ಕೆಫೀನ್ ಅಂಶ ಇರುವ ಶಕ್ತಿ ವರ್ಧಕ ಪೇಯಗಳ ಸೇವನೆಯಿಂದ ವೇಗವಾದ, ಅನಿಯಮಿತ ಹೃದಯ ಬಡಿತ ಉಂಟಾಗುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ. ಅನುವಂಶೀಯವಾಗಿ ಹೃದಯ ಸಮಸ್ಯೆ (congenital long QT syndrome –LQTS) ಇದ್ದರೆ ಈ ಸಮಸ್ಯೆ ಇನ್ನೂ ಬೇಗ ಉಂಟಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಹೃದಯದ ರಕ್ತನಾಳಗಳು ಶಕ್ತಿ ವರ್ಧಕ ಪೇಯಗಳಲ್ಲಿ ಇರುವ ಕೆಫೀನ್ ಅಂಶವನ್ನು ಬೇಗ ಹೀರಿಕೊಳ್ಳುತ್ತವೆ. ಹೀಗಾಗಿ ಹೃದಯ ಸಮಸ್ಯೆಗಳು ಹೆಚ್ಚು. ಯೂನಿವರ್ಸಿಟಿ ಆಫ್ ಸಿಡ್ನಿ ಮತ್ತು ಆಸ್ಟ್ರೇಲಿಯಾದ ಸೆಂಟೆನರಿ ಇನ್ಸ್ಟಿಟ್ಯೂಟ್ನ ಸಂಶೋಧನಾ ತಂಡ ಈ ಮಾಹಿತಿಯನ್ನು ಹೊರಹಾಕಿದೆ. ಟೌರೀನ್ ಮತ್ತು ಕೆಫೀನ್ ಅಂಶಗಳು ರಕ್ತದ ಹರಿವಿನ ಮೇಲೆ ಒತ್ತಡ ಉಂಟುಮಾಡುತ್ತವೆ. ಅನುವಂಶೀಯವಾಗಿ ಹೃದಯ ಸಮಸ್ಯೆ ಇರುವವರು ಈ ಶಕ್ತಿ ವರ್ಧಕ ಪೇಯಗಳನ್ನು ಸೇವಿಸುವುದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಶಕ್ತಿ ವರ್ಧಕ ಪೇಯಗಳನ್ನು ನಿಯಮಿತವಾಗಿ ಸೇವಿಸುವ 16 ರಿಂದ 50 ವಯಸ್ಸಿನೊಳಗಿನ ಅರ್ಧದಷ್ಟು ವ್ಯಕ್ತಿಗಳು ಬೀಟಾ ಬ್ಲಾಕರ್ ಥೆರಪಿಯನ್ನು ಮಾಡಿಸಿಕೊಂಡಿದ್ದಾರೆ.
‘ಅನುವಂಶೀಯವಾಗಿ ಹೃದಯ ಸಮಸ್ಯೆ ಇರುವ ವ್ಯಕ್ತಿಗಳು ಶಕ್ತಿ ವರ್ಧಕ ಪೇಯಗಳನ್ನು ಸೇವಿಸಲೇಬಾರದು ಎಂದು ಸೂಚನೆ ನೀಡಿದ್ದೇವೆ’ ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಸಿಡ್ನಿ ಪ್ರಾಧ್ಯಾಪಕ ಕ್ರಿಸ್ಟೋಫರ್. ಈ ಸಂಶೋಧನಾ ವರದಿಯು ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾಗಿದೆ.