ನೀರಿಗಾಗಿ ಹಾಹಾಕಾರ, ಖಾಲಿ ಕೊಡ ಹಿಡಿದು ಹೋರಾಡುವ ಜನ, ಮಳೆ ಕಾಣದೆ ಬೆಳೆ ಬರದೆ ಬೀದಿಗೆ ಬಿದ್ದ ರೈತರು... ಇವರ ಸಮಸ್ಯೆಗೆ ಸ್ಪಂದಿಸಲು ಬರುವ ಜಿಲ್ಲಾಧಿಕಾರಿ, ರೈತರಿಗಾಗಿ ಸರ್ಕಾರದ ವಿರುದ್ಧವೇ ಹೋರಾಟಕ್ಕೆ ಇಳಿಯುತ್ತಾರೆ. ಇದು ತಮಿಳು ‘ಆರಮ್’ ಸಿನಿಮಾದ ಟ್ರೇಲರ್. ದಿಟ್ಟ ಜಿಲ್ಲಾಧಿಕಾರಿ ಪಾತ್ರದಲ್ಲಿ ನಯನಾ ತಾರಾ ಕಾಣಿಸಿಕೊಂಡಿದ್ದಾರೆ.