ತಯಾರಿಸಬೇಕು. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಇದನ್ನು ಲೇಪಿಸಿ 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದು ಹತ್ತಿ ಬಟ್ಟೆಯಿಂದ ಒರೆಸಿದರೆ ಮುಖದಲ್ಲಿನ ವಯಸ್ಸಾದ ಲಕ್ಷಣಗಳು, ನೆರಿಗೆಗಳು, ಕಪ್ಪು ಕಲೆಗಳು, ಸುಕ್ಕಿನ ಲಕ್ಷಣಗಳು ಕಡಿಮೆಯಾಗುತ್ತವೆ. ವಾರಕ್ಕೊಮ್ಮೆ ಈ ರೀತಿ ಮಾಡುವುದು ಪರಿಣಾಮಕಾರಿ.

* ಕಾಲು ಭಾಗ ಡ್ರ್ಯಾಗನ್ ಹಣ್ಣನ್ನು ಪೇಸ್ಟ್ಮಾಡಿ ಹತ್ತಿಯಲ್ಲಿ ಅದ್ದಿ ಮೊಡವೆಗಳ ಮೇಲೆ ಇಡಬೇಕು. 20 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುವುದರಿಂದ ಮೊಡವೆಗಳು ಕ್ರಮೇಣ ಕಡಿಮೆಯಾಗುತ್ತದೆ.

* ಈ ಹಣ್ಣಿನ ಕಾಲು ಭಾಗವನ್ನು ತೆಗೆದು ಪೇಸ್ಟ್ ತಯಾರಿಸಿಕೊಳ್ಳಬೇಕು. ಅದಕ್ಕೆ ವಿಟಮಿನ್ ‘ಇ’ ಮಾತ್ರೆಗಳನ್ನು ಬೆರೆಸಿ, ಮಿಶ್ರಣವನ್ನು ಸನ್ಬರ್ನ್ ಆದ ತ್ವಚೆಯ ಭಾಗಕ್ಕೆ ಹಚ್ಚಬೇಕು. 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ಎರಡು ದಿನಗಳಿಗೊಮ್ಮೆ ಹೀಗೆ ಮಾಡುವುದರಿಂದ ಕ್ರಮೇಣ ಸನ್ಬರ್ನ್ನಿಂದಾದ ಕಲೆಗಳು ದೂರಾಗುತ್ತವೆ.

* ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಡ್ರ್ಯಾಗನ್ ಹಣ್ಣು ಸೇವಿಸುವುದು ತ್ವಚೆಯ ಆರೋಗ್ಯಕ್ಕೆ ಉತ್ತಮ. ಡಯೆಟ್ ಮಾಡುವವರಿಗೂ ಉಪಯುಕ್ತ. ಡ್ರ್ಯಾಗನ್ ಹಣ್ಣಿನಿಂದ ಜ್ಯೂಸ್ ತಯಾರಿಸಿ ನಿತ್ಯ ಬೆಳಿಗ್ಗೆ ಕುಡಿಯುವುದರಿಂದ ದೇಹದಲ್ಲಿನ ಟಾಕ್ಸಿನ್ ಹೊರಹೋಗುತ್ತದೆ. ಇದರಿಂದ ಚರ್ಮದ ಕಾಂತಿ ವೃದ್ಧಿಸುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಅಂಶವು ತ್ವಚೆಯ ಹೊಳಪಿಗೆ ಸಹಕಾರಿ.

* ಡ್ರ್ಯಾಗನ್ ಹಣ್ಣಿನ ಪೇಸ್ಟ್ಗೆ, ಜೇನುತುಪ್ಪ, ಗುಲಾಬಿ ಜಲವನ್ನು ಸೇರಿಸಿ ಮುಖಕ್ಕೆ ಮಸಾಜ್ ಮಾಡಬೇಕು. ನಿತ್ಯ ಹೀಗೆ ಮಾಡುವುದರಿಂದ ಒಣ ತ್ವಚೆ ಇರುವವರಿಗೆ ಉತ್ತಮ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇದು ಪರಿಣಾಮಕಾರಿ.

* ಕೂದಲ ಆರೈಕೆಗೂ ಈ ಹಣ್ಣು ಸಹಕಾರಿ. ಎರಡು ತಾಜಾ ಹಣ್ಣಗಳನ್ನು ತೆಗೆದುಕೊಂಡು ನುಣ್ಣನೆಯ ಪೇಸ್ಟ್ ತಯಾರಿಸಬೇಕು. ಕೂದಲು ಮತ್ತು ತಲೆಯ ಭಾಗಕ್ಕೆ ಮಸಾಜ್ ಮಾಡಬೇಕು. 15 ನಿಮಿಷಗಳ ನಂತರ ಶ್ಯಾಂಪೂ ಬಳಸಿ ಕೂದಲು ತೊಳೆಯಬಹುದು. ಒಂದು ವಾರ ಹೀಗೆ ಮಾಡುವುದರಿಂದ ಕೂದಲಿಗೆ ನೈಸರ್ಗಿಕ ಬಣ್ಣ ಬರುತ್ತದೆ. ಕೇಶ ಕಾಂತಿಯುತವಾಗುತ್ತದೆ.

* ಡ್ರ್ಯಾಗನ್ ಹಣ್ಣಿನಲ್ಲಿ ಯಥೇಚ್ಚವಾಗಿ ಕಬ್ಬಿಣದ ಅಂಶ ಇರುತ್ತದೆ. ಹಾಗಾಗಿ ಈ ಹಣ್ಣಿನ ನಿಯಮಿತ ಸೇವನೆ ಕೂದಲ ಬೆಳವಣಿಗೆಗೆ ಸಹಕಾರಿ. ಈ ಜ್ಯೂಸ್ಗೆ ಜೇನುತುಪ್ಪ, ಕಾಳು ಮೆಣಸಿನ ಪುಡಿ, ಬೆರೆಸಿ ಸೇವಿಸಬಹುದು.

* ಡ್ರ್ಯಾಗನ್ ಹಣ್ಣಿಗೆ ಮೊಸರು, ಮೆಂತ್ಯೆಯ ಮಿಶ್ರಣವನ್ನು ಸೇರಿಸಿ ತಯಾರಿಸಿದ ಮಿಶ್ರಣವನ್ನು ಕೂದಲಿಗೆ ಮಾಸ್ಕ್ ಆಗಿ ಬಳಸಬಹುದು. 20 ನಿಮಿಷಗಳ ನಂತರ ಕೂದಲು ತೊಳೆಯುವುದರಿಂದ ಹೆರಳು ಸೊಂಪಾಗಿ ಬೆಳೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.