ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನ್ನೆಸ್ ದಾಖಲೆ ಕನಸಿನಲ್ಲಿ ಫರಾನ್

Last Updated 27 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಕೋರಮಂಗಲ ನಿವಾಸಿ ಫರಾನ್ ಅವರಿಗೆ ಈಗ 28 ವರ್ಷ. ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಇವರು  ಎಂಬಿಎ ಪದವೀಧರ. ಬಾಲ್ಯದಿಂದಲೂ ಏನಾದರೊಂದು  ದಾಖಲೆ ಮಾಡಬೇಕೆಂಬ ಕನಸು ಫರಾನ್ ಅವರದು. ಕನಸಿದ್ದರೆ ಸಾಲದು ಅದೃಷ್ಟವೂ ಒಲಿಯಬೇಕು ಎನ್ನುವುದು ಈಗ ಫರಾನ್ ಅವರ ಅನುಭವದ ಮಾತು.

ಇವರ ಗಿನ್ನೆಸ್ ದಾಖಲೆ ಪ್ರಯತ್ನಕ್ಕೆ ಬರೋಣ. ಇವರ ಬಳಿ ಎಸ್ಟೀಂ ಕಾರೊಂದಿದೆ. ಎಲ್ಲರಂತೆ ಕಾರು ಓಡಿಸಿದರೆ ಫರಾನ್ ಹತ್ತರಲ್ಲಿ ಹನ್ನೊಂದನೆಯವ ಮಾತ್ರ. ಅದಕ್ಕೆ ಇವರು ಸ್ವಲ್ಪ ವಿಭಿನ್ನವಾಗಿ ಕಾರು ಓಡಿಸಿ ನೋಡಿದರು. ಪರವಾಗಿಲ್ಲ! ಬಲಬದಿಯಲ್ಲಿ ಕುಳಿತು ಎಡಬದಿಯಲ್ಲಿರುವ ಸ್ಟಿಯರಿಂಗ್ ಹಿಡಿದು, ಕಾಲು-ಕೈನಲ್ಲಿ ಬ್ಯಾಲೆನ್ಸ್ ಮಾಡುತ್ತಾ ಕಾರು ಓಡಿಸಬಹುದು.

ಪ್ರಾರಂಭದಲ್ಲಿ ಕಷ್ಟ ಎನಿಸಿದ ಈ ವಿದ್ಯೆ ಈಗ ನೀರು ಕುಡಿದಷ್ಟು ಸಲೀಸು.  ಈ ನಂಟಿಗೆ 8 ವರ್ಷಗಳ ಅನುಭವ. ಬೆಂಗಳೂರಿನಂತಹ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಇವರ ಕಾರು ಸರಾಗವಾಗಿ ಸಾಗುತ್ತದೆ. ಆದರೆ, ಎದುರಿನಿಂದ ಬರುವವರು ಚಾಲಕನಿಲ್ಲದೆ ಕಾರು ಮುಂದೆ ಹೋಗುತ್ತಿದೆಯೇನೋ ಎಂದು ಗಲಿಬಿಲಿಗೊಳ್ಳುತ್ತಾರೆ.
 
ಬ್ರೇಕ್, ಕ್ಲಚ್, ಎಕ್ಸಲೇಟರ್ ಕಾಲಿಗೆಟುಕುವಂತೆ ಓರೆಯಾಗಿ ಕುಳಿತು ಫರಾನ್ ಚಾಲನೆ ಮಾಡುತ್ತಾರೆ. ಇದುವರೆಗೆ ಯಾವುದೇ ಪುಟ್ಟ ಅಪಘಾತ ಕೂಡ ಸಂಭವಿಸಿಲ್ಲ.  ಫರಾನ್ ಅವರ ಚಾಲನೆ ನೋಡಿ ಕೆಲವು  ಪರಿಚಿತರು `ಏ ಕ್ಯಾ ಕಮಾಲ್ ಹೆ~ ಎಂದು ಹುಬ್ಬೇರಿಸುತ್ತಾರೆ.

ತಂದೆ ಸಂಶುದ್ದೀನ್ ಖಾನ್ ಸೆಕೆಂಡ್ ಹ್ಯಾಂಡ್ ಕಾರ್‌ಗಳನ್ನು ಮಾರಾಟ ಮಾಡುತ್ತಿದ್ದರಿಂದ ಈ ಆಸಕ್ತಿ ಬೆಳೆಯಲು ಕಾರಣ ಎನ್ನುತ್ತಾರೆ. ಅಪ್ಪನಿಂದ ಬೈಸಿಕೊಂಡಿದ್ದೂ ಉಂಟು ಎನ್ನುತ್ತಾರೆ. ಇತ್ತೀಚೆಗೆ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಊಟಿಯವರೆಗೆ ಈ ರೀತಿ ಬಲಬದಿಯಲ್ಲಿ ಕುಳಿತು 400 ಕಿ.ಮೀ ಕಾರು ಚಾಲನೆ ಮಾಡಿ ಹೊಸ ಸಾಧನೆಗೆ ಮುನ್ನಡಿ ಬರೆದಿದ್ದಾರೆ.

ಕನ್ಯಾಕುಮಾರಿಯಿಂದ ಲಡಾಖ್ ವರೆಗೆ ಈ ರೀತಿ ಚಾಲನೆ ಮಾಡಿ ಗಿನ್ನೆಸ್ ದಾಖಲೆ ಮಾಡುವ ಉತ್ಸಾಹದಲ್ಲಿ ಇದ್ದಾರೆ. ಗಿನ್ನೆಸ್ ತಂಡವೂ ಇವರ ಕನಸಿಗೆ ಸ್ವಾಗತ ಕೋರಿದೆ. ಫರಾನ್ ಅವರಿಗೆ ಲಿಮ್ಕಾ ನಿಯತಕಾಲಿಕ ಬೆನ್ನು ತಟ್ಟಿದೆ. ತಮ್ಮ ಗುರಿ ಸಾಧನೆಗೆ ಪ್ರಾಯೋಜಕರನ್ನು ನಿರೀಕ್ಷಿಸುತ್ತಿದ್ದಾರೆ ಫರಾನ್ . ಆಸಕ್ತರು  98456 54222 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT