‘ಟ್ರಾಫಿಕ್ ಸಿಗ್ನಲ್ಗಳಲ್ಲಿ ಹೆಣ್ಣು ಮತ್ತು ಗಂಡು ಕೈಕೈ ಹಿಡಿದುಕೊಂಡು ಕುಣಿಯಬೇಕು, ವಾಹನಗಳು ನಿಂತಿರುವಷ್ಟು ಹೊತ್ತೂ ಏನಾದರೊಂದು ಕಸರತ್ತು ಮಾಡುವ ಮೂಲಕ ವಾಹನ ಸವಾರರ ಕಣ್ಮನ ತಣಿಸಬೇಕು’ ಎಂಬುದು ಈ ಹೊಸ ಯೋಜನೆಯ ಒಟ್ಟು ಸಾರಾಂಶ. ಆದರೆ ಈ ಹುಡುಗ ಹುಡುಗಿ ಡಿಜಿಟಲ್ ಆಕೃತಿಗಳಷ್ಟೇ. ಪ್ರಸ್ತುತ, ತೈವಾನ್ನ ಟ್ರಾಫಿಕ್ ಸಿಗ್ನಲ್ಗಳಲ್ಲಿ ಗಂಡಿನ ಡಿಜಿಟಲ್ ಚಿತ್ರ ಮಾತ್ರ ಇದೆ. ಹೊಸ ವರ್ಷದಲ್ಲಿ ಜಾರಿಗೆ ಬರುವ ಯೋಜನೆಯನ್ವಯ ಗಂಡು ಮತ್ತು ಹೆಣ್ಣಿನ ಚಿತ್ರ ಇರುತ್ತದೆ. ತಮಾಷೆಯೆಂದರೆ ಸಿಗ್ನಲ್ ದೀಪ ಹಸಿರು ಬಣ್ಣಕ್ಕೆ ತಿರುಗಿದಾಗ ಈ ಜೋಡಿ ಪರಸ್ಪರ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುವಂತೆ, ಕೆಂಪು ಬಣ್ಣ ಬಂದಾಗ ಹುಡುಗ ಮಂಡಿ ಊರಿ ಕುಳಿತು, ಮತ್ತೊಂದು ಕೈಯಲ್ಲಿ ಹೂವಿನ ಗುಚ್ಛ ಹಿಡಿದು ಹುಡುಗಿಗೆ ಪ್ರಪೋಸ್ ಕೂಡಾ ಮಾಡಲಿದ್ದಾನೆ!